»   » ಯೂಟ್ಯೂಬ್ ನಲ್ಲಿ ಐಶ್ವರ್ಯ ರೈ 'ಜಝ್ಬಾ' ಸಂಚಲನ

ಯೂಟ್ಯೂಬ್ ನಲ್ಲಿ ಐಶ್ವರ್ಯ ರೈ 'ಜಝ್ಬಾ' ಸಂಚಲನ

Posted By:
Subscribe to Filmibeat Kannada

ಮಾಜಿ ವಿಶ್ವಸುಂದರಿ, ಬಚ್ಚನ್ ಬಹುರಾಣಿ ಐಶ್ವರ್ಯ ರೈ ಬಚ್ಚನ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಸಿನಿಮಾ 'ಜಝ್ಬಾ'. ಇದೇ ಕಾರಣಕ್ಕೆ ಬಾಲಿವುಡ್ ನಲ್ಲಿ 'ಜಝ್ಬಾ' ಚಿತ್ರ ಹಲ್ ಚಲ್ ಕ್ರಿಯೇಟ್ ಮಾಡಿದೆ.

ಇತ್ತೀಚಿಗಷ್ಟೆ 'ಜಝ್ಬಾ' ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಟ್ರೈಲರ್ ರಿಲೀಸ್ ಆದ ಮೂರೇ ದಿನಗಳಲ್ಲಿ 'ಜಝ್ಬಾ' ಯೂಟ್ಯೂಬ್ ನಲ್ಲಿ ಹೊಸ ಸಂಚಲನ ಮೂಡಿಸಿದೆ. ಮೂರು ದಿನಗಳಲ್ಲಿ 41 ಲಕ್ಷ ಮಂದಿ 'ಜಝ್ಬಾ' ಟ್ರೈಲರ್ ವೀಕ್ಷಿಸಿದ್ದಾರೆ.

jazbaa

ಸಾಮಾಜಿಕ ಜಾಲತಾಣಗಳಲ್ಲಿ 'ಜಝ್ಬಾ' ಚಿತ್ರದ ಟ್ರೈಲರ್ ವೈರಲ್ ಆಗಿದೆ. ಹೀಗಾಗಿ, ಗಂಟೆಗಳು ಕಳೆದಂತೆ ಅದನ್ನ ವೀಕ್ಷಿಸಿದವರ ಸಂಖ್ಯೆ ಹೆಚ್ಚಾಗುತ್ತಿದೆ. [ಐಶ್ವರ್ಯ ರೈ ಬಚ್ಚನ್ ಗುನ್ನ ನೀಡುತ್ತಿರುವುದು ಯಾರಿಗೆ?]

'ಬೇಟಿ ಬಿ'ಗೆ ಅಮ್ಮನಾದ ಬಳಿಕ ಐಶ್ವರ್ಯ ರೈ ಬಚ್ಚನ್ ಬಣ್ಣ ಹಚ್ಚಿರುವ ಚಿತ್ರ ಇದು. 'ಜಝ್ಬಾ' ಚಿತ್ರಕಥೆಯಲ್ಲೂ ತಾಯಿ-ಮಗಳು ಸೆಂಟಿಮೆಂಟ್ ಹೈಲೈಟ್ ಅನ್ನೋದಕ್ಕೆ ಈ ಟ್ರೈಲರ್ ಸಾಕ್ಷಿ.

ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಮೊದಲ ನೋಟಕ್ಕೆ ಥ್ರಿಲ್ಲರ್ ಚಿತ್ರದಂತೆ ಕಾಣುವ 'ಜಝ್ಬಾ'ದಲ್ಲಿ ಐಶ್ವರ್ಯ ರೈ ಜೊತೆ ಇರ್ಫಾನ್ ಖಾನ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದರೆ, ಶಬಾನಾ ಅಜ್ಮಿ ಮತ್ತು ಜ್ಯಾಕಿ ಶ್ರಾಫ್ ಪ್ರಮುಖ ಪಾತ್ರದಲ್ಲಿದ್ದಾರೆ. ['ಜಝ್ಬಾ' ಆಕ್ಸಿಡೆಂಟ್ ಸ್ಪಾಟ್ ನಲ್ಲಿ ಐಶ್ವರ್ಯಾ ರೈ]

'ಕಾಂಟೆ', 'ಶೂಟೌಟ್ ಅಟ್ ವಡಾಲಾ' ಚಿತ್ರಗಳನ್ನ ನಿರ್ದೇಶಿಸಿದ್ದ ಸಂಜಯ್ ಗುಪ್ತಾ 'ಜಝ್ಬಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಕ್ಟೋಬರ್ 9 ರಂದು 'ಜಝ್ಬಾ' ಚಿತ್ರ ರಿಲೀಸ್ ಆಗಲಿದೆ.

English summary
Bollywood Actress Aishwarya Rai Bachchan starrer 'Jazbaa' trailer is released and has created sensation in Youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada