For Quick Alerts
  ALLOW NOTIFICATIONS  
  For Daily Alerts

  ನನ್ನ ಸ್ವಯಂವರದಲ್ಲಿ ವಿಜಯ್ ದೇವರಕೊಂಡ ಇರಬೇಕು ಎಂದ ಚೆಲುವೆ ಯಾರು?

  |

  ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅಂದರೆ ಇಷ್ಟ ಎನ್ನುವ ಬಾಲಿವುಡ್ ನಟಿಯರ ಲಿಸ್ಟ್ ಬೆಳಿತಾನೇ ಇದೆ. ಇದೀಗ ಮತ್ತೊಬ್ಬ ಚೆಲುವೆ ವಿಜಯ್ ದೇವರಕೊಂಡ ಮೇಲೆ ಲೈಟಾಗಿ ಲವ್ವಾಗಿದೆ ಎಂದು ರಾಗ ಎಳಿದಿದ್ದಾಳೆ. ನನ್ನ ಸ್ವಯಂವರದಲ್ಲಿ ರೌಡಿ ಬಾಯ್ ಇರಲೇಬೇಕು ಎಂದಿದ್ದಾಳೆ.

  'ಅರ್ಜುನ್ ರೆಡ್ಡಿ', 'ಗೀತಾ ಗೋವಿಂದ' ಸಿನಿಮಾಗಳಿಂದ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ ನಟ ವಿಜಯ್ ದೇವರಕೊಂಡ. 'ಲೈಗರ್' ಆಗಿ ದೇವರಕೊಂಡ ಈಗ ಬಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅಬ್ಬರಿಸೋಕೆ ತುದಿಗಾಲಲ್ಲಿ ನಿಂತಿರುವ ರೌಡಿ ಬಾಯ್ ಊರೂರು ಸುತ್ತಿ ಸಿನಿಮಾ ಪ್ರಮೋಷನ್ ಮಾಡ್ತಿದ್ದಾರೆ. ದೇವರಕೊಂಡ ಕ್ರೇಜ್ ನೋಡ್ತಿದ್ರೆ, 'ಲೈಗರ್' ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ಟಾಲಿವುಡ್ ಅರ್ಜುನ್ ರೆಡ್ಡಿ ಬಿಟೌನ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಬಾಲಿವುಡ್ ಸ್ಟಾರ್ ನಟಿಯರು ಕೂಡ ಈತನ ಮೋಹದ ಪಾಶಕ್ಕೆ ಬಿದ್ದಿದ್ದಾರೆ.

  ಕರಣ್ ಜೋಹರ್ ನೀಡಿದ್ದ ಬಾಲಿವುಡ್ ಅವಕಾಶ ನಿರಾಕರಿಸಿದ್ದ ವಿಜಯ್ ದೇವರಕೊಂಡ!ಕರಣ್ ಜೋಹರ್ ನೀಡಿದ್ದ ಬಾಲಿವುಡ್ ಅವಕಾಶ ನಿರಾಕರಿಸಿದ್ದ ವಿಜಯ್ ದೇವರಕೊಂಡ!

  ಇತ್ತೀಚೆಗೆ ಜಾನ್ವಿ ಕಪೂರ್, ಸಾರಾ ಅಲಿಖಾನ್ ಸೇರಿದಂತೆ ಸಾಕಷ್ಟು ಬಾಲಿವುಡ್ ನಟಿಯರು ವಿಜಯ್ ದೇವರಕೊಂಡನ ಮೆಚ್ಚಿಕೊಂಡಿದ್ದರು. ಆತನ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ಇದೀಗ ಕೃತಿ ಸನೂನ್ ಕೂಡ ರೌಡಿ ಬಾಯ್ ಅಂದರೆ ಇಷ್ಟ. ಆತನ ನಡೆ ನುಡಿ ಎಲ್ಲವೂ ಚೆಂದ ಎಂದು ಕೊಂಡಾಡಿದ್ದಾರೆ. ದೆಹಲಿ ಚೆಲುವೆ ಕೃತಿ ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರದಲ್ಲಿ ಜಾನಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

   ನನ್ನ ಸ್ವಯಂವರದಲ್ಲಿ ದೇವರಕೊಂಡ ಇರಬೇಕು

  ನನ್ನ ಸ್ವಯಂವರದಲ್ಲಿ ದೇವರಕೊಂಡ ಇರಬೇಕು

  ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಕೃತಿ ಸನೂನ್ "ನನ್ನ ಸ್ವಯಂವರದಲ್ಲಿ ವಿಜಯ್ ದೇವರಕೊಂಡ ಇರಬೇಕು. ರೌಡಿ ಬಾಯ್ ತುಂಬಾ ಸುಂದರವಾಗಿ ಇದ್ದಾರೆ. ಅಷ್ಟೇ ಅಲ್ಲ ತುಂಬಾ ಸೆನ್ಸಿಬಲ್. ಇತ್ತೀಚೆಗೆ ಆತನ ಸಂದರ್ಶನಗಳನ್ನು ನೋಡಿದ್ದೇನೆ. ತುಂಬಾ ರಿಯಲ್ ಹಾಗೂ ಸೆನ್ಸಿಬಲ್ ಆಗಿ ಕಾಣಿಸುತ್ತಿದ್ದಾರೆ" ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

   ಕೃತಿ ಸ್ವಯಂವರದಲ್ಲಿ ಹಾಲಿವುಡ್ ನಟ

  ಕೃತಿ ಸ್ವಯಂವರದಲ್ಲಿ ಹಾಲಿವುಡ್ ನಟ

  ವಿಜಯ್‌ ದೇವರಕೊಂಡ ಜೊತೆಗೆ ಕಾರ್ತಿಕ್ ಆರ್ಯನ್ ಹಾಗೂ ಆದಿತ್ಯಾ ರಾಯ್ ಕಪೂರ್ ಕೂಡ ಸ್ವಯಂವರದಲ್ಲಿ ಇರಬೇಕು ಎಂದು ಕೃತಿ ಸನೂನ್ ಹೇಳಿದ್ದಾರೆ. "ಇನ್ನು ಮದುವೆಯಾಗದೇ ಇರುವ ಸ್ಟಾರ್‌ ಕಲಾವಿದರೆಲ್ಲಾ ಸ್ವಯಂವರಕ್ಕೆ ಬರಬಹುದು. ಅದೇ ರೀತಿ ನನಗೆ ಹಾಲಿವುಡ್ ನಟ ರ್ಯಾನ್ ಗೌಸ್ಲಿಂಗ್ ಜೊತೆ ನಟಿಸಬೇಕು ಎನ್ನುವ ಆಸೆ ಇದೆ. ಆತನೂ ಸ್ವಯಂವರದಲ್ಲಿರಬೇಕು ಎಂದುಕೊಂಡಿದ್ದೇನೆ" ಎಂದು ಬಾಲಿವುಡ್ ಬ್ಯೂಟಿ ಹೇಳಿದ್ದಾರೆ.

   ಸೀತಾದೇವಿ ಪಾತ್ರದಲ್ಲಿ ಕೃತಿ ಸನೂನ್

  ಸೀತಾದೇವಿ ಪಾತ್ರದಲ್ಲಿ ಕೃತಿ ಸನೂನ್

  500 ಕೋಟಿ ರೂ. ಬಜೆಟ್‌ನಲ್ಲಿ ಓಂ ರಾವುತ್ 'ಆದಿಪುರುಷ್' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ರೆ, ಸೀತಾಮಾತೆಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಟಿ-ಸೀರಿಸ್ ಹಾಗೂ ರೆಟ್ರೊಫಿಲಿಸ್ ಸಂಸ್ಥೆಗಳು ಚಿತ್ರವನ್ನು ನಿರ್ಮಾಣ ಮಾಡಿವೆ. ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ಈ ಸಿನಿಮಾ ಸಿದ್ಧವಾಗುತ್ತಿದೆ.

   ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ಕೃತಿ

  ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ಕೃತಿ

  ತೆಲುಗಿನ 'ನೇನೊಕ್ಕಡಿನೇ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೃತಿ ಸನೂನ್ ಮುಂದೆ ಬಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿಯಾದರು. ಈ ದೆಹಲಿ ಚೆಲುವೆಗೆ ಈವರೆಗೆ ದೊಡ್ಡ ಬ್ರೇಕ್‌ ಸಿಕ್ಕಿಲ್ಲ. ಇತ್ತೀಚೆಗೆ 'ಮಿಮಿ' ಚಿತ್ರದಲ್ಲಿ ಕೃತಿ ಬಿಂದಾಸ್ ಆಗಿ ಕುಣಿಸಿದ್ದ 'ಪರಮ್ ಸುಂದರಿ' ಸಾಂಗ್ ಸೂಪರ್ ಹಿಟ್ ಆಗಿತ್ತು. ಸದ್ಯ 'ಆದಿಪುರುಷ್' ಜೊತೆಗೆ 'ಭೇದಿಯಾ', 'ಗಣಪತ್', 'ಶೇಹಜಾದಾ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಪ್ರಭಾಸ್ ಜೊತೆ ನಟಿಸುತ್ತಾ ವಿಜಯ್ ದೇವರಕೊಂಡನ ಹೊಗಳಿ ಅಟ್ಟಕ್ಕೇರಿಸಿರುವುದು ಡಾರ್ಲಿಂಗ್‌ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ.

  Recommended Video

  Bigg Boss ಮನೆಯೊಳಗೆ ಎಲ್ಲರು ನಾಟಕವಾಡಿಕೊಂಡೆ ದಿನ ಕಳೆಯುತ್ತಿದ್ದಾರೆ | Kiran Yogeshwar *Interview
  English summary
  Adipurush Actress Kriti Sanon Wants Vijay Devarakonda At Her Swayamvar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X