»   » 'ಶಿವಗಾಮಿ' ಪಾತ್ರ ರಿಜೆಕ್ಟ್ ಮಾಡಿದ್ದ ಶ್ರೀದೇವಿ ಈಗ ಗರಂ ಆಗಿದ್ದೇಕೆ?

'ಶಿವಗಾಮಿ' ಪಾತ್ರ ರಿಜೆಕ್ಟ್ ಮಾಡಿದ್ದ ಶ್ರೀದೇವಿ ಈಗ ಗರಂ ಆಗಿದ್ದೇಕೆ?

Posted By:
Subscribe to Filmibeat Kannada

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರವನ್ನ ಮೊದಮೊದಲು ಹಲವು ಸ್ಟಾರ್ ನಟರು ಮತ್ತು ನಟಿಯರು ರಿಜೆಕ್ಟ್ ಮಾಡಿದ್ದಾರೆ. ಆ ನಟ-ನಟಿಯರಲ್ಲಿ ಯಾರು ಕೂಡ ಸುದ್ದಿಯಾಗಿಲ್ಲ. ಆದ್ರೆ, ಬಾಹುಬಲಿ ಚಿತ್ರದ 'ಶಿವಗಾಮಿ' ಪಾತ್ರವನ್ನ ರಿಜೆಕ್ಟ್ ಮಾಡಿದ್ದ ಶ್ರೀದೇವಿ ಮಾತ್ರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

ಶ್ರೀದೇವಿ ಎಲ್ಲಿ ಹೋದರು 'ಶಿವಗಾಮಿ' ಪಾತ್ರದ ಬಗ್ಗೆ ಚರ್ಚೆಗಳು ಆಗುತ್ತಲೇ ಇದ್ದವು. ಇದರಿಂದ ಸ್ವತಃ ಶ್ರೀದೇವಿ ಕೂಡ ಬೇಸರಗೊಂಡಿದ್ದರು ಎಂದು ಕಾಣುತ್ತಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ಶ್ರೀದೇವಿ ಈಗ ಉತ್ತರ ಕೊಟ್ಟಿದ್ದು, ಟೀಕಕಾರರು ಹಾಗೂ ಚರ್ಚೆ ಮಾಡುತ್ತಿರುವ ಮಂದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಇದು ಶ್ರೀದೇವಿ ಪುತ್ರಿಯ ಸಿನಿಮಾ ಕಥೆಯಲ್ಲ, ಮದುವೆ ಸುದ್ದಿ.!

Actress Sridevi Speaks Why She Reject Baahubali

ಶ್ರೀದೇವಿ ಏನಂದ್ರು....
''ನಾನು ಶಿವಗಾಮಿ ಪಾತ್ರವನ್ನು ನಿರಾಕರಿಸಿರುವುದು ಇದೀಗ ಭಾರಿ ಚರ್ಚೆಯೂ ಆಗುತ್ತಿದೆ. ಈ ಪಾತ್ರವನ್ನ ರಿಜೆಕ್ಟ್ ಮಾಡುವುದಕ್ಕೆ ಖಾಸಗಿ ಕಾರಣ ಇತ್ತು. ಆದ್ರೆ, ಈ ವಿಚಾರವಾಗಿ ಅಷ್ಟೊಂದು ಚರ್ಚೆ ನಡೆದಿರುವುದು ಸರಿಯಲ್ಲ. ನಾನು ನನ್ನ ಸಿನಿ ಬದುಕಿನಲ್ಲಿ ಅದೆಷ್ಟೋ ಅವಕಾಶಗಳನ್ನು ಬಿಟ್ಟುಬಿಟ್ಟಿದ್ದೇನೆ. ಅಷ್ಟೂ ಚಿತ್ರಗಳನ್ನೂ ನಿರಾಕರಿಸಿದಾಗ ಅಷ್ಟೊಂದು ಸುದ್ದಿಯಾಗಿಲ್ಲ. ಆದರೆ ಇದೀಗ ಶಿವಗಾಮಿ ಪಾತ್ರವನ್ನು ನಿರಾಕರಿಸಿದ್ದಕ್ಕೆ ಇಷ್ಟೊಂದು ಸುದ್ದಿಯಾಗಿರುವುದು ಯಾಕೆ'' ಎಂಬ ಪ್ರಶ್ನೆಯನ್ನಿಟ್ಟಿದ್ದಾರೆ.

ಶ್ರೀದೇವಿಯ ದೀರ್ಘಕಾಲದ ಕನಸು ಕೊನೆಗೂ ನನಸಾಯಿತು! ಏನದು?

ಚಿತ್ರದ ನಿರ್ದೇಶಕ ರಾಜಮೌಳಿ ಮತ್ತು ನಿರ್ಮಾಪಕರು ಮೊದಲು ಶಿವಗಾಮಿ ಪಾತ್ರವನ್ನ ಮಾಡುವಂತೆ ಶ್ರೀದೇವಿ ಆಫರ್ ನೀಡಿದ್ದರು. ಆದ್ರೆ, ಶ್ರೀದೇವಿ ಈ ಪಾತ್ರವನ್ನ ನಿರಾಕರಿಸಿದ್ದರು. ತದ ನಂತರ ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಕೃಷ್ಣ ಅವರಿಗೆ ಈ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತು. ಈ ಪಾತ್ರದಲ್ಲಿ ಯಶಸ್ಸು ಕೂಡ ಕಂಡರು.

'ಬಾಹುಬಲಿ' ಚಿತ್ರವನ್ನ ರಿಜೆಕ್ಟ್ ಮಾಡಿದ್ದ ಅತಿರಥ ಮಹಾರಥರಿವರು.!

English summary
Bollywood Actress Sridevi Speaks on Not Doing Baahubali. ''I refuse Many Films, Why has Rejecting Sivagami Role Become a Big Issue?'' says Sridevi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada