For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಯವರೇ ನನ್ನ ತಂದೆಯನ್ನು ಕೊಂದಿದ್ದಾರೆ: ನಟಿ ಸಂಭಾವನಾ ಸೇಠ್

  |

  ಕೊರೊನಾ ಹೊಡೆತದಿಂದ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಹಲವಾರು ಸಿನಿಮಾ ಸೆಲೆಬ್ರಿಟಿಗಳು ಸಹ ಕೊರೊನಾದಿಂದ ಮೃತರಾಗಿದ್ದಾರೆ. ಸಿನಿಮಾ ಮಂದಿಯ ಕುಟುಂಬದವರೂ ಸಹ ನಿಧನರಾಗಿದ್ದಾರೆ.

  ಇತ್ತೀಚೆಗಷ್ಟೆ ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಸಂಭಾವನಾ ಸೇಠ್ ತಂದೆ ಮೇ 08ರಂದು ಕೊರೊನಾದಿಂದ ಮೃತರಾದರು. ಆ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ಸಂಭಾವನಾ ಸೇಠ್, 'ನನ್ನ ತಂದೆಯನ್ನು ಕೊಂದಿದ್ದು ಕೊರೊನಾ ಮಾತ್ರವಲ್ಲ' ಎಂದಿದ್ದರು. ಆದರೆ ಎರಡು ದಿನದ ಹಿಂದೆ ಪೋಸ್ಟ್‌ ಹಾಕಿರುವ ಸಂಭಾವನಾ ಆಸ್ಪತ್ರೆಯವರು ತಂದೆಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

  ಸಂಭಾವನಾ ಹೇಳಿರುವಂತೆ, ಕೊರೊನಾ ಸೋಂಕಿತ ತಂದೆಯನ್ನು ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆಯನ್ನು ನೋಡಲೆಂದು ಸಂಭಾವನಾ ಆಸ್ಪತ್ರೆಗೆ ಬಂದಾಗ ತಂದೆಯವರ ಸ್ಥಿತಿ ತೀರಾ ಹದಗೆಟ್ಟಿತ್ತು. ದೇಹದಲ್ಲಿ ಆಮ್ಲಜನಕ ಪ್ರಮಾಣ 55ಕ್ಕೆ ಕುಸಿದಿತ್ತು. ಅವರನ್ನು ವಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆ ಸಮಯದಲ್ಲಿ ತಂದೆಯವರ ಕಾಳಜಿವಹಿಸುವಂತೆ ಸಂಭಾವನಾ ನರ್ಸ್‌ ಒಬ್ಬರಿಗೆ ಹೇಳಿದ್ದಾರೆ, ಆದರೆ ಆ ನರ್ಸ್‌ ಸಂಭಾವನಾ ಜೊತೆಗೆ ಸೂಕ್ತವಾಗಿ ವರ್ತಿಸಿಲ್ಲ ಬದಲಿಗೆ 'ನಮಗೆ ಬೇರೆ ರೋಗಿಗಳನ್ನೂ ನೋಡಲಿಕ್ಕಿದೆ. ನಿಮಗೆ ಬೇಕಿದ್ದರೆ ನೀವೆ ಯಾರನ್ನಾದರೂ ನೇಮಿಸಿಕೊಳ್ಳಿ' ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಂಭಾವನಾ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿದ್ದಾರೆ.

  ವಿಡಿಯೋದಲ್ಲಿ ತಂದೆಯ ಪರಿಸ್ಥಿತಿ ತೋರಿಸಿದ್ದರು

  ವಿಡಿಯೋದಲ್ಲಿ ತಂದೆಯ ಪರಿಸ್ಥಿತಿ ತೋರಿಸಿದ್ದರು

  ವಿಡಿಯೋ ಮಾಡಿ ತಂದೆಯ ಪರಿಸ್ಥಿತಿಯನ್ನು ತೋರಿಸಿರುವ ಸಂಭಾವನಾ, ಆಸ್ಪತ್ರೆ ವಿರುದ್ಧ ಕಿಡಿ ಕಾರಿದ್ದಾರೆ. ಆದರೆ ಸಂಭಾವನಾ ವಿಡಿಯೋ ಮಾಡಿ ಆಸ್ಪತ್ರೆ ಸಿಬ್ಬಂದಿ ತಂದೆಯನ್ನು ಸರಿಯಾಗಿ ಶುಶ್ರೂಶೆ ಮಾಡುತ್ತಿಲ್ಲ ಎಂದು ದೂರಿದ ಕೇವಲ ಎರಡು ಗಂಟೆ ಒಳಗೆಯೇ ಸಂಭಾವನಾ ತಂದೆ ನಿಧನ ಹೊಂದಿದ್ದಾರೆ. ಈ ಘಟನೆಗಳು ನಡೆದಿರುವುದು ಮೇ 08 ರಂದು.

  'ಮೆಡಿಕಲ್ ಮರ್ಡರ್' ಎಂದ ಸಂಭಾವನಾ

  'ಮೆಡಿಕಲ್ ಮರ್ಡರ್' ಎಂದ ಸಂಭಾವನಾ

  ತಂದೆ ಸಾವಿನ ಜೊತೆ ಹೋರಾಡುತ್ತಿದ್ದ ಸಂದರ್ಭದಲ್ಲಿ ತಾವು ಮಾಡಿದ್ದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಂಭಾವನಾ, 'ನನ್ನ ತಂದೆಯನ್ನು ಆಸ್ಪತ್ರೆಯವರೇ ಕೊಂದಿದ್ದಾರೆ. ಇದು 'ಮೆಡಿಕಲ್ ಮರ್ಡರ್' ನಾನು ಆಸ್ಪತ್ರೆಯ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ' ಎಂದಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್‌ ಒಬ್ಬರ ಮೇಲೆ ತೀವ್ರ ವಾಗ್ದಾಳಿ ಮಾಡಿರುವ ಸಂಭಾವನಾ, ಪಿಪಿಇ ಕಿಟ್ ಧರಿಸಿರುವ ನರ್ಸ್‌ನ ಚಿತ್ರವನ್ನು ಹಂಚಿಕೊಂಡು 'ಈ ನರ್ಸ್‌ನ ಹೆಸರನ್ನು ಆಸ್ಪತ್ರೆಯವರು ಬಿಟ್ಟುಕೊಡುತ್ತಿಲ್ಲ. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ' ಎಂದು ಮನವಿ ಮಾಡಿದ್ದಾರೆ.

  ಬಿಳಿ ಬಟ್ಟೆ ತೊಟ್ಟ ರಾಕ್ಷಸರು ಕೊಲ್ಲುತ್ತಿದ್ದಾರೆ: ಸಂಭಾವನಾ ಸೇಠ್

  ಬಿಳಿ ಬಟ್ಟೆ ತೊಟ್ಟ ರಾಕ್ಷಸರು ಕೊಲ್ಲುತ್ತಿದ್ದಾರೆ: ಸಂಭಾವನಾ ಸೇಠ್

  ವಿಡಿಯೋ ಜೊತೆಗೆ ಪೋಸ್ಟ್ ಹಂಚಿಕೊಂಡಿರುವ ಸಂಭಾವನಾ ಸೇಠ್, 'ಎಲ್ಲ ವೈದ್ಯರೂ ದೇವರಲ್ಲ ಕೆಲವರು ರಾಕ್ಷಸರು ಸಹ ಇದ್ದಾರೆ. ಬಿಳಿ ಬಟ್ಟೆ ಧರಿಸಿದ ಕೆಲವು ರಾಕ್ಷಸರು ನಮ್ಮ ಪ್ರೀತಿ ಪಾತ್ರರನ್ನು ಕೊಲ್ಲುತ್ತಿದ್ದಾರೆ. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ವಿಡಿಯೋ ಮಾಡಿದ ಎರಡು ಗಂಟೆಯಲ್ಲಿ ನಮ್ಮ ತಂದೆ ನಿಧನರಾಗಿದ್ದಾರೆ. ತಂದೆಯನ್ನು ಕಳೆದುಕೊಂಡು ಬಿಡುತ್ತೇನೆ ಎಂಬುದು ನನ್ನ ಜೀವನದ ದೊಡ್ಡ ಭಯವಾಗಿತ್ತು. ಅದನ್ನೀಗ ಎದುರಿಸಿ ಬಿಟ್ಟಿದ್ದೇನೆ. ಈಗ ನಾನು ಭಯದಿಂದ ಮುಕ್ತಗೊಂಡಿದ್ದೇನೆ. ಕಾನೂನು ಹೋರಾಟ ನಡೆಸಲಿದ್ದೇನೆ. ಈ ಹೋರಾಟದಲ್ಲಿ ಗೆಲ್ಲುತ್ತೀನೋ ಇಲ್ಲವೋ ಗೊತ್ತಿಲ್ಲ ಆದರೆ ಈ ರಾಕ್ಷಸ ಮೀನುಗಳ ನಿಜ ಮುಖವನ್ನಂತೂ ಬಯಲಿಗೆ ಎಳೆಯುತ್ತೇನೆ' ಎಂದಿದ್ದಾರೆ.

  ತಂದೆ-ತಾಯಿ ವಿಚ್ಛೇದನ ಪಡೆದು ದೂರವಾಗಿದ್ದಾಗ ಖುಷಿಯಾಗಿತ್ತು ಎಂದ ಶ್ರುತಿ ಹಾಸನ್ | Filmibeat Kannada
  ಜೈಪುರ ಗೋಲ್ಡನ್ ಆಸ್ಪತ್ರೆಗೆ ನೊಟೀಸ್

  ಜೈಪುರ ಗೋಲ್ಡನ್ ಆಸ್ಪತ್ರೆಗೆ ನೊಟೀಸ್

  'ಈಗ ನನಗೆ ನಿಮ್ಮ (ಜನರ) ನೆರವು ಅಗತ್ಯವಿದೆ. ಯಾರು-ಯಾರು ಆಸ್ಪತ್ರೆಗಳಿಗೆ ದಾಖಲಾಗಿದ್ದೀರೊ ಅವರಲ್ಲಿ ಬಹುತೇಕರಿಗೆ ಈ ಸಮಸ್ಯೆ ಎದುರಾಗಿಯೇ ಇರುತ್ತದೆ. ಆದರೆ ಬೇರೆ-ಬೇರೆ ಕಾರಣಗಳಿಗೆ ನೀವು ಹೋರಾಟ ಮಾಡದೇ ಇರಬಹುದು. ಆದರೆ ಈಗ ಸಮಯ ಬಂದಿದೆ' ಎಂದಿರುವ ಸಂಭಾವನಾ ಸೇಠ್, ತಮ್ಮ ವಕೀಲರನ್ನು ಸಹ ಪೋಸ್ಟ್‌ಗೆ ಟ್ಯಾಗ್ ಮಾಡಿ, ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಗೆ ನೊಟೀಸ್ ಕಳಿಸುವ ಕಾರ್ಯವನ್ನು ಈಗಾಗಲೇ ಆರಂಭಿಸಿದ್ದಾರೆ' ಎಂದಿದ್ದಾರೆ.

  English summary
  Actress Sambhavana Seth alleged that her father was medically murdered by Delhi's Jaipur Golden Hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X