»   » ಇದೇನಿದು.!? ತಲೆ ಬೋಳಿಸಿಕೊಂಡ್ರಾ ನಟಿ ಐಶ್ವರ್ಯ ರೈ.?

ಇದೇನಿದು.!? ತಲೆ ಬೋಳಿಸಿಕೊಂಡ್ರಾ ನಟಿ ಐಶ್ವರ್ಯ ರೈ.?

Posted By:
Subscribe to Filmibeat Kannada

ನಟಿ ಐಶ್ವರ್ಯ ರೈ ಬಚ್ಚನ್ ತಲೆ ಬೋಳಾಗಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋ ನೋಡಿದ ಅದೆಷ್ಟೋ ಜನ ಒಂದು ಕ್ಷಣ ಶಾಕ್ ಆಗಿದ್ದಾರೆ.

ಡೀಪ್ ನೆಕ್ ತಂದ ಮುಜುಗರ: ಮಾನ ಮುಚ್ಚಿಕೊಳ್ಳಲು ಐಶ್ವರ್ಯ ರೈ ಹರಸಾಹಸ

ಬಚ್ಚನ್ ಬಹುರಾಣಿ ಐಶ್ವರ್ಯ ರೈ ನಿಜವಾಗಲೂ ತಲೆ ಬೋಳಿಸಿಕೊಂಡ್ರಾ ಎಂದು ಕೆಲವರು ಕಣ್ ಕಣ್ ಬಿಡ್ತಿದ್ದಾರೆ. ಆದರೆ ಸತ್ಯ ಮಾತ್ರ ಅನೇಕರಿಗೆ ಗೊತ್ತಿಲ್ಲ. ಐಶ್ವರ್ಯ ರೈ ತಲೆ ಬೋಳಾಗಿರುವ ಫೋಟೋ ಹಿಂದಿನ ಸತ್ಯಾಸತ್ಯತೆಯ ವಿಶ್ಲೇಷಣೆ ಇಲ್ಲಿದೆ. ಓದಿರಿ...

ಯಾರೋ ಹಬ್ಬಿಸಿದ ಸುಳ್ಳು ಸುದ್ದಿ

ದೈವ ಭಕ್ತೆ ಆಗಿರುವ ಐಶ್ವರ್ಯ ರೈ ಬಚ್ಚನ್ ತಿರುಪತಿ ದೇವಾಲಯಕ್ಕೆ ಮುಡಿ ಕೊಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ ಜೊತೆಗೆ ಈ ಫೋಟೋನ ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ವಾಸ್ತವ ಅಲ್ಲ.!

ವಾಸ್ತವ ಏನಪ್ಪಾ ಅಂದ್ರೆ, ತಿರುಪತಿ ದೇವಾಲಯಕ್ಕೆ ನಟಿ ಐಶ್ವರ್ಯ ರೈ ಬಚ್ಚನ್ ಭೇಟಿ ಕೊಟ್ಟಿರಬಹುದು. ಆದ್ರೆ, ಮುಡಿ ಕೊಟ್ಟಿಲ್ಲ. ಐಶ್ವರ್ಯ ರೈ ಬಚ್ಚನ್ ತಲೆ ಬೋಳಾಗಿರುವ ಹಾಗೆ ಯಾರೋ ಗ್ರಾಫಿಕ್ಸ್ ಮಾಡಿದ್ದಾರೆ ಅಷ್ಟೇ. ದೇವಾಲಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ತೆಗೆದ ಐಶ್ವರ್ಯ ರೈ ರವರ ಫೋಟೋ ಇದು.

ಇದು ಮೊದಲೇನಲ್ಲ.!

ಇಂತಹ ಸುಳ್ಳು ಸುದ್ದಿಗಳ ಸುತ್ತ ನಟಿ ಐಶ್ವರ್ಯ ರೈ ಬಚ್ಚನ್ ಹೆಸರು ಕೇಳಿಬಂದಿರುವುದು ಇದು ಮೊದಲೇನಲ್ಲ. 'ಐಶ್ವರ್ಯ ರೈ ಆತ್ಮಹತ್ಯೆಗೆ ಯತ್ನಿಸಿದ್ದರು' ಎಂಬ ಸುದ್ದಿಯೂ ಸೇರಿದಂತೆ ಅನೇಕ ಸುಳ್ಳು ಸುದ್ದಿಗಳು ಐಶ್ವರ್ಯ ರೈ ಬಚ್ಚನ್ ಬಗ್ಗೆ ಕೇಳಿಬಂದಿವೆ.

ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.!

ಯಾವುದೇ ಟ್ರೋಲ್ ಗಳಿಗಾಗಲಿ, ಸುಳ್ಳು ಸುದ್ದಿ, ಗಾಸಿಪ್ ಗಳಿಗಾಗಲಿ ನಟಿ ಐಶ್ವರ್ಯ ರೈ ಬಚ್ಚನ್ ತಲೆ ಕೆಡಿಸಿಕೊಳ್ಳುವುದಿಲ್ಲ.

English summary
Bollywood Actress Aishwarya Rai Bachchan bald photo goes viral on Social Media.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada