For Quick Alerts
  ALLOW NOTIFICATIONS  
  For Daily Alerts

  ಯುವ ಗಾಯಕನ ವಿವಾಹ: ಮೋದಿ-ಅಮಿತಾಬ್ ಗೆ ಆಹ್ವಾನ

  |

  ಹಿರಿಯ ಗಾಯಕ, ಸಹೃದಯಿ ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ವಿವಾಹ ನಿಶ್ಚಯವಾಗಿದ್ದು, ಭಾರಿ ಅದ್ಧೂರಿಯಾಗಿ ಮದುವೆ ಮಾಡಲು ಉದಿತ್ ನಾರಾಯಣ್ ಸಜ್ಜಾಗಿದ್ದಾರೆ.

  ಆದಿತ್ಯ ನಾರಾಯಣ್ ಹಾಗೂ ಶ್ವೇತ ಅಗರ್ವಾಲ್ ವಿವಾಹ ಮುಂಬರುವ ಮಂಗಳವಾರ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಹಲವಾರು ಗಣ್ಯರನ್ನು ವಿವಾಹಕ್ಕೆ ಆಹ್ವಾನಿಸಿದ್ದಾರೆ ಉದಿತ್ ನಾರಾಯಣ್.

  ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ 'ಮಹಾಭಾರತ' ಧಾರಾವಾಹಿಯ ಅರ್ಜುನರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ 'ಮಹಾಭಾರತ' ಧಾರಾವಾಹಿಯ ಅರ್ಜುನ

  ಸಂದರ್ಶನವೊಂದರಲ್ಲಿ ಮಾತನಾಡಿರುವ ಉದಿತ್ ನಾರಾಯಣ್, ಹಲವು ವರ್ಷಗಳಿಂದಲೂ ನಾನು ಬಾಲಿವುಡ್‌ನಲ್ಲದ್ದೇನೆ, ಹಲವಾರು ಸ್ನೇಹಿತರು ಇಲ್ಲಿದ್ದಾರೆ ಅವರನ್ನೆಲ್ಲಾ ಮದುವೆಗೆ ಕರೆಯದೇ ಇರಲಾಗದು ಎಂದಿದ್ದಾರೆ ಉದಿತ್ ನಾರಾಯಣ್.

  ಅಮಿತಾಬ್ ಬಚ್ಚನ್, ನರೇಂದ್ರ ಮೋದಿ ಇನ್ನೂ ಹಲವರು ಖ್ಯಾತನಾಮರನ್ನು ಆಹ್ವಾನಿಸಿರುವುದಾಗಿ ಹೇಳಿರುವ ಉದಿತ್ ನಾರಾಯಣ್, ಕೋವಿಡ್ ಕಾರಣದಿಂದ ಖ್ಯಾತ ನಟರು, ನಾಯಕರು ಮದುವೆಗೆ ಬರದೇ ಇರಬಹುದು ಎಂದು ಸಹ ಹೇಳಿದ್ದಾರೆ.

  ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಸಹ ಗಾಯಕರೇ ಆಗಿದ್ದು, ಶೋ ಒಂದರ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಆದಿತ್ಯ ಮದುವೆ ನೇಹಾ ಕಕ್ಕರ್ ಜೊತೆ ಆಗಲಿದೆ ಎನ್ನಲಾಗಿತ್ತು, ಆದರೆ ನೇಹಾ ಕಕ್ಕರ್ ಪಂಜಾಬಿ ಗಾಯಕರೊಬ್ಬರೊಂದಿಗೆ ಮದುವೆಯಾದರು, ಈಗ ಆದಿತ್ಯ ನಾರಾಯಣ್, ಶ್ವೇತಾ ಜೊತೆಗೆ ವಿವಾಹವಾಗುತ್ತಿದ್ದಾರೆ.

  English summary
  Udit Narayan's son Adithya Narayan's marriage on December 01. Udit invites PM Mobi, Amitabh Bachchan for marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X