For Quick Alerts
  ALLOW NOTIFICATIONS  
  For Daily Alerts

  ಅಪಾರ್ಟ್ಮೆಂಟ್ ನಲ್ಲಿ ಬೆಂಕಿ : ಜನರ ಸಹಾಯಕ್ಕೆ ಮುಂದಾದ ಐಶ್ವರ್ಯ ರೈ

  By Naveen
  |

  ನಟಿ ಐಶ್ವರ್ಯ ರೈ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಆದರೆ ಅದು ತಮ್ಮ ಸಿನಿಮಾದ ಮೂಲಕ ಅಲ್ಲ. ಇನ್ನು ವಿವಾದ ಮೂಲಕವೂ ಅಲ್ಲ. ಐಶ್ ಸದ್ಯ ಸುದ್ದಿಯಲ್ಲಿರುವುದು ತಮ್ಮ ಒಳ್ಳೆಯ ಕೆಲಸದಿಂದ.

  ಕೆಲ ದಿನಗಳ ಹಿಂದೆಯಷ್ಟೆ ನಟಿ ಐಶ್ವರ್ಯ ರೈ ತಾಯಿ ಬಿಂದ್ರಾ ರೈ ವಾಸವಾಗಿದ್ದ 'ಲ ಮೆರ್' (La mer) ಅಪಾರ್ಟ್ಮೆಂಟ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು. ಆ ವೇಳೆ ನಟಿ ಐಶ್ವರ್ಯ ರೈ ಮಾನವಿಯತೆ ಮೆರೆದಿದ್ದರು. ತಾಯಿಯ ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಬಿದ್ದಿದೆ ಎನ್ನುವ ಸುದ್ದಿ ಕೇಳಿದ ಕೂಡಲೇ ಐಶ್ವರ್ಯ ರೈ ತಮ್ಮ ಪತಿ ನಟ ಅಭಿಷೇಕ್ ಬಚ್ಚನ್ ರೊಂದಿಗೆ ಅಲ್ಲಿಗೆ ಬಂದಿದ್ದರು.

  ತಮ್ಮ ತಾಯಿ ಮಾತ್ರವಲ್ಲದೆ ಅಪಾರ್ಟ್ಮೆಂಟ್ ನಲ್ಲಿ ಇದ್ದ ಉಳಿದ ನಿವಾಸಿಗಳನ್ನು ಕೂಡ ಐಶ್ವರ್ಯ ವಿಚಾರಿಸಿದ್ದರು. ಜೊತೆಗೆ ಎಲ್ಲ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಊಟ ಮತ್ತು ನೀರನ್ನು ಐಶ್ವರ್ಯ ದಂಪತಿ ವಿತರಿಸಿದ್ದರು.. ಅಗ್ನಿ ಅವಗಡ ಸಂಭವಿಸಿದ ಅಪಾರ್ಟ್ಮೆಂಟ್ ನ 2ನೇ ಅಂತಸ್ತಿನಲ್ಲಿ ಐಶ್ವರ್ಯ ರೈ ತಾಯಿ ಬಿಂದ್ರಾ ರೈ ವಾಸಿಸುತ್ತಿದ್ದರೆ, ಸಚಿನ್ ಅವರ ಪತ್ನಿ ಅಂಜನಿ ಅವರ ತಂದೆ ತಾಯಿ ಕೂಡ ಅದೇ ಅಪಾರ್ಟ್ಮೆಂಟ್ ನಲ್ಲಿ ಇದ್ದರು.

  ಅಪಾರ್ಟ್ಮೆಂಟ್ ಗೆ ಭೇಟಿ ನೀಡಿದ ಐಶ್ವರ್ಯ ರೈ ನೋಡುವುದಕ್ಕೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಬಂದು ಅವರ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಅಂದಹಾಗೆ, ವಿವಾಹಕ್ಕೂ ಮುಂಚೆ ಐಶ್ವರ್ಯ ಕೂಡ ಇದೇ ಅಪಾರ್ಟ್ಮೆಂಟ್ ನಲ್ಲಿ ತಾಯಿಯೊಂದಿಗೆ ಇದ್ದರು. ಆದರೆ ಮದುವೆಯಾದ ಬಳಿಕ ಎಲ್ಲ ಹುಡುಗಿರಂತೆ ಐಶ್ವರ್ಯ ಕೂಡ ಗಂಡನ ಮನೆ ಸೇರಿದ್ದರು.

  English summary
  Aishwarya Rai Bachchan brought food and water for the residents of the apartment. which the one is a fire broke out on one floor of the La Mer building, it's the same building where Aishwarya Rai Bachchan's mother stay. ನಟಿ ಐಶ್ವರ್ಯ ರೈ ತಮ್ಮ ತಾಯಿ ಬಿಂದ್ರಾ ರೈ ವಾಸವಾಗಿದ್ದ ಅಪಾರ್ಟ್ಮೆಂಟ್ ನ ನಿವಾಸಿಗಳಿಗೆ ಊಟ ಮತ್ತು ನೀರನ್ನು ವಿತರಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X