For Quick Alerts
  ALLOW NOTIFICATIONS  
  For Daily Alerts

  'ಸುಶಾಂತ್ ಸಿಂಗ್ ನನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬರ್ತಾನೆ' ಎಂದ ಬಾಲಿವುಡ್ ನಟಿ

  |

  ಬಾಲಿವುವ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಾಲಿವುಡ್ ನಲ್ಲಿ ಕೊಲಾಹಲವೆ ಸೃಷ್ಟಿಸಿರುವ ಸುಶಾಂತ್ ಸಿಂಗ್ ಆತ್ಮಹತ್ಯೆ ಅನೇಕರಿಗೆ ಸಂಕಷ್ಟತಂದೊಡ್ಡಿದೆ. ಸುಶಾಂತ್ ಸಿಂಗ್ ಕಳೆದುಕೊಂಡು ಕುಟುಂಬದವರು, ಸ್ನೇಹಿತರು ದುಃಖದಲ್ಲಿದ್ದಾರೆ.

  ಈ ನಡುವೆ ಬಾಲಿವುಡ್ ನಟಿ, ವಿವಾದಾತ್ಮಕ ಹೇಳಿಕೆಗಳ ಮೂಲಕರವೆ ಪ್ರಚಾರ ಗಿಟ್ಟಿಸಿಕೊಳ್ಳುವ ರಾಖಿ ಸಾವಂತ್ ಈಗ ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸುಶಾಂತ್ ಮತ್ತೆ ಬರ್ತಾರೆ. ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರ್ತಾರೆ, ಹೀಗಂತ ಸುಶಾಂತ್ ಕನಸಿನಲ್ಲಿ ಬಂದು ಹೇಳಿದ್ದಾರೆ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಮುಂದೆ ಓದಿ..

  ಪ್ರೈವೇಟ್ ಜೆಟ್‌ನಲ್ಲಿ ನನ್ನನ್ನು ಹೊರಗೆ ಕರೆದೊಯ್ಯಿರಿ: ಮೋದಿಗೆ ರಾಖಿ ಬೇಡಿಕೆಪ್ರೈವೇಟ್ ಜೆಟ್‌ನಲ್ಲಿ ನನ್ನನ್ನು ಹೊರಗೆ ಕರೆದೊಯ್ಯಿರಿ: ಮೋದಿಗೆ ರಾಖಿ ಬೇಡಿಕೆ

  'ನಿನ್ನ ಮಗುವಾಗಿ ಮರುಜನ್ಮ ಪಡೆಯುತ್ತೇನೆ..'

  'ನಿನ್ನ ಮಗುವಾಗಿ ಮರುಜನ್ಮ ಪಡೆಯುತ್ತೇನೆ..'

  'ನಾನು ರಾತ್ರಿ ಮಲಗಿದ್ದಾಗ ಒಂದು ಕನಸು ಬಿತ್ತು. ಕನಸಿನಲ್ಲಿ ಸುಶಾಂತ್ ಸಿಂಗ್ ಬಂದಿದ್ದರು. ನೀವು ನನ್ನ ಮಾತನ್ನು ನಂಬೋದಿಲ್ಲ. ಆದರೆ ನಾನು ಸತ್ಯವನ್ನೆ ಹೇಳುತ್ತಿದ್ದೀನಿ. ನನ್ನಕನಸಿನಲ್ಲಿ ಸುಶಾಂತ್ ಬಂದು ನಿನ್ನ ಹೊಟ್ಟೆಯಲ್ಲಿ ಹುಟ್ಟಿ ಬರ್ತೀನಿ ಅಂತ ಹೇಳಿದ್ರು. ಹೇಗೆ ಅಂತ ಕೇಳಿದೆ. ನೀನು ಮದುವೆಯಾದ ನಂತರ ನಿನ್ನ ಮಗುವಾಗಿ ಮರುಜನ್ಮ ಪಡೆಯುತ್ತೇನೆ ಅಂತ ಸುಶಾಂತ್ ಹೇಳಿದ್ರು' ಎಂದು ರಾಖಿ ಸಾವಂತ್ ಹೇಳಿದ್ದಾರೆ.

  ಸುಶಾಂತ್ ಆತ್ಮ ಜೀವಂತವಾಗಿದೆ

  ಸುಶಾಂತ್ ಆತ್ಮ ಜೀವಂತವಾಗಿದೆ

  'ಸುಶಾಂತ್ ಒಳ್ಳೆಯ ಗೆಳೆಯ, ಸಹೋದರ ಆಗಿದ್ದಾನೆ. ಈ ಗಜತ್ತು ನನ್ನನ್ನು ಸಾಕಷ್ಟು ಸತಾಯಿಸಿತು. ಈ ಸಿನಿಮಾ ಇಂಡಸ್ಟ್ರಿ ನನಗೆ ಸಾಕಷ್ಟು ಕಾಯಿಸಿತು. ಸಾಕಷ್ಟು ನೀಡಿದರು ಅದಕ್ಕಿಂತ ಹೆಚ್ಚು ಕಿತ್ತುಕೊಂಡರು. ನನ್ನನ್ನು ಪಾರ್ಟಿಗಳಿಗೆ ಬಾಯ್ ಕಟ್ ಮಾಡಿದ್ರು. ಕಂಗನಾ ನಾನಗೆ ಸಪೋರ್ಟ್ ಮಾಡಿದ್ರು, ನನ್ನ ಫ್ಯಾನ್ಸ್ ನನಗೆ ಸಪೋರ್ಟ್ ಮಾಡಿದ್ರು, ರಾಖಿ ನೀನು ನನಗೆ ಸೊಪೋರ್ಟ್ ಮಾಡಿದೆ. ಆದರೆ ನನಗೆ ತೊಂದರೆ ಕೊಟ್ಟವರನ್ನು ನೋಡಿಕೊಳ್ಳುತ್ತೇನೆ. ನಾನಿನ್ನು ಜೀವಂತವಾಗಿದ್ದೀನಿ. ನಾನು ಯಾರನ್ನು ಬಿಡುವುದಿಲ್ಲ ಅಂತ ಸುಶಾಂತ್, ರಾಖಿ ಕನಸಿನಲ್ಲಿ ಬಂದು ಹೇಳಿದ್ದಾರಂತೆ.

  ಮದುವೆ ಚಿತ್ರಗಳನ್ನು ಹಂಚಿಕೊಂಡ ರಾಖಿ ಸಾವಂತ್, ಗಂಡನೇ ಎಡಿಟ್!ಮದುವೆ ಚಿತ್ರಗಳನ್ನು ಹಂಚಿಕೊಂಡ ರಾಖಿ ಸಾವಂತ್, ಗಂಡನೇ ಎಡಿಟ್!

  ಸುಶಾಂತ್ ಸಿನಿಮಾದಲ್ಲಿ ನನಗೆ ಐಟಂ ಸಾಂಗ್ ಕೊಡಿ

  ಸುಶಾಂತ್ ಸಿನಿಮಾದಲ್ಲಿ ನನಗೆ ಐಟಂ ಸಾಂಗ್ ಕೊಡಿ

  ಇನ್ನೂ ಅರ್ಧಕ್ಕೆ ನಿಂತ ಸಿನಿಮಾಗಳನ್ನು ಪೊರ್ಣಗೊಳಿಸುವಂತೆ ಡೈರೆಕ್ಟರ್ ಗಳಿಗೆ ಸೂಚಿಸುವಂತೆಯೂ ಸುಶಾಂತ್ ರಾಖಿ ಬಳಿ ಹೇಳಿದ್ದಾರಂತೆ. ಈ ಸಿನಿಮಾಗಳಲ್ಲಿ ಸಹೋದರಿ ರಾಖಿ ಸಾವಂತ್ ಬಳಿ ಒಂದು ಐಟಂ ಸಾಂಗ್ ಮಾಡಿಸುವಂತೆಯೂ ಹೇಳಿದ್ದಾರಂತೆ. ಸನ್ನಿ ಲಿಯೋನ್ ಜೊತೆ ಕಾಂಪಿಟೀಷನ್ ನಲ್ಲಿ ಒಂದು ಸಾಂಗ್ ಮಾಡಿಸಿ, ಸಿನಿಮಾಗಳು ಹಿಟ್ ಆಗುತ್ತೆ. ಈ ಸಿನಿಮಾಗಳನ್ನು ಫ್ಯಾನ್ಸ್ ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಹೋಗಿ ನೋಡ್ಬೇಕು. ಸುಶಾಂತ್ ಸಿನಿಮಾ ಹಿಟ್ ಆಗ್ಬೇಕು. ಎಂದು ಹೇಳಿದ್ದಾರೆ.

  'ಕೊರೊನಾ' ವೈರಸ್ ನಾಶಮಾಡಲು ಔಷಧಿ ಹಿಡಿದು ಚೀನಾಗೆ ಹೋದ ನಟಿ ರಾಖಿ

  ನೆಟ್ಟಿಗರ ಟ್ರೋಲ್

  ನೆಟ್ಟಿಗರ ಟ್ರೋಲ್

  ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೆ ಸುದ್ದಿಯಲ್ಲಿದ್ದ ರಾಖಿ, ಸುಶಾಂತ್ ಸಿಂಗ್ ವಿಚಾರದಲ್ಲಿಯೂ ಮಾತನಾಡಿ ನೆಟ್ಟಿಗರಿಂದ ಬೈಗುಳಗಳ ಸುರಿಮಳೆ ಪಡೆಯುತ್ತಿದ್ದಾರೆ. ಇನ್ನೂ ಅನೇಕರು ರಾಖಿ ಸಾವಂತ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ.

  English summary
  Bollywood Actress Rakhi Sawant says Actor Sushanth Singh came in her dream.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X