For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಅರೆಸ್ಟ್: ಶಿಲ್ಪಾ ಶೆಟ್ಟಿ ಚಿತ್ರಕ್ಕೆ ಭರ್ಜರಿ ಪ್ರಚಾರ!

  |

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಬಂಧಿಸಲಾಗಿದೆ. ಜುಲೈ 19 ರಂದು ಅರೆಸ್ಟ್ ಮಾಡಲಾಗಿತ್ತು. ಜುಲೈ 23ರವರೆಗೂ ಪೊಲೀಸ್ ಕಸ್ಟಡಿಗೆ ನೀಡಿದ್ದ ನ್ಯಾಯಾಲಯ ಶುಕ್ರವಾರ ಮತ್ತೆ ಪ್ರಕರಣ ವಿಚಾರಣೆ ನಡೆಸಲಿದೆ.

  ಮುಂಬೈ ಪೊಲೀಸರೇ ಸ್ಪಷ್ಟಪಡಿಸಿರುಚ ಪ್ರಕಾರ ಈ ಕೇಸ್‌ನಲ್ಲಿ ಶಿಲ್ಪಾ ಶೆಟ್ಟಿಯ ಪಾತ್ರ ಇದುವರೆಗೂ ಕಂಡು ಬಂದಿಲ್ಲ. ಅವರ ವಿರುದ್ಧ ಯಾವುದೇ ಸಾಕ್ಷ್ಯಗಳು ಸಹ ಇಲ್ಲ. ಆದರೆ ಪತಿಯ ಬಂಧನ ಶಿಲ್ಪಾ ಶೆಟ್ಟಿಯನ್ನು ಸಂಕಷ್ಟಕ್ಕೆ ತಳ್ಳಿದೆ. ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಶೆಟ್ಟಿಯನ್ನು ಟ್ರೋಲ್ ಮಾಡಲಾಗುತ್ತಿದೆ. ಕಾಕತಾಳೀಯ ಅಂದ್ರೆ ಇದೇ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿಯ ಹೊಸ ಸಿನಿಮಾವೊಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆ ರಾಜ್ ಕುಂದ್ರಾ ಅರೆಸ್ಟ್ ಆಗಿ ಶಿಲ್ಪಾ ಶೆಟ್ಟಿ ಚಿತ್ರಕ್ಕೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಮುಂದೆ ಓದಿ...

  ರಾಜ್‌ಕುಂದ್ರಾ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ ರಾಜ್‌ಕುಂದ್ರಾ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ

  ಹಂಗಾಮ 2 ಬಿಡುಗಡೆ

  ಹಂಗಾಮ 2 ಬಿಡುಗಡೆ

  ಪ್ರಿಯದರ್ಶನ್ ನಿರ್ದೇಶಿಸಿರುವ 'ಹಂಗಾಮ-2' ಚಿತ್ರ ಜುಲೈ 23 ರಂದು ಶುಕ್ರವಾರ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಪರೇಶ್ ರಾವಲ್ ಮತ್ತು ಮೀಜಾನ್ ಜಾಫ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪರೇಶ್ ರಾವಲ್‌ಗೆ ಜೋಡಿಯಾಗಿ ಶಿಲ್ಪಾ ಶೆಟ್ಟಿ ಹಾಗು ಮೀಜಾನ್‌ಗೆ ಜೋಡಿಯಾಗಿ ಪ್ರಣಿತಾ ಅಭಿನಯಿಸಿದ್ದಾರೆ.

  ಪತಿ ಅರೆಸ್ಟ್ ಆಗಿ ಶಿಲ್ಪಾ ಚಿತ್ರಕ್ಕೆ ಪ್ರಚಾರ?

  ಪತಿ ಅರೆಸ್ಟ್ ಆಗಿ ಶಿಲ್ಪಾ ಚಿತ್ರಕ್ಕೆ ಪ್ರಚಾರ?

  ಒಂದು ಕಡೆ ಹೊಸ ಸಿನಿಮಾ ರಿಲೀಸ್ ಆಗುತ್ತಿದೆ. ಮತ್ತೊಂದೆಡೆ ಇದೇ ಸಂದರ್ಭದಲ್ಲಿ ತನ್ನ ಪತಿ ಆಶ್ಲೀಲ ವಿಡಿಯೋ ನಿರ್ಮಾಣ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನರು ಶಿಲ್ಪಾ ಶೆಟ್ಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ. 'ರಾಜ್ ಕುಂದ್ರಾ ಅರೆಸ್ಟ್ ಆಗಿ ಹಂಗಾಮ 2 ಚಿತ್ರಕ್ಕೆ ಪ್ರಚಾರ ಮಾಡ್ತಿದ್ದಾರೆ' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬ ಕಾಮೆಂಟ್ ಮಾಡಿ, 'ಶಿಲ್ಪಾ ಶೆಟ್ಟಿ ಅವರ ಲೈಫ್ನನಲ್ಲಿ ಈಗ ಹಂಗಾಮ ಆಗಿದೆ' ಎಂದು ಹೇಳಿದ್ದಾನೆ. ಇನ್ನೊಂದು ಕಾಮೆಂಟ್‌ನಲ್ಲಿ 'ರಾಜ್ ಕುಂದ್ರಾ ಪತ್ನಿ ಚಿತ್ರಕ್ಕೆ ಬೇರೆ ಹಂತದ ಪ್ರಮೋಷನ್ ಕೊಡ್ತಿದ್ದಾರೆ' ಎಂದು ಕಾಲೆಳೆದಿದ್ದಾನೆ.

  ಅಶ್ಲೀಲ ವಿಡಿಯೋ ಕೇಸ್: ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಪಾತ್ರ ಇದ್ಯಾ?ಅಶ್ಲೀಲ ವಿಡಿಯೋ ಕೇಸ್: ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಪಾತ್ರ ಇದ್ಯಾ?

  ಶಿಲ್ಪಾ ಶೆಟ್ಟಿ ಟಾರ್ಗೆಟ್ ಮಾಡೋದು ಏಕೆ?

  ಶಿಲ್ಪಾ ಶೆಟ್ಟಿ ಟಾರ್ಗೆಟ್ ಮಾಡೋದು ಏಕೆ?

  ಈ ವಿಚಾರದಲ್ಲಿ ಶಿಲ್ಪಾ ಶೆಟ್ಟಿ ವಿರುದ್ಧವಾಗಿ ಟ್ರೋಲ್ ಮಾಡುವವರನ್ನು ಕೆಲವು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನಟಿಯ ಪರವಾಗಿ ಬೆಂಬಲಕ್ಕೆ ನಿಂತಿದ್ದಾರೆ. 'ಆಕೆಯ ಪತಿ ತಪ್ಪು ಮಾಡಿರಬಹುದು, ಆದರೆ ಶಿಲ್ಪಾರನ್ನು ಏಕೆ ಟಾರ್ಗೆಟ್ ಮಾಡಬೇಕು' ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ 'ಈ ವಿಚಾರದಲ್ಲಿ ಶಿಲ್ಪಾಶೆಟ್ಟಿಯನ್ನು ಒಂಟಿಯಾಗಿರಲು ಬಿಡಿ, ಅವರ ಮಕ್ಕಳಿಗಾಗಿ ಆಕೆ ಧೈರ್ಯವಾಗಿರಬೇಕಿದೆ. ಆಕೆಗೆ ತೊಂದರೆ ಕೊಡದಿರುವುದು ಒಳಿತು' ಎಂದು ಬೆಂಬಲಿಸಿದ್ದಾರೆ.

  ಪತಿ ಅರೆಸ್ಟ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಶಿಲ್ಪಾ ಶೆಟ್ಟಿ
  ಮತ್ತೆ ಪೊಲೀಸ್ ಕಸ್ಟಡಿಗೆ?

  ಮತ್ತೆ ಪೊಲೀಸ್ ಕಸ್ಟಡಿಗೆ?

  ರಾಜ್ ಕುಂದ್ರಾರ ಪೊಲೀಸ್ ಕಸ್ಟಡಿ ಅವಧಿ ಇಂದು ಮುಗಿಯುವ ಹಿನ್ನೆಲೆ ಮತ್ತೊಮ್ಮೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಮತ್ತಷ್ಟು ದಿನ ಪೊಲೀಸರು ಕಸ್ಟಡಿಗೆ ಕೇಳಬಹುದಾ ಅಥವಾ ಜೈಲಿಗೆ ಕಳುಹಿಸುವ ನಿರ್ಧಾರವಾ ಕಾದುನೋಡಬೇಕಿದೆ.

  English summary
  Pornography case: Shilpa shetty husband raj kundra arrested. other side shilpa shetty starrer Hungama 2 movie getting release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X