For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ 2' ಆರ್ಭಟ: 'ಕಾಂತಾರ' ಕಲೆಕ್ಷನ್ ಲೆಕ್ಕಾಚಾರವೇನು?

  |

  ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ' ರಿಲೀಸ್ ಆಗಿ ಆರು ವಾರಗಳು ಕಳೆದಿವೆ. 'ಕಾಂತಾರ' ಓಟಕ್ಕೆ ತಡೆ ಒಡ್ಡುವವರೇ ಯಾರು ಇಲ್ಲ ಎನ್ನುವಾಗಲೇ 'ದೃಶ್ಯಂ 2' ಎಂಟ್ರಿ ಕೊಟ್ಟು ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುವುದಕ್ಕೆ ಶುರು ಮಾಡಿದೆ.

  'ದೃಶ್ಯಂ 2' ಎಂಟ್ರಿ ಕೊಟ್ಟಿದ್ದರಿಂದ 'ಕಾಂತಾರ' ಹಿಂದಿ ಅವರಣಿಕೆ ಮೇಲೆ ಪ್ರಭಾವ ಬೀರಲಿದೆಯೇ? ಎಂಬ ಲೆಕ್ಕಾಚಾರ ಶುರುವಾಗಿದೆ. ಹಾಗಂತ ಆರನೇ ವಾರವೂ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಹಿಂದೆ ಉಳಿದುಕೊಂಡಿಲ್ಲ.

  'ಕಾಂತಾರ' ಯಶಸ್ಸಿನ ಬಳಿಕ ತೆರೆಮೇಲೆ ಮೂಡಲಿದೆ ಕೊರಗಜ್ಜನ ಮಹಿಮೆ? ಸಿನಿಮಾ ಮಾಡ್ತಿರೋದ್ಯಾರು?'ಕಾಂತಾರ' ಯಶಸ್ಸಿನ ಬಳಿಕ ತೆರೆಮೇಲೆ ಮೂಡಲಿದೆ ಕೊರಗಜ್ಜನ ಮಹಿಮೆ? ಸಿನಿಮಾ ಮಾಡ್ತಿರೋದ್ಯಾರು?

  ಬಾಲಿವುಡ್ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಕಾಂತಾರ'ಗೆ ಬಾಕ್ಸಾಫೀಸ್‌ನಲ್ಲಿ ಇನ್ನೂ ಭವಿಷ್ಯವಿದೆ. 'ದೃಶ್ಯಂ 2' ಕಲೆಕ್ಷನ್ ದೊಡ್ಡದಿದ್ದರೂ, ರಿಷಬ್ ಶೆಟ್ಟಿ ಸಿನಿಮಾಗೇನು ಎಫೆಕ್ಟ್ ಆಗುವುದಿಲ್ಲ ಅನ್ನೋದು ಕೆಲವರ ಅಭಿಪ್ರಾಯ. ಹಾಗಿದ್ರೆ, 'ದೃಶ್ಯಂ 2' ರಿಲೀಸ್ ಬಳಿಕ 'ಕಾಂತಾರ' ಕಲೆಕ್ಷನ್ ಹೇಗಿದೆ? 100 ಕೋಟಿ ಕಲೆಕ್ಷನ್ ಮಾಡುತ್ತಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ 'ದೃಶ್ಯಂ 2'

  ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ 'ದೃಶ್ಯಂ 2'

  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮತ್ತೊಮ್ಮೆ ಹಿಂದಿ ಸಿನಿಮಾ ಮಂದಿಯ ಪರ್ವ ಆರಂಭ ಆಗಿದೆ. ಅದು ಎಂತಹದ್ದೇ ಸಿನಿಮಾ ಮಾಡಿದರೂ, ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಕಚ್ಚಿಕೊಳ್ಳುತ್ತಲೇ ಇರಲಿಲ್ಲ. ಆದ್ರೀಗ 'ದೃಶ್ಯಂ 2' ಬಾಲಿವುಡ್ ಮಂದಿಯ ಆತಂಕವನ್ನು ಹೊಡೆದುರುಳಿಸಿದೆ. ಬಾಕ್ಸಾಫೀಸ್‌ನಲ್ಲಿ ಮೂರೇ ದಿನಕ್ಕೆ 64 ಕೋಟಿ ರೂಪಾಯಿ ಕಲೆ ಹಾಕಿ ಸಿನಿಮಾ ಮಂದಿಗೆ ಕಿಕ್ ಕೊಟ್ಟಿದೆ. ಆದರೆ, ಇನ್ನೊಂದು ಕಡೆ ಬಾಕ್ಸಾಫೀಸ್‌ಗೆ ಬೇಲಿ ಹಾಕಿಟ್ಟುಕೊಂಡಿದ್ದ 'ಕಾಂತಾರ' ಕಲೆಕ್ಷನ್ ಡ್ರಾಪ್ ಆಗುತ್ತಾ? 100 ಕೋಟಿ ಕ್ಲಬ್ ಸೇರುತ್ತಾ? ಅನ್ನೋ ಪ್ರಶ್ನೆ ಹುಟ್ಕೊಂಡಿದೆ.

  6ನೇ ವಾರದಲ್ಲಿ 'ಕಾಂತಾರ' ಕಥೆಯೇನು?

  6ನೇ ವಾರದಲ್ಲಿ 'ಕಾಂತಾರ' ಕಥೆಯೇನು?

  'ಕಾಂತಾರ' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಆರು ವಾರಗಳ ದರ್ಬಾರ್ ಮಾಡಿದೆ. ಅದ್ಯಾವುದೇ ಬಾಲಿವುಡ್ ಸಿನಿಮಾ ರಿಲೀಸ್ ಆದರೂ ಜಗ್ಗದೆ ಮುನ್ನುಗ್ಗಿತ್ತು. ಸೂಪರ್‌ಸ್ಟಾರ್ ಸಿನಿಮಾಗಳಿಗೂ ಟಕ್ಕರ್ ಕೊಟ್ಟು ಅಬ್ಬರಿಸಿತ್ತು. ಈಗ 'ದೃಶ್ಯಂ 2' ತೆರೆಕಂಡ ಬಳಿಕ ಗಳಿಕೆಯಲ್ಲಿ ಇಳಿಕೆ ಕಾಣಬಹುದೇನೋ ಅನ್ನೋ ಲೆಕ್ಕಾಚಾರ ಶುರುವಾಗಿತ್ತು. ಆದರೆ, 6ನೇ ವೀಕೆಂಡ್‌ನಲ್ಲಿ 'ಕಾಂತಾರ' ಸುಮಾರು 1.85 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್‌ನಲ್ಲಿ ವರದಿಯಾಗಿದೆ.

  ಈ ವಾರ ಕಾಂತಾರ ಟಾರ್ಗೆಟ್ ₹90 ಕೋಟಿ

  ಈ ವಾರ ಕಾಂತಾರ ಟಾರ್ಗೆಟ್ ₹90 ಕೋಟಿ

  ಆರನೇ ವಾರದ ಹೊತ್ತಿಗೆ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಕಲೆ ಹಾಕಿದ್ದು ಸುಮಾರು ₹81 ಕೋಟಿ ರೂಪಾಯಿ. ಹೀಗಾಗಿ 'ಕಾಂತಾರ' ಮುಂದಿನ ಟಾರ್ಗೆಟ್ 90 ಕೋಟಿ ರೂಪಾಯಿ. ಇದೇ ವಾರದ ಹೊತ್ತಿಗೆ 90 ಕೋಟಿ ರೂ. ಕಲೆಕ್ಷನ್ ಮಾಡುತ್ತಾ ಅನ್ನೋದನ್ನು ಎದುರು ನೋಡುತ್ತಿದ್ದಾರೆ. ಈ ವಾರ 'ದೃಶ್ಯಂ 2' ಸಿನಿಮಾ ಕಡೆಗೆ ಜನರು ವಾಲಿದರೆ, 'ಕಾಂತಾರ' 90 ಕೋಟಿ ರೂ. ಕಲೆ ಹಾಕೋದು ಅನುಮಾನ ಎಂದೂ ಹೇಳಲಾಗುತ್ತಿದೆ. ಹೀಗಾಗಿ 'ದೃಶ್ಯಂ 2'ಗೂ ಹಾಗೂ 'ಕಾಂತಾರ' ಎರಡೂ ಸಿನಿಮಾ ಈ ವಾರ ತುಂಬಾನೇ ಮುಖ್ಯ.

  'ಕಾಂತಾರ' ಓಟಿಟಿ ರಿಲೀಸ್ ಯಾವಾಗ?

  'ಕಾಂತಾರ' ಓಟಿಟಿ ರಿಲೀಸ್ ಯಾವಾಗ?

  'ಕಾಂತಾರ' ಹವಾ ಇನ್ನೂ ಕಮ್ಮಿಯಾಗಿಲ್ಲ. ಹಿಂದಿಯಲ್ಲಿ ₹100 ಕೋಟಿ ದಾಟಲು ಹೆಚ್ಚು ಕಡಿಮೆ 20 ಕೋಟಿ ಬೇಕಿದೆ. ಅದೇ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಈ ಸಿನಿಮಾ ಇನ್ನೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಈ ಮಧ್ಯೆ ಓಟಿಟಿಗೆ ರಿಲೀಸ್ ಬಗ್ಗೆನೂ ಟಾಕ್ ಶುರುವಾಗಿದೆ. ಆದರೆ, ಪ್ರೊಡಕ್ಷನ್ ಕಂಪನಿಯಾಗಲಿ, ಓಟಿಟಿ ಸಂಸ್ಥೆಯಾಗಲಿ ಇನ್ನೂ ಅಧಿಕೃತವಾಗಿ ಮಾಹಿತಿಯನ್ನು ಹೊರ ಹಾಕಿಲ್ಲ.

  English summary
  After Drishyam 2 Success In What About Kantara Box Office Collection In Hindi, Know More.
  Monday, November 21, 2022, 18:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X