»   » ಕ್ಯಾಮೆರಾ ಕಣ್ಣಿಗೆ ಐಶ್ವರ್ಯ ರೈ ಮಗಳು ಆರಾಧ್ಯ

ಕ್ಯಾಮೆರಾ ಕಣ್ಣಿಗೆ ಐಶ್ವರ್ಯ ರೈ ಮಗಳು ಆರಾಧ್ಯ

Posted By:
Subscribe to Filmibeat Kannada

ಬಾಲಿವುಡ್ ತಾರೆ ಐಶ್ವರ್ಯ ರೈ ಮಗಳು ಆರಾಧ್ಯ ನೋಡಲು ಹೇಗಿದ್ದಾಳೆ ಎಂಬ ಬಗ್ಗೆ ಇದುವರೆಗೂ ಅವರ ಕುಟುಂಬ ಯಾವುದೇ ಮಾಹಿತಿ ನೀಡಿಲ್ಲ. ಕಣ್ಣು ಅಮ್ಮನ ತರಹ, ಮೂಗು ಅಪ್ಪನ ತರಹ ಹಾಗೆ ಹೀಗೆ ಸುದ್ದಿಗಳು ಹರಿದಾಡುತ್ತಿವೆ ಅಷ್ಟೇ.

ಆರಾಧ್ಯ ಫೋಟೋ ತೆಗೆಯಲು ಸಾಕಷ್ಟು ಛಾಯಾಗ್ರಾಹಕರು ಹರಸಾಹಸ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಆದರೆ ಅದು ಹೇಗೋ ಏನೋ ನ್ಯೂಸ್ ಚಾನಲ್ ಒಂದು ಆರಾಧ್ಯಳ ಕಣ್ಣುಗಳನ್ನು ಸೆರೆಹಿಡಿಯುವಲ್ಲಿ ಸಕ್ಸಸ್ ಆಗಿದೆ.

ನೀವೀಗ ಇಲ್ಲಿ ನೋಡುತ್ತಿರುವುದು ಅದೇ ಫೋಟೋವನ್ನು. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಹಂಗಮವಾಗಿ ಹಾರಾಡುತ್ತಿದೆ. ಮನೆ ಬಿಟ್ಟು ಹೊರಗೆ ಬಂದರೆ ಎಲ್ಲಿ ತಮ್ಮ ಮಗಳನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಾರೋ ಎಂಬ ಅಳುಕು ಐಶ್ವರ್ಯ ರೈ ಕುಟುಂಬಿಕರದು.


ಅವರು ಮಗುವನ್ನು ಎತ್ತಿಕೊಂಡು ಹೊರಗೆ ಬಂದಾಗ ಮುಖ ಕಾಣಿಸದಂತೆ ಜಾಗ್ರತೆ ವಹಿಸುತ್ತಾರೆ. ಆದರೂ ಆರಾಧ್ಯ ಅಮ್ಮನ ಕಣ್ಣು ತಪ್ಪಿಸಿ ಇಣುಕಿ ನೋಡಿದೆ. ಇದೇ ಸಂದರ್ಭದಕ್ಕಾಗಿ ಕಾಯುತ್ತಿದ್ದ ಕ್ಯಾಮೆರಾಗಳು ಆಕೆಯ ಕಣ್ಣುಗಳನ್ನಷ್ಟೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿವೆ.

ಐಶ್ವರ್ಯ ರೈ ಅಭಿಮಾನಿಗಳು ಸಾಕಷ್ಟು ಭಾರಿ ಆರಾಧ್ಯ ಹೇಗಿದ್ದಾಳೋ ನೋಡಣ ಹಂಬಲಿಸುತ್ತಿದ್ದರೂ ಸಾಧ್ಯವಾಗಿರಲಿಲ್ಲ. ಈ ಹಿಂದೆ ಬಾಣಂತಿ ಐಶ್ವರ್ಯ ರೈ ಅವರ ಹಲವಾರು ಫೋಟೋಗಳು ಫೇಸ್‌ಬುಕ್‌ನಲ್ಲಿ ಲೀಕ್ ಆಗಿದ್ದವು. ಆದರೆ ಅವೆಲ್ಲಾ ಅಸಲಿ ಅಲ್ಲ ನಕಲಿ ಎಂಬುದನ್ನು ಸ್ವತಃ ಐಶ್ವರ್ಯ ರೈ ಅವರ ಮಾವ ಅಮಿತಾಬ್ ಬಚ್ಚನ್ ಸ್ಪಷ್ಟಪಡಿಸಿದ್ದರು.

ಐಶ್ವರ್ಯ ರೈ ಬೇಬಿ ಹೇಗಿರಬಹುದು ಎಂಬ ಕುತೂಹಲ ಆಕೆಯ ಲಕ್ಷಾಂತರ ಅಭಿಮಾನಿಗಳಿಗೆ ಈಗಲೂ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಗ್ರಾಫಿಕ್ಸ್ ಕಲಾವಿದರು ನಕಲಿ ಫೋಟೋಗಳನ್ನು ಸೃಷ್ಟಿಸಿ ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಗುಲ್ಲೆಬ್ಬಿಸಿದರು.

ಈ ರೀತಿ ನಕಲಿ ಫೋಟೋಗಳು ಸರಿದಾಡಿದಾಗಲೆಲ್ಲಾ ಅಮಿತಾಬ್ ಬಚ್ಚನ್ ಸುಮ್ಮನೆ ಕೂರಲಿಲ್ಲ. ಎಲ್ಲದಕ್ಕೂ ವಿವರಣೆ ನೀಡುತ್ತಲೇ ಬಂದರು. ಏತನ್ಮಧ್ಯೆ ಐಶೂ ಬೇಬಿ ಫೋಟೋಗಾಗಿ ಅಂತಾರಾಷ್ಟ್ರೀಯ ಪತ್ರಿಕೆಯೊಂದು ರು.5 ಕೋಟಿ ಆಫರ್ ನೀಡಿತ್ತು. ಇದ್ಯಾವುದಕ್ಕೂ ಬಚ್ಚನ್ ಕುಟುಂಬ ಸೊಪ್ಪುಹಾಕಲಿಲ್ಲ ಎಂಬುದು ವಿಶೇಷ. (ಏಜೆನ್ಸೀಸ್)

English summary
Many People are trying to capture Aishwarya Rai baby girl Aaradhya Bachchan’s face for a while now. But recently a news channel has managed to get a glimpse of the Aradhya Bachchan’s eye.
Please Wait while comments are loading...