For Quick Alerts
  ALLOW NOTIFICATIONS  
  For Daily Alerts

  ನಮಗಿದು ತುಂಬಾ ಭಯಾನಕ ಸಮಯ; ಆತಂಕ ವ್ಯಕ್ತಪಡಿಸಿದ್ದೇಕೆ ನಟ ಅರ್ಜುನ್ ರಾಂಪಾಲ್

  |

  ಬಾಲಿವುಡ್ ಖ್ಯಾತ ನಟ ಅರ್ಜುನ್ ರಾಂಪಾಲ್ ಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ಅರ್ಜುನ್ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನ ಬಹುತೇಕ ಕಲಾವಿದರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾ ಎರಡನೇ ಅಲೆ ದೇಶದಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

  ನಟ ಸೋನು ಸೂದ್ ಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೇ ನಟ ಅರ್ಜುನ್ ರಾಂಪಾಲ್ ಕೊರೊನಾ ವೈರಸ್ ಗೆ ತುತ್ತಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಅರ್ಜುನ್ ಈಗಿನ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

  ಅರ್ಜುನ್ ರಾಂಪಲ್ ಸಹೋದರಿಗೆ ಮತ್ತೊಮ್ಮೆ ನೋಟಿಸ್ ನೀಡಿದ ಎನ್‌ಸಿಬಿಅರ್ಜುನ್ ರಾಂಪಲ್ ಸಹೋದರಿಗೆ ಮತ್ತೊಮ್ಮೆ ನೋಟಿಸ್ ನೀಡಿದ ಎನ್‌ಸಿಬಿ

  'ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನಾನು ಕ್ವಾರಂಟೈನ್ ನಲ್ಲಿದ್ದೇನೆ. ಅಗತ್ಯ ವೈದ್ಯಕೀಯ ಸೇವೆ ಪಡೆದಿದ್ದೇನೆ. ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ದಯವಿಟ್ಟು ಎಲ್ಲರೂ ಕಾಳಜಿ ವಹಿಸಿ, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳು. ಇದು ನಮಗೆ ಭಯಾನಕ ಸಮಯವಾಗಿದೆ. ಆದರೆ ಜಾಗೃತರಾಗಿದ್ದರೆ ದೀರ್ಘಕಾಲಿನ ಪ್ರಯೋಜನ ನೀಡುತ್ತೆ. ನಾವು ಕೊರೊನಾ ವಿರುದ್ಧ ಹೋರಾಡೋಣ' ಎಂದು ಹೇಳಿದ್ದಾರೆ.

  ಬಾಲಿವುಡ್ ನಲ್ಲಿ ಸಾಕಷ್ಟು ಮಂದಿ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ. ಅಲಿಯಾ ಭಟ್, ಕತ್ರಿನಾ ಕೈಫ್, ರಣಬೀರ್ ಕಪೂರ್, ಭೂಮಿ ಪಡ್ನೇಕರ್, ಸೋನು ಸೂದ್ ಸೇರಿದಂತೆ ಇನ್ನು ಅನೇಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಅರ್ಜುನ್ ರಾಂಪಾಲ್ ಕೊನೆಯದಾಗಿ ನೈಲ್ ಪೋಲೀಷ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗಷ್ಟೆ ದಿ ರೇಪಿಸ್ಟ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ಕೊಂಕಣ ಸೇನ್ ಶರ್ಮ ಕೂಡ ನಟಿಸಿದ್ದಾರೆ. ಇನ್ನು ನಟಿ ಕಂಗನಾ ನಟನೆಯ ಧಾಕಡ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

  English summary
  After tests positive for corona Actor Arjun Rampal says it's very scary time for us.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X