»   » 'ಗ್ಲಾಮರ್' ಕಳಚಿ 'ಗರ್ಭಿಣಿ'ಯಾದ ರಾಧಿಕಾಗೆ ಬಹುಪರಾಕ್!

'ಗ್ಲಾಮರ್' ಕಳಚಿ 'ಗರ್ಭಿಣಿ'ಯಾದ ರಾಧಿಕಾಗೆ ಬಹುಪರಾಕ್!

By: ಸುಮಾ ಮುದ್ದಾಪುರ
Subscribe to Filmibeat Kannada

ರಾಧಿಕಾ ಆಪ್ಟೆ, ಬಹುಭಾಷಾ ತಾರೆ. ಸುಜೋಯ್ ಘೋಷ್ ನಿರ್ದೇಶನದ "ಅಹಲ್ಯ" ಅನ್ನೋ ಕಿರುಚಿತ್ರದ ಮೂಲಕ ಸಿನಿ ರಂಗದಲ್ಲಿ ಭಾರೀ ಸದ್ದು ಮಾಡಿದ ಗ್ಲಾಮರಸ್ ನಟಿ ಈಕೆ.

ಸದ್ಯ ಸೂಪರ್ ಸ್ಟಾರ್ ರಜನಿಕಾಂತ್‌ರ ಬಹುನಿರೀಕ್ಷಿತ ಚಿತ್ರ ಕಬಾಲಿಯಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಈಕೆಯ ಸಾಮಾಜಿಕ ಕಳಕಳಿ ಎಷ್ಟಿದೆ ಎಂದರೆ ತಾವು ಗ್ಲಾಮರಸ್ ನಟಿ ಎನ್ನುವುದನ್ನು ಮತ್ತು ತಮಗಿರುವ ಇಮೇಜ್ ಅನ್ನು ಪಕ್ಕಕ್ಕಿಟ್ಟು ಗರ್ಭಿಣಿಯಾಗಿ ಸಾಮಾಜದ ಡೊಂಕು ತಿದ್ದಲು ಪ್ರಯತ್ನಿಸಿದ್ದಾರೆ.

ಏನು ಆಶ್ಚರ್ಯ ಆಗ್ತಾ ಇದ್ಯಾ...? ರಾಧಿಕಾ ಆಪ್ಟೆ ಗರ್ಭಿಣಿಯಾಗಿ ಬಿಟ್ರಾ ಅಂತ ಅಚ್ಚರಿ ಆಗ್ತಾ ಇದ್ಯಾ...? ಸ್ವಲ್ಪ ತಡೀರಿ, ರಾಧಿಕಾ ಆಪ್ಟೆ ಗರ್ಭಿಣಿಯಾಗಿದ್ದು, ಒಂದು ಜಾಹಿರಾತಿನಲ್ಲಿ.

ಹೌದು, ಹೀರೋಯಿನ್ ಆಗಿ ಮಿಂಚುತ್ತಿರುವ ರಾಧಿಕಾ ಆಪ್ಟೆ ಮಿಂಟ್ರಾ ಇ-ಕಾಮರ್ಸ್ ಕಂಪನಿಯ ವಸ್ತ್ರ ವಿನ್ಯಾಸ ಬ್ರ್ಯಾಂಡ್ ಅನೌಕ್ ಪ್ರಚಾರಕ್ಕಾಗಿ ಬಂದಿರುವ ಜಾಹೀರಾತಿನಲ್ಲಿ ಗರ್ಭಿಣಿಯಾಗಿ ನಟಿಸಿದ್ದಾರೆ.

Actress Radhika Apte as pregnant working woman Ad goes viral

ಹೆಣ್ಣು ಗರ್ಭಧರಿಸಿ ಮತ್ತೊಂದು ಜೀವಕ್ಕೆ ಜೀವವನ್ನಿತ್ತಾಗ ಮಾತ್ರ ಹೆಣ್ತನ ಅನ್ನೋದು ಪರಿಪೂರ್ಣ ಅಂತಾರೆ ಹಿರಿಯರು. ಹೆಣ್ಣು ಗರ್ಭ ಧರಿಸೋದು, ಮತ್ತೊಂದು ಜೀವದ ಸೃಷ್ಟಿಗೆ ಕಾರಣವಾಗೋದು ಹೆಣ್ತನದ ಹಿರಿಮೆ. ಹೆಣ್ಣಿ ಮಾಂಸ ಖಂಡಗಳ ಜತೆ ಇನ್ನೊಂದು ಜೀವದ ಸೃಷ್ಟಿ.

ಈ ಪ್ರಕ್ರಿಯೆ ಮತ್ತೊಂದು ಜೀವದ ಸೃಷ್ಟಿ ಮಾತ್ರವಲ್ಲ, ಅದು ಆಕೆಗೂ ಮರು ಹುಟ್ಟು. ವ್ಹಾ ಇದು ಎಷ್ಟೊಂದು ಅದ್ಭುತ ಅಲ್ವಾ. ಆದ್ರೆ ಅದೇ ಹೆಣ್ಣು ಉದ್ಯೋಗದಲ್ಲಿದ್ದು ಗರ್ಭಿಣಿಯಾದರೆ, ಕೆಲವೊಂದು ಆಫೀಸ್‌ಗಳಲ್ಲಿ ಆಕೆಯನ್ನು ಒಂದು ರೀತಿ ಅಂಗವಿಕಲರಂತೆ ಕಾಣಲಾಗುತ್ತದೆ.

ಆಕೆಯನ್ನು ಹೀಯಾಳಿಸುವುದು, ತಾರತಮ್ಯ ಮನೋಭಾವನೆಯಿಂದ ನೋಡುವುದು ಹೆಚ್ಚಾಗುತ್ತಿದೆ. ಹೆಣ್ಣು ಗರ್ಭಧರಿಸಿದ್ದಾಗ ಆಕೆಗೆ ಮೊದಲಿನಂತೆಯೇ ದೈಹಿಕವಾಗಿ ಕೆಲಸ ಮಾಡಲು ಆಗುವುದಿಲ್ಲ ನಿಜ. ಆದರೆ ಆಕೆಯಲ್ಲಿ ಏನೋ ಅಂಗವೈಕಲ್ಯವಿದೆ ಎಂದು ನೋಡುವುದರಿಂದ ಆಕೆಯ ಮಾನಸಿಕ ಆರೋಗ್ಯ ಹದಗೆಡುತ್ತದೆ. ಅವರಲ್ಲಿ ಅವರ ಬಗ್ಗೆಯೇ ಕೀಳರಿಮೆ ಉಂಟಾಗುತ್ತದೆ. ಕಚೇರಿಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಗರ್ಭ ಧರಿಸುವುದರ ಬಗ್ಗೆ ಒಂದು ನಕಾರಾತ್ಮಕ ಅಭಿಪ್ರಾಯ ಮೂಡುತ್ತದೆ.

ಹೀಗೆ ಕೆಲವೊಂದು ಕಚೇರಿಗಳಲ್ಲಿ ಮಹಿಳೆಯ ಗರ್ಭಾವಸ್ಥೆಯಲ್ಲಿ ಆಕೆಗೆ ಆಗುವ ಕಿರಿಕಿಯನ್ನು ಆಧರಿಸಿ ಮಿಂಟ್ರಾ ಇ-ಕಾಮರ್ಸ್ ಕಂಪನಿ ಜಾಹಿರಾತು ರೂಪಿಸಿದೆ. ಈ ಜಾಹಿರಾತಿನಲ್ಲಿ ಉದ್ಯೋಗಸ್ಥ ಮಹಿಳೆಯರು ಗರ್ಭಿಣಿಯಾದಾಗ ಅವರಲ್ಲಿ ಉಂಟಾಗುವ ಕೀಳರಿಮೆಯನ್ನು ಹೋಗಲಾಡಿಸುವ ಮತ್ತು ಗರ್ಭ-ತಾಯ್ತನದ ಕುರಿತು ಅವರು ಹೆಮ್ಮೆ ಪಡುವಂತೆ ಪ್ರೇರೇಪಿಸುವ ಸಂದೇಶ ನೀಡಲಾಗಿದೆ.

ಈ ಜಾಹಿರಾತಿನಲ್ಲಿ ನಟಿಸಿರುವ ರಾಧಿಕಾ ಆಪ್ಟೆ ಉದ್ಯೋಗಸ್ಥ ಗರ್ಭಿಣಿ ಮಹಿಳೆಯಾಗಿ ಅಭಿನಯಿಸಿದ್ದಾರೆ. ಗರ್ಭಿಣಿಯರನ್ನು ಅಂಗವಿಕಲರಂತೆ ಕಾಣುವ ತಮ್ಮ ಬಾಸ್‌ಗೆ ರಾಧಿಕಾ ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಕಾಳಜಿಗಾಗಿ ಹೀರೋಯಿನ್ ಆಗಿ ಮಿಂಚುತ್ತಿರುವ ರಾಧಿಕಾ ಆಪ್ಟೆ ಗರ್ಭಿಣಿಯಾಗಿ ಅಭಿನಯಿಸಿರೋದು ಮಾತ್ರ ಮೆಚ್ಚುಗೆಗೆ ಪಾತ್ರವಾಗಿದೆ.

English summary
"Ahalya" fame actress Radhika Apte in her new advertisement for e commerce giant Myntra and apparel brand Anouk, she has addressed the bias being faced by pregnant women in Corporate world.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada