Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಆದಿಪುರುಷ್': ಸೀತೆಯ ಉಡುಪಿನ ಬಗ್ಗೆ ಆಕ್ಷೇಪ, ಸೆನ್ಸಾರ್ ಬೋರ್ಡ್‌ಗೆ ನೊಟೀಸ್ ನೀಡಿದ ನ್ಯಾಯಾಲಯ
ಪ್ರಭಾಸ್ ನಟಿಸಿರುವ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ಮುನ್ನವೇ ಪ್ರೇಕ್ಷಕರಿಗೆ ಟೀಕೆಗೊಳಗಾಗಿದೆ. ಇದರ ಬೆನ್ನಲ್ಲೆ ಈಗ ಸಿನಿಮಾಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.
ರಾಮಾಯಣ ಕತೆಯುಳ್ಳ 'ಆದಿಪುರುಷ್' ಸಿನಿಮಾದ ಮೇಕಿಂಗ್, ಪೌರಾಣಿಕ ಪಾತ್ರಗಳನ್ನು ಪ್ರಸ್ತುತ ಪಡಿಸಿರುವ ರೀತಿ, ಪಾತ್ರಗಳ ತಿರುಚುವಿಕೆ, ಕಳಪೆ ವಿಎಫ್‌ಎಕ್ಸ್ ಇನ್ನೂ ಕೆಲವು ಕಾರಣಗಳಿಗೆ ಈಗಾಗಲೇ ಚಿತ್ರತಂಡ ತೀವ್ರ ಟೀಕೆಗೆ ಒಳಗಾಗಿದೆ.
ಇದರ ಬೆನ್ನಲ್ಲೆ ಅಲಹಾಬಾದ್ ನ್ಯಾಯಾಲವು 'ಆದಿಪುರುಷ್' ಸಿನಿಮಾಕ್ಕೆ ಸಂಬಂಧಿಸಿದಂತೆ ಸೆನ್ಸಾರ್ ಮಂಡಳಿಗೆ ನೊಟೀಸ್ ಜಾರಿ ಮಾಡಿದ್ದು ಸ್ಪಷ್ಟನೆ ನೀಡುವಂತೆ ಕೋರಿದೆ.
ಕುಲದೀಪ್ ತಿವಾರಿ ಎಂಬುವರು 'ಆದಿಪುರುಷ್' ಸಿನಿಮಾ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಸಿನಿಮಾದಲ್ಲಿ ರಾಮಾಯಣದ ಪಾತ್ರಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರು. ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್ ಸೆನ್ಸಾರ್ ಬೋರ್ಡ್‌ಗೆ ನೊಟೀಸ್ ನೀಡಿದ್ದು, ಉತ್ತರಿಸುವಂತೆ ಸೂಚಿಸಿದೆ.
'ಸೆನ್ಸಾರ್ ಬೋರ್ಡ್‌ನ ಅನುಮತಿಯೊಂದಿಗೆ ಬಿಡುಗಡೆ ಮಾಡಿರುವ 'ಆದಿಪುರುಷ್' ಪ್ರೋಮೋನಲ್ಲಿ ಸೀತೆ ಪಾತ್ರಧಾರಿಯ ಉಡುಪು ಆಕ್ಷೇಪಾರ್ಹವಾಗಿದೆ. ಅಲ್ಲದೆ, ಪ್ರೋಮೋನಲ್ಲಿ ಶ್ರೀರಾಮ ಹಾಗೂ ಸೀತಾ ಮಾತೆಯ ಧಾರ್ಮಿಕ ನಂಬಿಕೆಯ ವಿರುದ್ಧ ರೀತಿಯಲ್ಲಿ ಪ್ರದರ್ಶಿಸಲಾಗಿದೆ. ಹಾಗೂ ರಾವಣನ ಪಾತ್ರವನ್ನು ಸಹ ಪ್ರಶ್ನಾರ್ಹವಾಗಿ ಚಿತ್ರಿಸಲಾಗಿದೆ'' ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 21 ಕ್ಕೆ ಮುಂದೂಡಲಾಗಿದ್ದು, ಆ ಒಳಗೆ ಸೆನ್ಸಾರ್ ಬೋರ್ಡ್ ಹಾಗೂ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕರು ನ್ಯಾಯಾಲಯಕ್ಕೆ ಉತ್ತರ ಸಲ್ಲಿಸಬೇಕಿದೆ.
'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದು, ಸೀತೆಯ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದಾರೆ. ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಓಂ ರಾವತ್ ನಿರ್ದೇಶಿಸಿದ್ದಾರೆ ನಿರ್ಮಾಣ ಮಾಡಿರುವುದು ಟಿ ಸೀರೀಸ್‌ನ ಭೂಷಣ್ ಕುಮಾರ್.