»   » ನಿಮಗಾಗಿ ಐಶ್ವರ್ಯ ರೈ ಒಂದು ಸರ್ ಪ್ರೈಸ್ ಕೊಡ್ತಾರೆ.!

ನಿಮಗಾಗಿ ಐಶ್ವರ್ಯ ರೈ ಒಂದು ಸರ್ ಪ್ರೈಸ್ ಕೊಡ್ತಾರೆ.!

Posted By:
Subscribe to Filmibeat Kannada

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ, ಬಚ್ಚನ್ ಬಹು ರಾಣಿ ಐಶ್ವರ್ಯ ರೈ ಬಚ್ಚನ್ ವರ್ಷಗಳ ನಂತರ ಬಣ್ಣ ಹಚ್ಚಿರುವ ಸಂಗತಿ ನಿಮಗೆ ಗೊತ್ತಿದೆ. 'ಜಝ್ಬಾ' ಚಿತ್ರದಲ್ಲಿ ಲಾಯರ್ ಪಾತ್ರ ನಿರ್ವಹಿಸುತ್ತಿರುವ ಐಶ್ವರ್ಯ ಚಿತ್ರದಲ್ಲಿ ಸೂಪರ್ ಸ್ಟಂಟ್ ಗಳನ್ನೂ ಮಾಡಿದ್ದಾರೆ.

ಇಷ್ಟೆ ಅಲ್ಲ, 'ಜಝ್ಬಾ' ಐಶ್ವರ್ಯ ರೈ ಬಚ್ಚನ್ ರವರ ಕಮ್ ಬ್ಯಾಕ್ ಸಿನಿಮಾ ಅಗಿರುವುದರಿಂದ ಸ್ವಲ್ಪ ಸ್ಪೆಷಲ್ ಆಗಿರ್ಬೇಕು ಅನ್ನುವ ಕಾರಣಕ್ಕೆ ಚಿತ್ರತಂಡ ಒಂದು ಪ್ಲಾನ್ ಮಾಡಿದೆ.

aishwarya-rai-

ಅದೇನಪ್ಪಾ ಅಂದ್ರೆ, 'ಜಝ್ಬಾ' ಚಿತ್ರದ ಒಂದು ಹಾಡಿಗೆ ಐಶ್ವರ್ಯ ಅವರ ದನಿ ಸೇರಿಸುವುದಕ್ಕೆ ಚಿತ್ರತಂಡ ಮುಂದಾಗಿದೆ. 'ಜಝ್ಬಾ' ನಿರ್ದೇಶಕ ಸಂಜಯ್ ಗುಪ್ತಾಗೆ ಐಶ್ವರ್ಯ ವಾಯ್ಸ್ ಅಂದ್ರೆ ಸಖತ್ ಇಷ್ಟ. ಹೀಗಾಗಿ ಒಂದು ಹಾಡಿಗೆ ಅವರ ದನಿ ಇದ್ದರೆ ಚೆನ್ನ ಅಂತ ಅಭಿಪ್ರಾಯ ಪಟ್ಟಿದ್ದಾರಂತೆ. [ಐಶ್ವರ್ಯ ರೈ ಬಚ್ಚನ್ ಗುನ್ನ ನೀಡುತ್ತಿರುವುದು ಯಾರಿಗೆ?]

ಐಶ್ವರ್ಯ ರೈಗೂ ಸಿಂಗಿಂಗ್ ಅಂದ್ರೆ ಪಂಚಪ್ರಾಣ. ಶೂಟಿಂಗ್ ಸೆಟ್ ನಲ್ಲಿ ಅವರ ಇಷ್ಟದ ಹಾಡುಗಳನ್ನ ಐಶೂ ಸದಾ ಗುನುಗುತ್ತಿರುತ್ತಾರಂತೆ. ಇದನ್ನ ಕಂಡು ಸಂಜಯ್ ಗುಪ್ತಾ, ಐಶೂ ರಿಂದ ಗಾನಬಜಾನ ಮಾಡಿಸುವ ಮನಸ್ಸು ಮಾಡಿದ್ದಾರೆ. ['ಜಝ್ಬಾ' ಆಕ್ಸಿಡೆಂಟ್ ಸ್ಪಾಟ್ ನಲ್ಲಿ ಐಶ್ವರ್ಯಾ ರೈ]

ಹಾಡುವ ಬಗ್ಗೆ ಐಶ್ವರ್ಯ ರೈಗೆ ಅಷ್ಟು ಕಾನ್ಫಿಡೆನ್ಸ್ ಇಲ್ಲ. ಚೆನ್ನಾಗಿ ಪ್ರ್ಯಾಕ್ಟೀಸ್ ಮಾಡಿ, ನಂತರ 'ನೋಡೋಣ' ಅಂತ ಐಶ್ವರ್ಯ ರೈ ಹೇಳಿದ್ದಾರಂತೆ.

ಒಂದ್ವೇಳೆ ಐಶ್ವರ್ಯ ರೈ ಅವರು 'ಜಝ್ಬಾ' ಚಿತ್ರಕ್ಕೆ ಹಾಡಿದ್ದೇ ಆದರೆ, ಅವರ ಕಮ್ ಬ್ಯಾಕ್ ಸಿನಿಮಾ ಮೂಲಕ ಎಲ್ಲಾ ಅಭಿಮಾನಿಗಳಿಗೆ ಸರ್ ಪ್ರೈಸ್ ಸಿಕ್ಕ ಹಾಗೇ ಲೆಕ್ಕ.

English summary
According to the reports, Bollywood Actress Aishwarya Rai Bachchan will apparently lend her voice to one of the songs of her upcoming film 'Jazbaa'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada