»   » 'ನ್ಯೂಯಾರ್ಕ್'ನಲ್ಲಿ ಹೊಸ ಮನೆ ಖರೀದಿಸಿದ ಐಶ್-ಅಭಿಷೇಕ್ ದಂಪತಿ

'ನ್ಯೂಯಾರ್ಕ್'ನಲ್ಲಿ ಹೊಸ ಮನೆ ಖರೀದಿಸಿದ ಐಶ್-ಅಭಿಷೇಕ್ ದಂಪತಿ

Posted By:
Subscribe to Filmibeat Kannada

ಕಳೆದ ಒಂದು ತಿಂಗಳಿನಿಂದ ಬಾಲಿವುಡ್ ಸ್ಟಾರ್ ದಂಪತಿ ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯ ಜೊತೆ ನ್ಯೂಯಾರ್ಕ್ ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಈ ಹಾಲಿಡೇ ಟ್ರಿಪ್ ಗೆ ಐಶ್ವರ್ಯ ರೈ ಅವರ ಅಮ್ಮ ವೃಂದಾ ಕೂಡ ಸಾತ್ ಕೊಟ್ಟಿದ್ದಾರೆ.

ಮುಂಬೈ ಮೂಲದ ಬಚ್ಚನ್ ದಂಪತಿ, ಪ್ಯಾರೀಸ್, ದುಬೈ ಸೇರಿದಂತೆ ಹಲವು ಕಡೆ ಬಂಗಲೆಗಳನ್ನ ಹೊಂದಿದ್ದಾರೆ. ಈಗ ಲೇಟೆಸ್ಟ್ ಆಗಿ ನ್ಯೂಯಾರ್ಕ್ ನಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ ಹೊಸ ಅಪಾರ್ಟ್ ಮೆಂಟ್ ಕೊಂಡುಕೊಂಡಿದ್ದಾರಂತೆ. ನ್ಯೂಯಾರ್ಕ್ ಗೆ ಹೋದಾಗಲೆಲ್ಲ ಇಲ್ಲೆ ಉಳಿದುಕೊಳ್ಳುತ್ತಾರಂತೆ. ಇನ್ನು ಈ ಮನೆಯಲ್ಲಿ ಸ್ವತಃ ಐಶ್ವರ್ಯ ರೈ ಅವರೇ ವಿನ್ಯಾಸ ಮಾಡಿದ್ದಾರಂತೆ.

ಐಶ್ವರ್ಯ ರೈ ಬರ್ತಿಲ್ಲ, ಇವರು ಬಿಡ್ತಿಲ್ಲ.!

Aishwarya Rai buy a Plush Apartment in New York

ಇತ್ತಿಚೆಗಷ್ಟೇ ಐಶ್ವರ್ಯ ರೈ ಹಾಗೂ ಮಗಳು ಆರಾಧ್ಯ ಉಯ್ಯಾಲೆ ಆಡುತ್ತಿದ್ದ ಫೋಟೋವೊಂದು ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿತ್ತು. ಈ ಫೋಟೋ ಇದೇ ಹೊಸ ಮನೆಯ ಅಂಗಳಲ್ಲಿದರುವ ಪಾರ್ಕ್ ನಲ್ಲಿ ಕ್ಲಿಕ್ಕಿಸಿರುವುದಂತೆ.

ಒಂದೇ ದಿನದಲ್ಲಿ ಲಕ್ಷಾಂತರ ಲೈಕ್ಸ್ ಗಿಟ್ಟಿಸಿರುವ ಈ ಫೋಟೋ ಒಳಗೇನೈತಿ.?

ಸದ್ಯ, ನ್ಯೂಯಾರ್ಕ್ ನಲ್ಲಿ ಬೀಡುಬಿಟ್ಟಿರುವ ಅಭಿಷೇಕ್ ದಂಪತಿ 'ಪ್ರೋ ಕಬ್ಬಡಿ' ಟೂರ್ನಿಮೆಂಟ್ ಶುರುವಾಗುವ ಹಿನ್ನೆಲೆ ಈ ವಾರಂತ್ಯಕ್ಕೆ ಭಾರತಕ್ಕೆ ವಾಪಸ್ ಆಗಲಿದ್ದಾರೆ. ನಂತರ ಐಶ್ವರ್ಯ ರೈ ತಮ್ಮ ಮುಂದಿನ ಸಿನಿಮಾ 'ಫನ್ನಿ ಖಾನ್' ಚಿತ್ರದ ಚಿತ್ರೀಕರಣವನ್ನ ಶುರು ಮಾಡಲಿದ್ದಾರೆ.

English summary
Bollywood Actress Aishwarya Rai Bachchan and Abhishek Bachchan buy a plush apartment in New York.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada