For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಐಂದ್ರಿತಾ ರೇ

  |

  ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಸಿನಿಮಾಗಳ ಸಂಖ್ಯೆ ಸದ್ಯ ಕಡಿಮೆಯಾಗಿದೆ. ಮದುವೆ ಬಳಿಕ ಐಂದ್ರಿತಾ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. ಕೊನೆಯದಾಗಿ ಐಂದ್ರಿತಾ ರ್ಯಾಂಬೋ-2 ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಳಿಕ ಮತ್ತೆ ತೆರೆಮೇಲೆ ಮಿಂಚಿಲ್ಲ. ಅದ್ಭುತ ಸಿನಿಮಾಗಳನ್ನು ನೀಡಿರುವ ಐಂದ್ರಿತಾ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲೂ ಮಿಂಚಿದ್ದಾರೆ.

  ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಟನೆಯ 'ಮೈನ್ ಜರೂರ್ ಆವುಂಗಾ' ಚಿತ್ರದಲ್ಲಿ ಮಿಂಚುವ ಮೂಲಕ ಐಂದ್ರಿತಾ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ತಂದುಕೊಟ್ಟಿಲ್ಲ. ಬಳಿಕ ಐಂದ್ರಿತಾ ಹಿಂದಿ ವೆಬ್ ಸೀರಿಸ್ ನಲ್ಲೂ ಮಿಂಚಿದರು. ಇದೀಗ ಐಂದ್ರಿತಾ ನಟನೆಯ ಹಿಂದಿಯ ಎರಡನೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

  ಐಂದ್ರಿತಾ ನಟನೆಯ 2ನೇ ಹಿಂದಿ ಸಿನಿಮಾ 'ರಾವಣ ಲೀಲಾ' ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಚಿತ್ರದಲ್ಲಿ ಐಂದ್ರಿತಾ ರೇ 'ಸ್ಕ್ಯಾಮ್ 1992' ವೆಬ್ ಸರಣಿ ಖ್ಯಾತಿಯ ನಟ ಪ್ರತೀಕ್ ಗಾಂಧಿ ನಟಿಸಿದ್ದಾರೆ. ಈ ಸಿನಿಮಾವನ್ನು ಹೆಚ್ಚಾಗಿ ಗುಜರಾತ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾ ಪ್ರಾರಂಭವಾಗಿ ವರ್ಷಗಳೇ ಆಗಿದೆ ಆದರೀಗ ಬಿಡುಗಡೆಗೆ ಕಾಲಕೂಡಿ ಬಂದಿದೆ.

  ಐಂದ್ರಿತಾ ಚಿತ್ರದ ಬಗ್ಗೆ ಸಖತ್ ಉತ್ಸುಕರಾಗಿದ್ದಾರೆ. ಚಿತ್ರದಲ್ಲಿ ಐಂದ್ರಿತಾ ಪಾತ್ರಕ್ಕೆ ಹೆಚ್ಚು ಸ್ಕೋಪ್ ನೀಡಲಾಗಿದೆಯಂತೆ. ಇನ್ನು ನಟ ಪ್ರತೀಕ್ ಸ್ಕ್ಯಾಮ್ 1992 ವೆಬ್ ಸರಣಿ ಬಳಿಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದಾರೆ. ಹಾಗಾಗಿ ಪ್ರತೀಕ್ 'ರಾವಣ ಲೀಲಾ' ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

  ಅಂದಹಾಗೆ ಸಿನಿಮಾ ಬಿಡುಗಡೆ ಸಂತಸದ ವಿಚಾರವನ್ನು ನಟ ಐಂದ್ರಿತಾ ರೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ರಾವಣ ಲೀಲಾ ಸಿನಿಮಾ ಅಕ್ಟೋಬರ್ 1ಕ್ಕೆ ತೆರೆಗೆ ಬರುತ್ತಿದೆ. ಈ ಬಗ್ಗೆ ಐಂದ್ರಿತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಶೇರ್ ಮಾಡಿ, ಮಾಹಿತಿ ಹಂಚಿಕೊಂಡಿದ್ದಾರೆ. ಅಂದಹಾಗೆ ನಟ ಪ್ರತೀಕ್ ಗಾಂಧಿ ವೆಬ್ ಸೀರಿಸ್ ಹಿಟ್ ಆದ ಬಳಿಕ ಸಖತ್ ಬ್ಯುಸಿಯಾಗಿದ್ದಾರೆ. ರಾವಣ ಲೀಲಾ ಬಳಿಕ ಅತಿಥಿ ಭೂತೋ ಭವ ಹಾಗು ಮತ್ತೊಂದು ಸಿನಿಮಾದಲ್ಲಿ ನಿರತರಾಗಿದ್ದಾರೆ. ಜೊತೆಗೆ ಮತ್ತೊಂದು ವೆಬ್ ಸೀರಿಸ್ ಕೂಡ ಪ್ರತೀಕ್ ಕೈಯಲ್ಲಿದೆ.

  ಇನ್ನು ನಟಿ ಐಂದ್ರಿತಾ ಸದ್ಯ ಹಿಂದಿ ಸಿನಿಮಾ ಜೊತೆಗೆ ಕನ್ನಡ ಮೂರು ಸಿನಿಮಾಗಳ ಬಿಡುಗಡೆ ಕಾಯುತ್ತಿದ್ದಾರೆ. 'ಗರುಡ' ಸಿನಿಮಾದಲ್ಲಿ ಐಂದ್ರಿತಾ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕನಾಗಿ ಸಿದ್ದಾರ್ಥ್ ಮಹೇಶ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಐಂದ್ರಿತಾ ಜೊತೆ ಆಶಿಕಾ ರಂಗನಾಥ್ ನಟಿಸಿದ್ದಾರೆ. ಈ ಸಿನಿಮಾ ಜೊತೆಗೆ ನೆನಪಿರಲಿ ಪ್ರೇಮ್ ನಟನೆಯ ಪ್ರೇಮಂ ಪೂಜ್ಯ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಪ್ರೇಮ ಅವರ 25ನೇ ಸಿನಿಮಾವಾಗಿದ್ದು ಈಗಾಗಲೇ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

  ಈ ಎರಡು ಸಿನಿಮಾಗಳ ಜೊತೆ ಐಂದ್ರಿತಾ ಪತಿ ದಿಗಂತ್ ಜೊತೆ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಸಿನಿಮಾದವನ್ನು ಮಲೆನಾಡಿನ ಸುಂದರ ಪ್ರದೇಶಗಳಲ್ಲಿ ಸೆರೆಹಿಡಿಯಲಾಗುತ್ತಿದೆ. ಈಗಾಗಲೇ ಪೋಸ್ಟರ್ ಮತ್ತು ಹಾಡಿನ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  ಐಂದ್ರಿತಾ ಇತ್ತೀಚಿಗೆ ಸಿನಿಮಾಗಳಿಂದ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸದಾ ಟ್ರಕಿಂಗ್, ಸೈಕ್ಲಿಂಗ್, ಪ್ರವಾಸ ಅಂತಿರುವ ಈ ಜೋಡಿ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಬರ್ತಿದ್ದಾರೆ ಐಂದ್ರಿತಾ.

  English summary
  Kannada Actress Aindrita Ray and Pratik Gandhi starrer Ravan Leela movie set to release on october 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X