»   » ಸಚಿನ್ ತೆಂಡೂಲ್ಕರ್ ಬಗೆಗಿನ ಕನಸು ಬಿಚ್ಚಿಟ್ರು ಸೈಯಾಮಿ ಖೇರ್

ಸಚಿನ್ ತೆಂಡೂಲ್ಕರ್ ಬಗೆಗಿನ ಕನಸು ಬಿಚ್ಚಿಟ್ರು ಸೈಯಾಮಿ ಖೇರ್

Written By:
Subscribe to Filmibeat Kannada

ಮಾಡೆಲ್ ಮತ್ತು ಪ್ರಪ್ರಥಮವಾಗಿ 'ಮಿರ್ಜ್ಯಾ' ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ನಟಿ ಸೈಯಾಮಿ ಖೇರ್, ಕ್ರಿಕೆಟ್ ಲೆಜೆಂಡ್ ಸಚಿನ್‌ ತೆಂಡೂಲ್ಕರ್ ಬಗೆಗಿನ ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ. ಅದೇನಪ್ಪಾ ಅಂತ ಕನಸು ಅಂತಿರಾ.. ಮುಂದೆ ಓದಿ..

Saiyami Kher

ನಟಿ ಸೈಯಾಮಿ ಖೇರ್ ಭಾರತೀಯ ಕ್ರಿಕೆಟ್ ರಂಗದ ಜೀವಂತ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆ ಕ್ರಿಕೆಟ್ ಆಟವಾಡುವ ಆಸೆ ಹೊಂದಿದ್ದಾರಂತೆ. ಅಷ್ಟೇ ಅಲ್ಲಾ.. ಸಚಿನ್‌ ತೆಂಡೂಲ್ಕರ್ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದು, ಸಚಿನ್ ತಯಾರು ಮಾಡಿದ ಆಹಾರವನ್ನು ತಿನ್ನುವುದು ಎಂದರೇ ತುಂಬಾ ಲವ್ ಎಂದು ಸೈಯಾಮಿ ಹೇಳಿದ್ದಾರೆ.

"ಸಚಿನ್ ಜೊತೆ ಕ್ರಿಕೆಟ್ ಆಡುವುದೆಂದರೇ ತುಂಬಾ ಇಷ್ಟ. ಅವರು ಚೆನ್ನಾಗಿ ಅಡುಗೆ ಮಾಡುತ್ತಾರೆ. ಸೋ ಅವರು ಮಾಡಿದ ತಿನಿಸುಗಳನ್ನು ತಿನ್ನುವ ಆಸೆ ಇದೆ. ಇದೆಲ್ಲಾ ನನ್ನ ಕನಸು. ಆದರೆ ಇದರಿಂದ ನನಗೆ ಯಾವುದೇ ಹಾನಿ ಇಲ್ಲಾ... ನಾನು ಸಚಿನ್‌ ರವರ ಬಿಗ್‌ ಫ್ಯಾನ್", ಎಂದು ಸೈಯಾಮಿ ಖೇರ್ ಹೇಳಿದ್ದಾರೆ.

Saiyami Kher 2

ಸೈಯಾಮಿ ಖೇರ್ ಮತ್ತು ಅನಿಲ್ ಕಪೂರ್ ಪುತ್ರ ಹರ್ಷವರ್ಧನ್ ಕಪೂರ್ ಕಾಂಬಿನೇಷನ್‌ ನಲ್ಲಿ, 2016 ಅಕ್ಟೋಬರ್ ನಲ್ಲಿ ರಿಲೀಸ್ ಆದ 'ಮಿರ್ಜ್ಯಾ' ಚಿತ್ರ ಹೇಳಿಕೊಳ್ಳುವಷ್ಟರ ಮಟ್ಟಿಗೆ ಬಾಕ್ಸ್‌ ಆಫೀಸ್ ಗೆ ಹಣ ಗಳಿಸಿಕೊಟ್ಟಿರಲಿಲ್ಲ. ಈ ಚಿತ್ರಕ್ಕೆ ರಾಕೇಶ್ ಓಂ ಪ್ರಕಾಶ್ ಮೆಹ್ರಾನ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರ ಸೋತ ಬಗ್ಗೆ ಫೀಲ್ ಆಗಿದೆಯೇ ಎಂಬುದಕ್ಕೆ ಸೈಯಾಮಿ, 'ನಾವು ಎರಡು ವರ್ಷಗಳ ಕಾಲ ಚಿತ್ರಕ್ಕಾಗಿ ಕಷ್ಟಪಟ್ಟಿದ್ದೇವೆ. ಈ ಪ್ರಾಜೆಕ್ಟ್‌ ನ ಸ್ಕ್ರಿಪ್ಟ್ ಚೆನ್ನಾಗಿ ಇದ್ದ ಕಾರಣ ನಾನು ನಟಿಸಲು ಒಪ್ಪಿಕೊಂಡಿದ್ದೆ. ಚಿತ್ರದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಆದ್ರೆ ಜನರು ನನ್ನ ನಟನೆ ಮೆಚ್ಚಿದ್ದಾರೆ' ಎಂದು ಹೇಳಿದ್ದಾರೆ.

English summary
Saiyami Kher revealed that she's a big fan of cricketing legend Sachin Tendulkar & dreams of playing cricket with him. Saiyami also says that she'll love it if Sachin Tendulkar cooks a meal for her.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X