»   » ವಿದ್ಯಾ ಬಾಲನ್ ಮದುವೆ ಹೈಲೈಟ್ಸ್, ಸುದ್ದಿ ಚಿತ್ರಗಳು

ವಿದ್ಯಾ ಬಾಲನ್ ಮದುವೆ ಹೈಲೈಟ್ಸ್, ಸುದ್ದಿ ಚಿತ್ರಗಳು

Posted By:
Subscribe to Filmibeat Kannada

ಬಾಲಿವುಡ್ ತಾರೆ ವಿದ್ಯಾ ಬಾಲನ್ ಮದುವೆ ಶುಕ್ರವಾರ (ಡಿ.14) ವರ್ಣರಂಜಿತವಾಗಿ ನೆರವೇರಿತು. ಯುಟಿವಿ ಸಿಇಓ ಸಿದ್ಧಾರ್ಥ್ ರಾಯ್ ಕಪೂರ್ ಬಾಳಸಂಗಾತಿಯಾಗಿ ವಿದ್ಯಾ ಬಾಲನ್ ನೂತನ ದಾಂಪತ್ಯಕ್ಕೆ ಅಡಿಯಿಟ್ಟಿದ್ದಾರೆ.

ಈ ಮದುವೆಗೆ ಕೇವಲ ಬಂಧು ಬಳಗವಷ್ಟೇ ಸಾಕ್ಷಿಯಾಯಿತು. ಉಳಿದಂತೆ ಯಾವುದೇ ಬಾಲಿವುಡ್ ತಾರೆಗಳು ಕಣ್ಣಿಗೂ ಬಿದ್ದಿಲ್ಲ ಕ್ಯಾಮೆರಾಗೂ ಸಿಕ್ಕಿಲ್ಲ. ಆದರೆ ಎಲ್ಲರೂ ಟ್ವೀಟಿಸಿ ಶುಭಕೋರಿದ್ದಾರೆ. ಮುಂಜಾನೆ 4.45ರ ಶುಭ ಮುಹೂರ್ತದಲ್ಲಿ ಇವರ ಮದುವೆ ನೆರವೇರಿತು.

ವಿದ್ಯಾ ಬಾಲನ್ ಭಲ್ಲೇ ಭಲ್ಲೇ ಮದುವೆ

ಇದು ಪಂಜಾಬಿ ಹಾಗೂ ದಕ್ಷಿಣ ಶೈಲಿಯ ಮದುವೆ. ಅರ್ಧ ಪಂಜಾಬಿ ಶೈಲಿ ಇನ್ನರ್ಧ ಸೌತ್ ಸಂಪ್ರದಾಯದಂತೆ ಮದುವೆ ನಡೆಯಿತು. ಮದುವೆಯನ್ನು ಕಣ್ತುಂಬಿಕೊಂಡವರು ಭಲ್ಲೇ ಭಲ್ಲೇ ಎಂದು ತಲೆಕುಣಿಸಿದ್ದಾರೆ.

ಮದುವೆಗೆ ಅತಿಥಿ ಅಭ್ಯಾಗತರ ಆಗಮನ

ಮದುವೆ ಎಂದರೆ ಕೇವಲ ಗಂಡು ಹೆಣ್ಣಿನಷ್ಟೇ ಇದ್ದರೆ ಆಗುತ್ತದೆಯೇ. ಅಲ್ಲಿ ಹಿರಿಕಿರಿಯರ ಕಲರವ, ವಧು ವರರ ಕಣ್ಸನ್ನೆಗಳು, ಪಿಸು ಮಾತುಗಳಿಗೂ ಬರವಿರಲ್ಲ. ಎಲ್ಲರೂ ಅವರವರ ಕೆಲಸಕಾರ್ಯಗಳಲ್ಲಿ ಬಿಜಿಯೋ ಬಿಜಿ.

ಪಂಚರಂಗಿಯಾದ ಮದರಂಗಿ ಬೆಡಗಿ

ವಿದ್ಯಾ ಬಾಲನ್ ಹಸ್ತ ನೋಡಿದರೇನೇ ಅರ್ಥವಾಗುತ್ತದೆ. ಮದರಂಗಿ ಬಣ್ಣ ಎಷ್ಟು ಗಾಢವಾಗಿದೆ ಎಂದು. ಸಿದ್ಧಾರ್ಥ್ ಬಗೆಗಿನ ಅವರ ಪ್ರೀತಿಯೂ ಅಷ್ಟೇ ಗಾಢ ಅನ್ನಿಸುತ್ತದೆ. ಪಂಚರಂಗಿಯಂತಾದ ಮದರಂಗಿ ಬೆಡಗಿ ವಿಶ್ ಮಾಡಿದ್ದು ಹೀಗೆ.

ಮದುವೆಗೆ ಹೂವಿನ ಅಲಂಕಾರದ ಸ್ವಾಗತ

ವಿದ್ಯಾ ಮದುವೆಗೆ ರಾಶಿರಾಶಿ ಹೂವಿನ ಅಲಂಕಾರ ಹಾಕಲಾಗಿತ್ತು. ಬಣ್ಣಬಣ್ಣದ ಪುಷ್ಪಗಳ ಅಲಂಕಾರ ನೋಡುಗರ ಕಣ್ಣಿಗೆ ಹಿತವಾಗಿ ಮನಸ್ಸಿಗೆ ಆಹ್ಲಾದ ನೀಡುತ್ತಿತ್ತು. ಘಂ ಎನ್ನುವ ಪರಿಮಳ ಮದುವೆ ಮನೆಯಲ್ಲೆಲ್ಲಾ ತುಂಬಿಕೊಂಡಿತ್ತು.

ತಾಳಿ ಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನ ಮಾಲೆ

ಸಿದ್ಧಾರ್ಥ್ ರಾಯ್ ಕಪೂರ್ ಅವರ ವೇಷಭೂಷಣ ನೋಡಿದರೆ...ಇದು ಪಕ್ಕಾ ದಕ್ಷಿಣ ಶೈಲಿ ಮದುವೆ ಅನ್ನಿಸುತ್ತದೆ. ಉತ್ತರ ದಕ್ಷಿಣ ಶೈಲಿಗಳು ಒಂದಾದ ಶುಭ ಘಳಿಗೆ ಇದು.

ಹೊಸ ಹರೆಯದ ಹೊಸ ಜೋಡಿಗೆ ಶುಭಾಶಯ

ಮದುವೆ ಶಾಸ್ತ್ರ ಸಂಪ್ರದಾಯಗಳ ಬಳಿಕ ವಿದ್ಯಾ ಬಾಲನ್ ಹಾಗೂ ಸಿದ್ಧಾರ್ಥ್ ರಾಯ್ ಕಪೂರ್ ಛಾಯಾಗ್ರಾಹಕರ ಮುಂದೆ ನಿಂತ ಘಳಿಗೆ.

ಮದುವೆಯ ಈ ಬಂಧ, ಅನುರಾಗದ ಅನುಬಂಧ

ಮದುವೆ ಸಂಪ್ರದಾಯದ ಭಾಗವಾಗಿ ಹೆಣ್ಣು ಗಂಡಿಗೆ ಅಡ್ಡಲಾಗಿ ಬಟ್ಟೆ ಹಿಡಿಯುವ ಶಾಸ್ತ್ರ. ಇನ್ನೇನು ಗಟ್ಟಿಮೇಳ ಮೊಳಗುವ ಸಮಯ.


ಮುಂಬೈನ ಚೆಂಬೂರು ಪ್ರದೇಶದ ಶ್ರೀ ಸುಬ್ರಹ್ಮಣ್ಯ ಸಮಾಜ್ ಆಲಯದಲ್ಲಿ ಇವರಿಬ್ಬರು ಸರಳವಾಗಿ ಮದುವೆಯಾದರು. ಸಾಮಾನ್ಯವಾಗಿ ಸಿನಿಮಾ ತಾರೆಗಳ ಮದುವೆ ಎಂದರೆ ಅದ್ದೂರಿಯಾಗಿಯೇ ಇರುತ್ತದೆ. ಆದರೆ ವಿದ್ಯಾ ಮಾತ್ರ ಸಿಂಪಲ್ ಆಗಿ ಸಪ್ತಪದಿ ತುಳಿದಿದ್ದಾರೆ. ದಕ್ಷಿಣ ಹಾಗೂ ಪಂಜಾಬಿ ಸಂಪ್ರದಾಯದಂತೆ ಮದುವೆ ನೆರವೇರಿತು. ಚೆನ್ನೈನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಕೇವಲ ಒಂದೇ ಗಂಟೆಯಲ್ಲಿ ಮದುವೆ ಶಾಸ್ತ್ರ ಮುಗಿದಿದೆ. ಈ ಸಂದರ್ಭದಲ್ಲಿ ವಿದ್ಯಾ ಅವರು ಮೂರು ಬಾರಿ ತಮ್ಮ ಸೀರೆಯನ್ನು ಬದಲಾಯಿಸಿಕೊಂಡು ಬಂದರು. ಮುಡಿಗೆ ಘಮ ಘಮ ಎನ್ನುವ ಮಲ್ಲಿಗೆ ಹೂವು, ರೇಶ್ಮೆ ಸೀರೆ ಅದಕ್ಕೆ ಒಪ್ಪುವ ತಿಳಿಗೆಂಪು ರವಿಕೆ ತೊಟ್ಟು ಕಂಗೊಳಿಸುತ್ತಿದ್ದರು.

ಮದುವೆ ಶಾಸ್ತ್ರಗಳು ಮುಗಿಯುತ್ತಿದ್ದಂತೆ ನೂತನ ದಂಪತಿಗಳು ಫೋಟೋಗ್ರಾಫರ್ ಗಳ ಮುಂದೆನಿಂತು ಪೋಸು ನೀಡಿದರು. ಬನಾರಸಿ ರೇಶ್ಮೆ ಸೀರೆ ತೊಟ್ಟಿದ್ದ ವಿದ್ಯಾ ಬಾಲನ್ ಮೈಮೇಲೆ ಚಿನ್ನಾಭರಣಗಳು ನೋಡುಗರ ಕಣ್ಣು ಕುಕ್ಕುತ್ತಿದ್ದವು. ಕೈಗೆ ಗೋರಂಟಿ ರಂಗು ವಿದ್ಯಾರ ತುಟಿಯಷ್ಟೇ ಕೆಂಪಗೆ ಕಂಗೊಳಿಸುತ್ತಿತ್ತು.

English summary
Bollywood Actress Vidya Balan and UTV head Siddharth Roy Kapur marriage highlights. They tied the nuptial knot on Dec 14, 2012 at the Green Mile bungalow in Bandra, Mumbai. Vidya Balan changed her saree thrice during the wedding ceremony.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada