For Quick Alerts
  ALLOW NOTIFICATIONS  
  For Daily Alerts

  ಅಕ್ಕನ ಹಾದಿಯಲ್ಲಿ ತಂಗಿ: ಶ್ರೀದೇವಿ ಕಿರಿಯ ಪುತ್ರಿ ಖುಷಿ ಕೂಡ ಬಾಲಿವುಡ್ ಗೆ.?

  By Harshitha
  |

  ನೂಲಿನಂತೆ ಸೀರೆ, ತಾಯಿಯಂತೆ ಮಗಳು ಅಂತಾರಲ್ಲ... ಹಾಗೆ ಬಹುಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡ ಶ್ರೀದೇವಿಯಂತೆಯೇ ಹಿರಿಯ ಮಗಳು ಜಾಹ್ನವಿ ಕಪೂರ್ ಕೂಡ ಬಾಲಿವುಡ್ ಲೋಕಕ್ಕೆ ಅಡಿಯಿಟ್ಟರು.

  'ಧಡಕ್' ಸಿನಿಮಾ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಜಾಹ್ನವಿ ಕಪೂರ್ ಗೆ ಪ್ರೇಕ್ಷಕ ಮಹಾಪ್ರಭು ಭರಪೂರವಾಗಿಯೇ ಬರಮಾಡಿಕೊಂಡರು. ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ಧಡಕ್' ಬಿಡುಗಡೆ ಆದ ನಾಲ್ಕು ದಿನಗಳಲ್ಲಿಯೇ 39.19 ಕೋಟಿ ಕಲೆಕ್ಷನ್ ಮಾಡಿದೆ.

  ಮೊಟ್ಟ ಮೊದಲ ಪ್ರಯತ್ನದಲ್ಲಿಯೇ ಜಾಹ್ನವಿ ಕಪೂರ್ ಪಾಸ್ ಆಗಿದ್ದಾರೆ. ಜಾಹ್ನವಿ ಕಪೂರ್ ನಟನೆ ಬಗ್ಗೆ ಅನಿಲ್ ಕಪೂರ್, ಸೋನಂ ಕಪೂರ್, ಮಾಧುರಿ ದೀಕ್ಷಿತ್ ಸೇರಿದಂತೆ ಬಾಲಿವುಡ್ ದಿಗ್ಗಜರೇ ಹಾಡಿ ಹೊಗಳಿದ್ದಾರೆ.

  ಬಾಲಿವುಡ್ ನಲ್ಲಿ ಜಾಹ್ನವಿ ಕಪೂರ್ ಭದ್ರ ನೆಲೆ ಕಂಡುಕೊಳ್ಳುತ್ತಿರುವಾಗಲೇ, ಖುಷಿ ಕಪೂರ್ ಕೂಡ ನಟನೆ ಬಗ್ಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಸದ್ಯದಲ್ಲಿಯೇ ಖುಷಿ ಕಪೂರ್ ಕೂಡ ಬಾಲಿವುಡ್ ಗೆ ಪದಾರ್ಪಣೆ ಮಾಡಿದರೆ ಅಚ್ಚರಿ ಇಲ್ಲ.! ಮುಂದೆ ಓದಿರಿ...

  ಸುಳಿವು ನೀಡಿದ ತಂದೆ ಬೋನಿ ಕಪೂರ್

  ಸುಳಿವು ನೀಡಿದ ತಂದೆ ಬೋನಿ ಕಪೂರ್

  ತಾಯಿ ಶ್ರೀದೇವಿ ಹಾಗೂ ಅಕ್ಕ ಜಾಹ್ನವಿ ಕಪೂರ್ ಹಾದಿಯಲ್ಲಿಯೇ ಸಾಗಲು ಖುಷಿ ಕಪೂರ್ ಮನಸ್ಸು ಮಾಡಿದ್ದಾರಂತೆ. ಹಾಗಂತ ಸ್ವತಃ ತಂದೆ ಬೋನಿ ಕಪೂರ್ ಸಂದರ್ಶನವೊಂದರಲ್ಲಿ ಬಾಯಿಬಿಟ್ಟಿದ್ದಾರೆ.

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವಿದ್ಯಾವಂತೆಯಂತೆ.? ಹೌದೇನು.?ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವಿದ್ಯಾವಂತೆಯಂತೆ.? ಹೌದೇನು.?

  ಖುಷಿಗೆ ನಟನೆ ಮೇಲೆ ಆಸಕ್ತಿ

  ಖುಷಿಗೆ ನಟನೆ ಮೇಲೆ ಆಸಕ್ತಿ

  ''ಮಕ್ಕಳ ಕನಸುಗಳಿಗೆ ನಾನೆಂದೂ ಅಡ್ಡಿ ಆಗಿಲ್ಲ. ಹಾಗ್ನೋಡಿದ್ರೆ, ಖುಷಿಗೆ ಮಾಡೆಲ್ ಆಗಬೇಕು ಎಂಬ ಆಸೆ ಇತ್ತು. ಆದ್ರೆ, ಈಗ ಆಕೆಯ ಗಮನ ನಟನೆ ಮೇಲಿದೆ. ನಟಿಯಾಗುವ ಹಂಬಲ ಆಕೆಗಿದೆ'' ಎಂದು ಹೇಳಿದ್ದಾರೆ ನಿರ್ಮಾಪಕ ಬೋನಿ ಕಪೂರ್.

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.?ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.?

  ಸದ್ಯದಲ್ಲಿಯೇ ಘೋಷಣೆ

  ಸದ್ಯದಲ್ಲಿಯೇ ಘೋಷಣೆ

  ಮಗಳು ಖುಷಿ ಕಪೂರ್ ನ ತಮ್ಮದೇ ಬ್ಯಾನರ್ ಮೂಲಕ ಬೋನಿ ಕಪೂರ್ ಲಾಂಚ್ ಮಾಡ್ತಾರಾ.? ಇಲ್ಲ ಆಕೆಯನ್ನ ಕರಣ್ ಜೋಹರ್ ಪರಿಚಯ ಮಾಡ್ತಾರಾ ಅನ್ನೋದಿನ್ನೂ ಪಕ್ಕಾ ಆಗಿಲ್ಲ. ಆದ್ರೆ, ಸದ್ಯದಲ್ಲಿಯೇ ಕಪೂರ್ ಕುಟುಂಬದಿಂದ ದೊಡ್ಡ ಅನೌನ್ಸ್ ಮೆಂಟ್ ಬರುವುದು ಖಚಿತ ಎನ್ನಲಾಗಿದೆ.

  ಖುಷಿ ಕಪೂರ್ ಸರದಿ

  ಖುಷಿ ಕಪೂರ್ ಸರದಿ

  ಕಪೂರ್ ಕುಟುಂಬಕ್ಕೂ ನಟನೆಗೂ ಹಿಂದಿನಿಂದಲೂ ನಂಟು. ಶ್ರೀದೇವಿ, ಅನಿಲ್ ಕಪೂರ್, ಸೋನಂ ಕಪೂರ್, ಅರ್ಜುನ್ ಕಪೂರ್.... ಇವರೆಲ್ಲಾ ಬಾಲಿವುಡ್ ನಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಸಹಜವಾಗಿ, ನಟನೆ ಬಗ್ಗೆ ಜಾಹ್ನವಿ ಹಾಗೂ ಖುಷಿಗೆ ಆಸಕ್ತಿ ಇದ್ದೇ ಇದೆ. ಜಾಹ್ನವಿ ಅಂತೂ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದಾಯ್ತು. ಇನ್ನೇನಿದ್ದರೂ ಖುಷಿ ಕಪೂರ್ ಸರದಿ.

  English summary
  After Janhvi Kapoor, Sridevi's younger daughter Khushi Kapoor to enter Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X