For Quick Alerts
  ALLOW NOTIFICATIONS  
  For Daily Alerts

  'ಆರೋಗ್ಯ ಅಲಕ್ಷಿಸಬೇಡಿ' ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ನಟಿಯ ಸಂದೇಶ

  |

  ಈ ವರ್ಷ ವಿಶ್ವದಾದ್ಯಂತ ಜನರಿಗೆ ಆರೋಗ್ಯದ ಪಾಠವನ್ನು ಹೇಳಿಕೊಟ್ಟಿದೆ, ಎಷ್ಟು ಜನ ಕಲಿತರೋ ಬಿಟ್ಟರೊ ಗೊತ್ತಿಲ್ಲವಾದರೂ, ಆರೋಗ್ಯದ ಕಾಳಜಿ ಎಷ್ಟು ಮಹತ್ವದ್ದು ಎಂಬುದು ಈ ವರ್ಷ ಹಲವರಿಗೆ ಅರ್ಥವಾಗಿದೆ.

  ಆದರೆ ನಟಿ ಶ್ರುತಿ ಸೇಠ್‌ ಗೆ ಇದು ಅರ್ಥವಾದಂತಿಲ್ಲ. ಅವರೇ ಹೇಳಿಕೊಂಡಿರುವಂತೆ 'ನಾನು ನನ್ನ ತಪ್ಪುಗಳಿಂದ ಪಾಠ ಕಲಿಯಲಿಲ್ಲ, ಈಗ ಜೀವನ ಪಾಠ ಹೇಳಿಕೊಡುತ್ತಿದೆ' ಎಂದಿದ್ದಾರೆ. ಅಂದಹಾಗೆ ನಟಿ ಶ್ರುತಿ ಸೇಠ್ ಅನಾರೋಗ್ಯಕ್ಕೆ ಒಳಗಾಗಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

  ತಮ್ಮ ಆರೋಗ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶ್ರುತಿ ಸೇಠ್, ತಾವು ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ ಜೊತೆಗೆ ಸಂದೇಶವೊಂದನ್ನು ಸಹ ಹಂಚಿಕೊಂಡಿದ್ದಾರೆ ನಟಿ.

  ಆರೋಗ್ಯವನ್ನು ಅಲಕ್ಷಿಸಬೇಡಿ, ನಾನು ಈಗ ಅನುಭವಿಸುತ್ತಿದ್ದೇನೆ. ತುರ್ತು ಶಸ್ತ್ರಚಿಕಿತ್ಸೆಗೆ ನಾನು ಒಳಗಾಗಿದ್ದೇನೆ. ನನ್ನ ಹೊಸ ವರ್ಷದ ಪ್ಲ್ಯಾನ್‌ಗಳು, ಕ್ರಿಸ್‌ಮಸ್ ಪ್ಲ್ಯಾನ್‌ಗಳೆಲ್ಲಾ ಮಣ್ಣುಪಾಲಾಗಿವೆ ಎಂದು ಬರೆದುಕೊಂಡಿದ್ದಾರೆ ನಟಿ ಶ್ರುತಿ ಸೇಠ್.

  ನಿಮ್ಮ ವೈಭವ, ಐಶಾರಾಮಿ ಜೀವನ, ನಿಮ್ಮ ಅಹಂಕಾರ ಎಲ್ಲವೂ ಆಸ್ಪತ್ರೆಗೆ ಬಂದ ಕೂಡಲೇ ಮಾಯವಾಗುತ್ತದೆ, ನೀವು ಇಲ್ಲಿ ಕೇವಲ ದೇಹ ಅಷ್ಟೆ. ಊಟ ಮೆದುಳಿಗೆ ಆಹಾರ, ದೇಹ ಗ್ಲೂಕೋಸ್ ಡ್ರಿಪ್ಸ್‌ನಿಂದಲೂ ಜೀವಂತ ಇರಬಲ್ಲದು, ಆಹಾರ ಪ್ರಿಯೆಯಾದ ನಾನು ಕೇವಲ ಗ್ಲೂಕೋಸ್‌ ಅನ್ನೇ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ ಶ್ರುತಿ ಸೇಠ್.

  ನಿಮ್ಮ ದೇಹವನ್ನು ಚೆನ್ನಾಗಿ ನೋಡಿಕೊಳ್ಳಿ, ಕಷ್ಟದ ಸಮಯ ಎದುರಾದಾಗ ಅದು ನಿಮಗೆ ಸ್ಪಂದಿಸುವಂತೆ ನೋಡಿಕೊಳ್ಳಿ ಎಂದು ಸಂದೇಶ ನೀಡಿದ್ದಾರೆ ನಟಿ.

  English summary
  Movie and TV actress Shruti Seth under goes emergency surgery. She posted her photo lying on the hospital bed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion