For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟಿಯಿಂದ ಅತ್ಯಾಚಾರ ಆರೋಪ: ಎಫ್‌ಐಆರ್ ರದ್ದು ಕೋರಿ ಕೋರ್ಟ್ ಮೊರೆಹೋದ ನಟ

  |

  ನಟ ಆದಿತ್ಯ ಪಂಚೋಲಿ ಬಾಲಿವುಡ್‌ನ ನಿಜ ಅರ್ಥದ ಬ್ಯಾಡ್‌ಬಾಯ್. ಎರಡು ಅತ್ಯಾಚಾರ ಆರೋಪಗಳನ್ನು ಎದುರಿಸುತ್ತಿರುವ ಆದಿತ್ಯ ಪಂಚೋಲಿ ತಮ್ಮ ವಿರುದ್ಧ ಮಾಡಾಗಿರುವ ಆರೋಪ ಕೈಬಿಡಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ.

  ಬಾಲಿವುಡ್‌ನ ಸ್ಟಾರ್ ನಟಿ ಕಂಗನಾ ರನೌತ್, ಆದಿತ್ಯ ಪಂಚೋಲಿ ವಿರುದ್ಧ ಅತ್ಯಾಚಾರ, ದೈಹಿಕ, ಮಾನಸಿಕ ಹಿಂಸೆ ನೀಡಿದ ಆರೋಪವನ್ನು ಆದಿತ್ಯ ಪಂಚೋಲಿ ಮೇಲೆ ಹೊರಿಸಿದ್ದರು. 2019ರಲ್ಲಿ ನಟಿಯು ಆದಿತ್ಯ ಪಂಚೋಲಿ ವಿರುದ್ಧ ದೂರು ಸಲ್ಲಿಸಿದ್ದರು. ಪೊಲೀಸರು ಎಫ್‌ಐಆರ್ ಸಹ ದಾಖಲಿಸಿಕೊಂಡಿದ್ದಾರೆ.

  ಆದರೆ ಈವರೆಗೆ ಆದಿತ್ಯ ಪಂಚೋಲಿ ವಿರುದ್ಧ ಯಾವುದೇ ಚಾರ್ಜ್‌ಶೀಟ್ ಅನ್ನಾಗಲಿ, ಕ್ಲೋಸರ್ ರಿಪೋರ್ಟ್ ಅನ್ನಾಗಲಿ ದಾಖಲಿಸಿಲ್ಲ. ಹಾಗಾಗಿ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿರುವ ಆದಿತ್ಯ ಪಂಚೋಲಿ, ತಮ್ಮ ವಿರುದ್ಧ 2019 ರಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದು ಮಾಡುವಂತೆ ಕೋರಿದ್ದಾರೆ.

  ಆದಿತ್ಯ ಪಂಚೋಲಿ ವಿರುದ್ಧ ಕೆಲವು ಸಂದರ್ಶನಗಳಲ್ಲಿಯೂ ಮಾತನಾಡಿರುವ ಕಂಗನಾ ರನೌತ್, ''ಸಿನಿಮಾ ರಂಗದ ಆರಂಭದ ದಿನಗಳಲ್ಲಿ ತಾನು ಆದಿತ್ಯ ಪಂಚೋಲಿ ಜೊತೆಗಿದ್ದನೆಂದು ಆತ ತನ್ನ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ್ದಾಗಿಯೂ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿದ್ದಾಗಿ ಹೇಳಿದ್ದಾರೆ. ತನ್ನನ್ನು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ಕೊಟ್ಟಿದ್ದಾಗಿ ಹೇಳಿದ್ದ ಕಂಗನಾ, ತಾನು ಒಂದನೇ ಮಹಡಿಯ ಕಿಟಕಿಯಿಂದ ಹಾರಿ ತಪ್ಪಿಸಿಕೊಂಡಿದ್ದಾಗಿ'' ಹೇಳಿದ್ದರು. 2019 ರಲ್ಲಿ ಸಲ್ಲಿಸಿರುವ ದೂರಿನಲ್ಲಿ ತಮ್ಮ ಮೇಲೆ ಮಾತ್ರವೇ ಅಲ್ಲದೆ ತನ್ನ ಸಹೋದರಿಯ ಮೇಲೂ ಆದಿತ್ಯ ಪಂಚೋಲಿ ಹಲ್ಲೆ ಎಸಗಿದ್ದಾನೆ ಎಂದಿದ್ದರು.

  ಇದೇ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿರುವ ಆಟೋ ಚಾಲಕನೊಬ್ಬ, ಆದಿತ್ಯ ಪಂಚೋಲಿಯು, ಆಟೋದಲ್ಲಿ ತೆರಳುತ್ತಿದ್ದ ಕಂಗನಾ ರನೌತ್ ಅನ್ನು ಅಡ್ಡಗಟ್ಟಿ, ಆಕೆಯನ್ನು ಕೆಳಗೆ ಎಳೆದು ಆಕೆಯ ಮುಖಕ್ಕೆ ಹಲ್ಲೆ ಮಾಡಿದ್ದಾಗಿ ಹೇಳಿದ್ದಾನೆ.

  ಇನ್ನು ಆದಿತ್ಯ ಪಂಚೋಲಿ ವಿರುದ್ಧ ಇದೊಂದೆ ಅತ್ಯಾಚಾರ ಪ್ರಕರಣ ಅಲ್ಲದೆ ಇನ್ನೂ ಒಂದು ಪ್ರಕರಣವಿದೆ. ಆದಿತ್ಯ ಪಂಚೋಲಿ ತನ್ನ ಗರ್ಲ್‌ ಫ್ರೆಂಡ್ ಆಗಿದ್ದ ಪೋಜಾ ಬೇಡಿಯ ಮನೆಯ ಕೆಲಸದಾಕೆಯ ಮೇಲ ಅತ್ಯಾಚಾರ ಎಸಗಿದ್ದ. 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪಂಚೋಲಿ ವಿರುದ್ಧ ಪ್ರಕರಣ ಚಾಲ್ತಿಯಲ್ಲಿದೆ.

  ಇವೆರಡರ ಹೊರತಾಗಿ 2005ರಲ್ಲಿ ಉದ್ಯಮಿಯೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿಯೂ ಅಪರಾಧಿ ಎಂದು ಸಾಬೀತಾಗಿದ್ದು, ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ಆದರೆ ಪಂಚೋಲಿ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.

  Recommended Video

  Luckyman | ಒಂದೇ ವೇದಿಕೆಯಲ್ಲಿ ಸುದೀಪ್ ರಾಕ್ ಲೈನ್ Rockline Venkatesh | Sudeep | Filmibeat Kannada
  English summary
  Actor Aditya Pancholi moves high court to squash rape case FIR against him. Star bollywood actress lodged complaint against him in 2019.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X