For Quick Alerts
  ALLOW NOTIFICATIONS  
  For Daily Alerts

  ಆಲ್ಕೋಹಾಲ್ ಪ್ರಚಾರದಲ್ಲಿ ನಟಿ: ಹಣಕ್ಕಾಗಿ ಹೀಗೆಲ್ಲ ಮಾಡೋದ ಎಂದ ನೆಟ್ಟಿಗರು

  By ರವೀಂದ್ರ ಕೊಟಕಿ
  |

  ಸೆಲಿಬ್ರಿಟಿ ಆಗುವುದು ಸುಲಭದ ಮಾತಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸತತವಾದ ಪರಿಶ್ರಮ ಮತ್ತು ಟ್ಯಾಲೆಂಟ್ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿಕೊಂಡರೆ ಮಾತ್ರ ಅವರು ಸೆಲೆಬ್ರಿಟಿಗಳಾಗಿ ಗುರುತಿಸಿಕೊಳ್ಳಲು ಸಾಧ್ಯ.

  ಒಂದು ಸಲ ಸೆಲೆಬ್ರಿಟಿ ಸ್ಟೇಟಸ್ ಬಂದಮೇಲೆ ಅದನ್ನು ಹಾಗೆ ಉಳಿಸಿಕೊಳ್ಳುವುದು ಮತ್ತಷ್ಟು ಕಠಿಣವಾದ ಕೆಲಸ. ಸೆಲೆಬ್ರಿಟಿಗಳಾಗಿ ಮಾಡುವ ಯಾವುದೇ ಕೆಲಸ ಸಮಾಜದ ಮೇಲೆ ಅದರದ್ದೇ ಆದ ಪರಿಣಾಮ ಉಂಟುಮಾಡುತ್ತದೆ. ಹೀಗಾಗಿಯೇ ಸೆಲೆಬ್ರಿಟಿಗಳು ಮಾಡುವ ಪ್ರತಿಯೊಂದು ಕೆಲಸದ ಮೇಲೆ ಸಮಾಜ ಕಣ್ಣೀರುತ್ತದೆ.

  ಜನರ ಕಣ್ತಪ್ಪಿಸಿ ಸೆಲೆಬ್ರಿಟಿಗಳು ಏನನ್ನೂ ಮಾಡಲಾಗುವುದಿಲ್ಲ. ಸೆಲೆಬ್ರಿಟಿಗಳು ಮಾಡುವ ಒಳ್ಳೆ ಕೆಲಸಕ್ಕೆ ಸಮಾಜ ಬೆನ್ನುತಟ್ಟಿ, ಅವರ ಕಾರ್ಯದ ಜೊತೆಗೆ ನಿಲ್ಲುತ್ತದೆ. ಅದೇ ಸೆಲೆಬ್ರಿಟಿಗಳು ಮಾಡುವ ಯಾವುದೇ ಕಾರ್ಯ ಅದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುವಂತೆ ಇದ್ದರೆ ತಕ್ಷಣವೇ ಸಮಾಜ ಅದರ ವಿರುದ್ಧ ಮುಗಿದುಬಿಳುತ್ತದೆ. ಅದರಲ್ಲೂ ಈಗ ಸೋಶಿಯಲ್ ಮೀಡಿಯಾ ಜಮಾನ. ಅಲ್ಲೇ ಡ್ರಾ, ಅಲ್ಲೇ ಬಹುಮಾನ. ಈಗ ನೆಟಿಜನ್‌ಗಳಿಂದ ಬಹುಮಾನ ಪಡೆಯುವ ಸರದಿ ನಟಿ ರೆಜಿನಾ ಕ್ಯಾಸ್ಯಾಂಡ್ರಾ ಅವರದಾಗಿದೆ.

  ಯಾರು ಈ ರೆಜಿನಾ ಕ್ಯಾಸ್ಯಾಂಡ್ರಾ?

  ಯಾರು ಈ ರೆಜಿನಾ ಕ್ಯಾಸ್ಯಾಂಡ್ರಾ?

  ಈಕೆಯ ಮುದ್ದಾದ ಮುಖ ನೋಡಿದ ತಕ್ಷಣ ನಿಮಗೆ 'ಸೂರ್ಯಕಾಂತಿ' ಚಿತ್ರ ನೆನಪಿಗೆ ಬಂದರೆ ತಪ್ಪೇನೂ ಇಲ್ಲ ಬಿಡಿ. ಹೌದು ನಿರ್ದೇಶಕ ಕೆ.ಎಂ.ಚೈತನ್ಯ ಅವರ ನಿರ್ದೇಶನದಲ್ಲಿ ಚೇತನ್ ಅಭಿನಯದ 'ಸೂರ್ಯಕಾಂತಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಈ ತಮಿಳು ನಟಿ, ತಮಿಳು, ತೆಲುಗು ಚಿತ್ರರಂಗದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ. ಒಂದಾನೊಂದು ಸಂದರ್ಭದಲ್ಲಿ ಅತ್ತ ತಮಿಳು, ಇತ್ತ ತೆಲುಗಿನಲ್ಲಿ ಅತ್ಯಂತ ಬ್ಯುಸಿ ನಟಿ ಎನಿಸಿಕೊಂಡಿದ್ದ ರೆಜಿನಾ ಪ್ರಸ್ತುತ ಒಳ್ಳೆ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾಳೆ.

  ಜಾಹೀರಾತು ರಂಗದಲ್ಲಿ ಸೆಲೆಬ್ರಿಟಿಗಳು

  ಜಾಹೀರಾತು ರಂಗದಲ್ಲಿ ಸೆಲೆಬ್ರಿಟಿಗಳು

  ಹಿಂದೆ ಒಂದಾನೊಂದು ಸಂದರ್ಭದಲ್ಲಿ ಬಾಲಿವುಡ್ ನಟ-ನಟಿಯರು ಮಾತ್ರ ಬ್ರಾಂಡ್ ಗಳಿಗೆ ಅಂಬಾಸಿಡರ್ ಗಳಾಗಿ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಯಾವಾಗ ಸೌತ್ ಸಿನಿ ಇಂಡಸ್ಟ್ರಿ, ಅದರ ಸ್ಟಾರ್ ಗಳ ಸ್ಟಾರ್ ವ್ಯಾಲ್ಯೂ ದೇಶವ್ಯಾಪಿಯಾಗಿ ವಿಸ್ತರಿಸಿತು, ಜಾಹೀರಾತುಗಳಿಗಾಗಿ ನಟ-ನಟಿಯರನ್ನು ಬಳಸಿಕೊಳ್ಳಲು

  ದೊಡ್ಡ ದೊಡ್ಡ ಕಂಪನಿಗಳು ಮುಂದಾದವು ಇದೇ ಕ್ರಮದಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್, ಸೂರ್ಯ, ಮೋಹನ್ ಲಾಲ್, ಪುನೀತ್-ಶಿವಣ್ಣ, ಉಪೇಂದ್ರ, ಯಶ್ ಹೀಗೆ ಸೌತ್ ಇಂಡಸ್ಟ್ರಿಯ ಖ್ಯಾತನಾಮ ನಾಯಕನಟರುಗಳು ಕಾಣಿಸಿಕೊಂಡ ಜಾಹೀರಾತುಗಳು ದೊಡ್ಡಮಟ್ಟದಲ್ಲಿ ಕಿರುತೆರೆಯಲ್ಲಿ ಕಂಡವು. ಇನ್ನು ನಟಿಯರಾದ ಸಮಂತಾ, ರಶ್ಮಿಕಾ,ಕಾಜಲ್ ಅಗರ್ವಾಲ್, ಜಾಹೀರಾತು ದುನಿಯಾ ದವರಿಗೆ ಫೇವರೆಟ್ ಆಗಿ ಕಂಡರು. ಈ ನಟ-ನಟಿಯರು ಆಹಾರ ಉತ್ಪನ್ನಗಳು, ಸ್ಟೀಲ್, ಗೋಲ್ಡ್, ಕಾಸ್ಮೆಟಿಕ್ಸ್ , ಟೂತ್ಪೇಸ್ಟ್ ಹೀಗೆ ಅನೇಕ ಉತ್ಪನ್ನಗಳನ್ನು ಜಾಹೀರಾತುಗಳ ಮೂಲಕ ಪ್ರಮೋಟ್ ಮಾಡುತ್ತಾ ಬಂದಿದ್ದಾರೆ. ಈಗ ಇದೇ ಕ್ರಮದಲ್ಲಿ ನಟಿ ರೆಜಿನಾ ಒಂದು ಉತ್ಪನ್ನಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಉತ್ಪನ್ನದ ಪ್ರಮೋಷನ್ ಗೆ ಮುಂದಾಗಿದ್ದಾರೆ. ಆದರೆ ಅದೇ ಈಗ ರೆಜಿನಾ ಗೆ ತಲೆನೋವನ್ನು ತಂದಿದೆ.

  ಆಲ್ಕೋಹಾಲ್ ಜೊತೆ ಸೆಲೆಬ್ರೇಶನ್

  ಆಲ್ಕೋಹಾಲ್ ಜೊತೆ ಸೆಲೆಬ್ರೇಶನ್

  ಟೇಬಲ್ ಮೇಲೆ ಮದ್ಯದ ಬಾಟಲಿಗಳು, ಕೈಯಲ್ಲೊಂದು ಮದ್ಯ ತುಂಬಿದ ಗ್ಲಾಸ್ ಹಿಡಿದು ಫೋಸ್ ಕೊಡುತ್ತಿರುವ ರೆಜಿನಾ. ಇದು ಯಾವುದೇ ಸಿನಿಮಾದ ಚಿತ್ರೀಕರಣದ ದೃಶ್ಯವಲ್ಲ, ಬದಲಾಗಿ ಮದ್ಯವನ್ನು ಉತ್ತೇಜಿಸುವ ಜಾಹೀರಾತು. ಹೌದು ನಟಿ ರೆಜಿನಾ 'ಸಿಗ್ನೇಚರ್ ವಿಸ್ಕಿ' ಮದ್ಯದ ಉತ್ಪನ್ನಕ್ಕೆ ಈಗ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇನ್ನು ಇದೇ ಕ್ರಮದಲ್ಲಿ ಈ ವಿಸ್ಕಿಯನ್ನು ಪ್ರಮೋಸ್ ಮಾಡುವ ವಿಷಯದಲ್ಲಿ ರೆಜಿನಾ "ನನ್ನ ಒಂಬತ್ತನೇ ವಯಸ್ಸಿನಲ್ಲಿ ಆಂಕರಿಂಗ್ ಮಾಡಲು ಆರಂಭಿಸಿದೆ.ಈಗ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸುವ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಹಂತಕ್ಕೆ ಬಂದು ತಲುಪಿದ್ದೇನೆ. ಇದು ನನ್ನ ಪಯಣ, ಈ ನೆನಪುಗಳು ಸದಾ ನನ್ನ ಜೊತೆಯಲ್ಲಿ ಇರುತ್ತದೆ. ಇದನ್ನು ಈಗ ನಾನು ಸಿಗ್ನೇಚರ್ ಜೊತೆಗೆ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದೇನೆ" ಅಂತ ಹೇಳುವ ಮೂಲಕ ಸಿಗ್ನೇಚರ್ ವಿಸ್ಕಿಯ ಪ್ರಮೋಷನ್ ಮಾಡುತ್ತಿದ್ದಾಳೆ.

  ರೆಜಿನಾ ವಿರುದ್ಧ ಕಿಡಿಕಾರಿದ ನೆಟಿಜನ್‌ಗಳು

  ರೆಜಿನಾ ವಿರುದ್ಧ ಕಿಡಿಕಾರಿದ ನೆಟಿಜನ್‌ಗಳು

  ನಟ ವಿಶಾಲ್ ಅಭಿನಯದ 'ಚಕ್ರ' ಈಕೆ ನಟಿಸಿದ ಕೊನೆಯ ಚಿತ್ರ. ಚಿತ್ರ ಕೂಡ ಸೋತ ನಂತರ ಈಕೆಯ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲ. ಇಂತಹ ಸಮಯದಲ್ಲಿ ಆಲ್ಕೋಹಾಲ್ ಪ್ರಮೋಷನ್ ಗೆ ಮುಂದಾಗಿರುವ ರೆಜಿನಾ ವಿರುದ್ಧ ಅವಳ ಅಭಿಮಾನಿಗಳು ಜೊತೆಗೆ ನೆಟಿಜನ್‌ಗಳು ಕೆಂಡಾಮಂಡಲರಾಗಿದ್ದಾರೆ. 'ಈ ರೀತಿ ಆಲ್ಕೋಹಾಲ್ ಪ್ರಮೋಟ್ ಮಾಡುತ್ತಿರುವ ನಿನ್ನನ್ನು ನೋಡಿ ನಿನ್ನ ಅಭಿಮಾನಿಗಳಾದ ನಮಗೆ ನಾಚಿಕೆ ಆಗುತ್ತಿದೆ'. 'ನಿಮಗೆ ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿ ಇಲ್ಲವೇ', 'ಆಲ್ಕೋಹಾಲ್ ಪ್ರಮೋಟ್ ಮಾಡುವ ನಿನ್ನ ಇಂದಿನ ದುಸ್ಥಿತಿ

  ನೋಡಿ ಅಯ್ಯೋ ಅನಿಸುತ್ತದೆ' 'ದುಡ್ಡಿಗಾಗಿ ಇಂತಹ ಜಾಹೀರಾತುಗಳಲ್ಲಿ ಕಾಣಿಸ್ತೀಯ ನಾಚಿಕೆ ಆಗಬೇಕು' ಹೀಗೆ ದೊಡ್ಡಮಟ್ಟದಲ್ಲಿ ನೆಟಿಜನ್‌ಗಳು ರೆಜಿನಾ ವಿರುದ್ಧ ಕಿಡಿಕಾರುತ್ತಿದ್ದಾರೆ. ಇಷ್ಟೆಲ್ಲಾ ಟ್ರೋಲ್ ಗಳಿಗೆ ಗುರಿಯಾಗುತ್ತಿದ್ದರು, ರೆಜಿನಾ ಮಾತ್ರ ಕೂಲಾಗಿ ಕೈಯಲ್ಲಿ ಸಿಗ್ನೇಚರ್ ವಿಸ್ಕಿ ಹಿಡಿದು ಚೀರ್ಸ್ ಹೇಳುತ್ತಿದ್ದಾಳೆ.

  English summary
  Actress Regina Cassandra acted in alcohol advertisement. Netizen slams actress. Regina Cassandra acted in many south Indian movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X