For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸಿನಿಮಾದಲ್ಲಿ ಸಮಂತಾ ದೆವ್ವದ ಪಾತ್ರ!

  |

  ನಟಿ ಸಮಂತಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅವರ ಸಾಲು-ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗುತ್ತಿವೆ. ಇದರ ಜೊತೆಗೆ ಬಾಲಿವುಡ್‌ಗೂ ಕೂಡ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

  ಸಮಂತಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ದಿನಗಳಿಂದ ಸುದ್ದಿಗಳು ಹಬ್ಬಿದ್ದವು, ಕೊನೆಗೂ ನಟಿ ಸಮಂತಾ ಬಾಲಿವುಡ್ ಸಿನಿಮಾ ಯಾವುದು ಎನ್ನುವುದು ರಿವೀಲ್ ಆಗಿದೆ. ನಟ ಆಯುಷ್ಮಾನ್ ಖುರಾನ್ ಜೊತೆಗೆ ಸಮಂತಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?

  ಈ ಚಿತ್ರದ ಬಗ್ಗೆ ಸದ್ಯ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಈ ಸಿನಿಮಾ ರಾಜಸ್ಥಾನದ ಹಳ್ಳಿಯಲ್ಲಿ ನಡೆಯುವ ಕಥೆಯಾಗಿದೆ. ಜೊತೆಗೆ ಇದು ಹಾರರ್ ಸಿನಿಮಾ ಎನ್ನುವುದು ವಿಶೇಷ. ಆಯುಷ್ಮಾನ್ ಖುರಾನಾ ಈ ಹಿಂದೆ ಸ್ತ್ರೀ ಸಿನಿಮಾ ಮಾಡಿ ಗೆದ್ದಿದ್ದ ನಿರ್ದೇಶಕನೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಕೂಡ ಸ್ತ್ರೀ ಸಿನಿಮಾ ರೀತಿಯಾದಂತಹ ಒಂದು ಹಾರರ್ ಟಚ್ ಇರುವ ಸಿನಿಮಾ ಎನ್ನಲಾಗಿದೆ. ಹಾಗಾಗಿ ಈ ಚಿತ್ರದಲ್ಲಿ ಸಂಮಂತಾ ಪಾತ್ರ ಏನು ಎನ್ನುವ ಕುತೂಹಲ ಕೂಡ ಹಬ್ಬಿತ್ತು.

  ಈ ಚಿತ್ರದಲ್ಲಿ ಸಮಂತಾ ಪಾತ್ರದ ಬಗ್ಗೆ ಮತ್ತೊಂದು ಮಾಹಿತಿ ಹೊರಬಿದ್ದಿದೆ. ಸಮಂತಾ ಈ ಚಿತ್ರದಲ್ಲಿ ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸದಾ ಗ್ಲಾಮರಸ್ ರೋಲ್‌ಗಳಲ್ಲಿ ತೆರೆಯಮೇಲೆ ಮಿಂಚುತ್ತಿದ್ದ ನಟಿ ಸಮಂತಾ ದೆವ್ವದ ವೇಷ ಹಾಕಲು ಮುಂದಾಗಿದ್ದಾರೆ. ಈ ಸುದ್ದಿ ಸಿನಿ ಪ್ರೇಕ್ಷಕರಲ್ಲಿ, ಸಮಂತಾ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ. ಸಮಂತಾ ದೆವ್ವದ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರಗಳು ಕೂಡ ಸೃಷ್ಟಿಯಾಗಿದೆ.

  ಕೇವಲ ದೆವ್ವದ ಪಾತ್ರದಲ್ಲಿ ಮಾತ್ರವಲ್ಲ, ನಟಿ ಸಮಂತಾ ರಜಪೂತ ರಾಣಿಯಾಗಿ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಹಾಗಾಗಿ ಬಹುಷಃ ಇದು ಜನ್ಮ ಜನ್ಮದ ಕಥೆ ಇರಬಹುದು ಎನ್ನುವ ಚರ್ಚೆಗಳು ಬಾಲಿವುಡ್‌ನಲ್ಲಿ ಹುಟ್ಟಿಕೊಂಡಿದೆ. ಇಷ್ಟೆಲ್ಲಾ ಸುದ್ದಿಗಳು ಹೊರ ಬಂದ ಬಳಿಕ ಚಿತ್ರದ ಫಸ್ಟ್ ಲುಕ್ ಹೇಗಿರಲಿದೆ, ಸಮಂತಾಳ ಲುಕ್ ಸಿನಿಮಾದಲ್ಲಿ ಹೇಗಿರಲಿದೆ ಎನ್ನುವ ಕೌತುಕತೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.

  Recommended Video

  Kantara Trailer Review | ಹೊಂಬಾಳೆ ಫಿಲ್ಮ್ಸ್‌ನ ಮತ್ತೊಂದು ಮೈಲಿಗಲ್ಲಾಗುತ್ತಾ 'ಕಾಂತಾರ' | Rishab Shetty
  English summary
  Actress Samantha To be seen as Devil In Bollywood debut film, Know more details,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X