»   » ಬೋನಿಯನ್ನ ನಷ್ಟದ ಕೂಪಕ್ಕೆ ತಳ್ಳಿದ್ದು ಶ್ರೀದೇವಿ ಅಭಿನಯದ 'ಈ' ಚಿತ್ರ.!

ಬೋನಿಯನ್ನ ನಷ್ಟದ ಕೂಪಕ್ಕೆ ತಳ್ಳಿದ್ದು ಶ್ರೀದೇವಿ ಅಭಿನಯದ 'ಈ' ಚಿತ್ರ.!

Posted By:
Subscribe to Filmibeat Kannada
ಬೋನಿ ಕಪೂರ್ ಕಷ್ಟ ನಷ್ಟಕ್ಕೂ ಕಾರಣ ಶ್ರೀದೇವಿ | Sridevi is the reason for bony's loss| FIlmibeat Kannada

''ಬೋನಿ ಕಪೂರ್ ರನ್ನ ಮದುವೆ ಆದ್ಮೇಲೆ ಶ್ರೀದೇವಿಯ ಜೀವನ ಕಷ್ಟಕರವಾಗಿತ್ತು. ಬೋನಿಯಿಂದಾಗಿ ಶ್ರೀದೇವಿ ತನ್ನ ಆಸ್ತಿಯನ್ನು ಮಾರಬೇಕಾಯಿತು. ಶ್ರೀದೇವಿ ತಾಯಿಗೆ ಬೋನಿ ಕಪೂರ್ ಕಂಡ್ರೆ ಆಗುತ್ತಿರಲಿಲ್ಲ'' ಎಂಬ ಮಾತುಗಳು ಶ್ರೀದೇವಿ ಕೊನೆಯುಸಿರೆಳೆದಾಗ ಕೇಳಿಬಂದಿತ್ತು.

ಬಾಲಿವುಡ್ ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಬೋನಿ ಕಪೂರ್ ನಷ್ಟ ಅನುಭವಿಸಿದ್ದು ಹೇಗೆ.? ಶ್ರೀದೇವಿಯನ್ನ ಬಾಲಿವುಡ್ ಗೆ ಕರೆತರಲು ಅಂದಿನ ಕಾಲಕ್ಕೆ ಹನ್ನೊಂದು ಲಕ್ಷ ಕೊಟ್ಟಿದ್ದ ಬೋನಿ, ನಷ್ಟದ ಕೂಪಕ್ಕೆ ಬಿದ್ದಿದ್ದು ಹೇಗೆ ಅಂತ ನೀವು ಆಲೋಚಿಸಬಹುದು.

ಕೆಲ ಸಿನಿಮಾಗಳಿಗೆ ಬಂಡವಾಳ ಹಾಕಿ, ಬೋನಿ ಕಪೂರ್ ಕೈ ಸುಟ್ಟುಕೊಂಡಿದ್ದರು ನಿಜ. ಅದರ ಜೊತೆಗೆ ಶ್ರೀದೇವಿ ಅಭಿನಯದ 'ರೂಪ್ ಕಿ ರಾಣಿ ಚೋರೋಂಕಾ ರಾಜ' ಚಿತ್ರವನ್ನ ನಿರ್ಮಾಣ ಮಾಡಿ ಸಾಲದ ಶೂಲಕ್ಕೆ ಸಿಲುಕಿದ್ದರು ಬೋನಿ ಕಪೂರ್. ಮುಂದೆ ಓದಿರಿ...

'ರೂಪ್ ಕಿ ರಾಣಿ...' ಬಿಡುಗಡೆ ಆಗಿ ಇಪ್ಪತ್ತೈದು ವರ್ಷ!

ಶ್ರೀದೇವಿ ಹಾಗೂ ಅನಿಲ್ ಕಪೂರ್ ಅಭಿನಯದ 'ರೂಪ್ ಕಿ ರಾಣಿ ಚೋರೋಂಕಾ ಕಾ ರಾಜ' ಚಿತ್ರ ಬಿಡುಗಡೆ ಆಗಿ ನಿನ್ನೆಗೆ ಸರಿಯಾಗಿ ಇಪ್ಪತ್ತೈದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಸತೀಶ್ ಕೌಶಿಕ್ ಟ್ವೀಟ್ ಮಾಡಿ, ಬೋನಿ ಕಪೂರ್ ಗೆ ಕ್ಷಮೆ ಕೇಳಿದ್ದಾರೆ.

ಪತಿ ಬೋನಿ ಕಪೂರ್ ಗಾಗಿ ತನ್ನ ಆಸ್ತಿ ಮಾರಾಟ ಮಾಡಿದ್ದ ಶ್ರೀದೇವಿ!

ಕ್ಷಮೆ ಯಾಕೆ.?

'ರೂಪ್ ಕಿ ರಾಣಿ ಚೋರೋಂಕಾ ಕಾ ರಾಜ' ಸತೀಶ್ ಕೌಶಿಕ್ ನಿರ್ದೇಶನದ ಚೊಚ್ಚಲ ಚಿತ್ರ. ನಿರೀಕ್ಷಿಸಿದ ಮಟ್ಟಕ್ಕೆ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಲಿಲ್ಲ. ನಿರ್ಮಾಪಕ ಬೋನಿ ಕಪೂರ್ ಗೆ ಹಾಕಿದ ಬಂಡವಾಳ ವಾಪಸ್ ಬರಲಿಲ್ಲ. ಈ ಚಿತ್ರದಿಂದಾಗಿ ಬೋನಿ ಕಪೂರ್ ರನ್ನ ಆರ್ಥಿಕ ಸಂಕಷ್ಟಕ್ಕೆ ದೂಡಿದ ಕಾರಣಕ್ಕೆ ನಿರ್ದೇಶಕ ಸತೀಶ್ ಕೌಶಿಕ್ ಟ್ವಿಟ್ಟರ್ ಮೂಲಕ ಕ್ಷಮಾಪಣೆ ಕೇಳಿದ್ದಾರೆ.

ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ

ಸತೀಶ್ ಕೌಶಿಕ್ ಮಾಡಿರುವ ಟ್ವೀಟ್ ಇಲ್ಲಿದೆ

''ಹೌದು, 25 ವರ್ಷಗಳ ಹಿಂದೆ 'ರೂಪ್ ಕಿ ರಾಣಿ ಚೋರೋಂಕಾ ಕಾ ರಾಜ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಆದ್ರೆ, ಅದು ನನ್ನ ಕನಸಿನ ಮೊದಲ ಕೂಸು. ಈ ಸಂದರ್ಭದಲ್ಲಿ ಶ್ರೀದೇವಿ ಅವರನ್ನ ಸ್ಮರಿಸುತ್ತೇನೆ ಹಾಗೂ ಬೋನಿ ಕಪೂರ್ ಗೆ ಕ್ಷಮೆ ಕೇಳುತ್ತೇನೆ. ಯಾಕಂದ್ರೆ, ಬೋನಿ ನನಗೆ ಬ್ರೇಕ್ ಕೊಟ್ಟರು. ಆದ್ರೆ, ಈ ಚಿತ್ರ ಮಾಡಿದ್ಮೇಲೆ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು'' ಎಂದು ಸತೀಶ್ ಕೌಶಿಕ್ ಟ್ವೀಟ್ ಮಾಡಿದ್ದಾರೆ.

ಶ್ರೀದೇವಿ ಅಮ್ಮನಿಗೆ ಬೋನಿ ಕಪೂರ್ ಕಂಡ್ರೆ ಆಗ್ತಿರ್ಲಿಲ್ಲ!

ಅನಿಲ್ ಕಪೂರ್ ಕೂಡ ಟ್ವೀಟ್ ಮಾಡಿದ್ದಾರೆ.!

''ಇಪ್ಪತ್ತೈದು ವರ್ಷ ಆಗಿದೆ ಅಂದ್ರೆ ನಂಬುವುದಕ್ಕೆ ಅಸಾಧ್ಯ. ಚಿತ್ರದ ಚಿತ್ರೀಕರಣ ನಡೆಯುವಾಗ, ಆದ ಅಡೆತಡೆಗಳು ನನಗೆ ಇನ್ನೂ ನೆನಪಿದೆ. ಎಷ್ಟೇ ಆಗಲಿ ಅದು ನೆನಪಲ್ಲಿ ಉಳಿಯಬೇಕಾದ ಅಧ್ಯಾಯ. ಪ್ರತಿ ದಿನ ನಾವು 'ರೂಪ್ ಕಿ ರಾಣಿ'ಯನ್ನ ಮಿಸ್ ಮಾಡಿಕೊಳ್ತೀವಿ'' ಎಂದು ಅನಿಲ್ ಕಪೂರ್ ಟ್ವೀಟ್ ಮಾಡಿದ್ದಾರೆ.

ಇಂದು ಚಿತ್ರದ ಬಗ್ಗೆ ಮೆಚ್ಚುಗೆ ಕೇಳಿಬರುತ್ತಿದೆ

ಸತೀಶ್ ಕೌಶಿಕ್ ಟ್ವೀಟ್ ಮಾಡಿದ್ಮೇಲೆ, 'ರೂಪ್ ಕಿ ರಾಣಿ ಚೋರೋಂಕಾ ಕಾ ರಾಜ' ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಆದ್ರೆ, ಏನು ಪ್ರಯೋಜನ? ಇದೇ ಸಿನಿಮಾ ಅಂದು ಸೂಪರ್ ಫ್ಲಾಪ್ ಆಗಿತ್ತು. ನಿರ್ಮಾಪಕ ಬೋನಿ ಕಪೂರ್ ರನ್ನ ನಷ್ಟದ ಕೂಪಕ್ಕೆ ತಳ್ಳಿತ್ತು.

'ರೂಪ್ ಕಿ ರಾಣಿ' ಇಂದು ನಮ್ಮೊಂದಿಗಿಲ್ಲ

ಅಂದ್ಹಾಗೆ, 'ರೂಪ್ ಕಿ ರಾಣಿ' ಇಂದು ನಮ್ಮೊಂದಿಗಿಲ್ಲ. ದುಬೈನಲ್ಲಿ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದ ಶ್ರೀದೇವಿ, ಅಲ್ಲಿನ ಹೋಟೆಲ್ ನಲ್ಲೇ ಕೊನೆಯುಸಿರೆಳೆದರು. 'ಮಾಮ್' ಚಿತ್ರದಲ್ಲಿನ ಅಭಿನಯಕ್ಕಾಗಿ ಶ್ರೀದೇವಿ ಅವರಿಗೆ ಮರಣೋತ್ತರ 'ಅತ್ಯುತ್ತಮ ನಟಿ' ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

English summary
After Producing Hindi film 'Roop Ki Rani Choron Ka Raja', Producer Boney Kapoor went Bankrupt, reveals director Sathish Kaushik.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X