For Quick Alerts
  ALLOW NOTIFICATIONS  
  For Daily Alerts

  NCB ವಿಚಾರಣೆ ಬಳಿಕ ಮತ್ತೆ ಗೋವಾಗೆ ಹೊರಟ ನಟಿ ದೀಪಿಕಾ ಪಡುಕೋಣೆ

  |

  ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಎನ್ ಸಿ ಬಿ ವಿಚಾರಣೆ ಬಳಿಕ ಮತ್ತೆ ಸಿನಿಮಾ ಕೇಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ನಟಿ ದೀಪಿಕಾ ಹೆಸರು ಕೇಳಿಬರುತ್ತಿದ್ದಂತೆ ದೀಪಿಕಾ ಅಭಿಮಾನಿಗಳು ಸೋರಿದಂತೆ ಇಡೀ ಬಾಲಿವುಡ್ ಗೆ ಶಾಕ್ ಆಗಿತ್ತು. ಎನ್ ಸಿ ಬಿ ನೋಟಿಸ್ ದೀಪಿಕಾ ಕೈ ಸೇರುತ್ತಿದ್ದಂತೆ ದೀಪಿಕಾ ಕುಸಿದು ಹೋಗಿದ್ದರು. ಆದರೀಗ ವಿಚಾರಣೆ ಮುಗಿಸಿ ಮತ್ತೆ ದೀಪಿಕಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

  ಮಾದಕ ವಸ್ತು ನಿಯಂತ್ರಣ ಇಲಾಖೆ, ಸೆಪ್ಟಂಬರ್ 26ರಂದು ದೀಪಿಕಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆ ಸಮಯದಲ್ಲಿ ದೀಪಿಕಾ ಗೋವಾದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಶಕುನ್ ಬಾತ್ರಾ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ದೀಪಿಕಾ ನಿರತರಾಗಿದ್ದರು. ಪತಿ ರಣ್ವೀರ್ ಸಿಂಗ್ ಸಹ ದೀಪಿಕಾ ಜೊತೆ ಗೋವಾದಲ್ಲಿದ್ದರು.

  ಡ್ರಗ್ಸ್ ಪ್ರಕರಣ: NCB ವಿಚಾರಣೆಯಲ್ಲಿ ದೀಪಿಕಾ, ಶ್ರದ್ಧಾ, ಸಾರಾ ಹೇಳಿದ್ದೇನು?ಡ್ರಗ್ಸ್ ಪ್ರಕರಣ: NCB ವಿಚಾರಣೆಯಲ್ಲಿ ದೀಪಿಕಾ, ಶ್ರದ್ಧಾ, ಸಾರಾ ಹೇಳಿದ್ದೇನು?

  ಎನ್ ಸಿ ಬಿ ನೋಟಿಸ್ ದೀಪಿಕಾ ಕೈ ಸೇರುತ್ತಿದ್ದಂತೆ ಚಿತ್ರೀಕರಣ ಅರ್ಧದಲ್ಲೇ ನಿಲ್ಲಿಸಿ ಪತಿಯ ಜೊತೆ ಮುಂಬೈಗೆ ವಾಪಸ್ ಆಗಿದ್ದರು. ಬಳಿಕ ಎನ್ ಸಿ ಬಿ ವಿಚಾರಣೆಗೆ ಹಾಜರಾಗಿದ್ದರು. ಟ್ಯಾಲೆಂಟ್ ಮ್ಯಾನೇಜರ್ ಜೊತೆ ದೀಪಿಕಾ 'ಮಾಲ್' ಇದಿಯಾ ಎಂದು ಮಾಡಿದ ಡ್ರಗ್ಸ್ ಚಾಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೀಪಿಕಾ ಡ್ರಗ್ಸ್ ಚಾಟ್ ಬಹಿರಂಗವಾದ ಬಳಿಕ, ಈ ಚಾಟ್ ಅನ್ನು ಆಧರಿಸಿ ನೋಟಿಸ್ ನೀಡಲಾಗಿತ್ತು.

  ಎನ್ ಸಿ ಬಿ ಅಧಿಕಾರಿಗಳು ದೀಪಿಕಾರನ್ನು ಸುಮಾರು 5 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಯಲ್ಲಿ ದೀಪಿಕಾ ಡ್ರಗ್ಸ್ ಚಾಟ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಡ್ರಗ್ಸ್ ಸೇವಿಸುವುದಿಲ್ಲ ಎಂದು ಹೇಳಿದ್ದಾರಂತೆ. ಇದೀಗ ವಿಚಾರಣೆ ಮುಗಿದು 10 ದಿನಗಳ ಬಳಿ ದೀಪಿಕಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ದೀಪಿಕಾ ಇಲ್ಲದೆ ಈ 10 ದಿನಗಳ ಕಾಲ ಉಳಿದ ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದಾರಂತೆ ನಿರ್ದೇಶಕರು.

  ಶಕುನ್ ಬಾತ್ರಾ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ದೀಪಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಯಕ ಸಿದ್ಧಾರ್ಥ್ ಚತುರ್ವೇದಿ ಮತ್ತು ನಾಯಕಿ ಅನನ್ಯಾ ಪಾಂಡೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭಮಾಡಿದ್ದು, ಈಗಾಗಲೇ ಸಾಕಷ್ಟು ಚಿತ್ರೀಕರಣ ಮುಕ್ತಾಯವಾಗಿದೆ.

  English summary
  After NCB interrogation Actress Deepika Padukone return to Goa to Resume Shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X