»   » ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?

ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?

Posted By:
Subscribe to Filmibeat Kannada
ಶ್ರೀದೇವಿಯ ಅಂತಿಮ ದರ್ಶನಕ್ಕೆ ಯಾರೆಲ್ಲಾ ಹೋಗಿದ್ದರು.? | Filmibeat Kannada

ನಟಿ ಶ್ರೀದೇವಿಯ ಅಂತಿಮ ದರ್ಶನ ಪಡೆಯಲು ಭಾರತೀಯ ಚಿತ್ರರಂಗದ ಹಲವು ನಟ, ನಟಿ, ನಿರ್ದೇಶಕ ಹಾಗೂ ತಂತ್ರಜ್ಞರು ಸೇರಿದಂತೆ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದಾರೆ. ನೆಚ್ಚಿನ ನಟಿಯ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

ಮುಂಬೈಯ ಸೆಲೆಬ್ರೇಶನ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30ವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 4 ಗಂಟೆ ಹೊತ್ತಿಗೆ ವಿಲೆ ಪಾರ್ಲೆಯ ಸೇವಾ ಸಮಾಜ ಚಿತಾಗಾರ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಶ್ರೀದೇವಿ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳ ಜನಸ್ತೋಮ: ಇಂದು ಅಂತ್ಯಸಂಸ್ಕಾರ

ಶ್ರೀದೇವಿಯ ಅಂತಿಮ ದರ್ಶನ ಪಡೆಯಲು ಯಾವೆಲ್ಲಾ ತಾರೆಯರು ಆಗಮಿಸಿದ್ದರು ಎಂಬುದನ್ನ ಚಿತ್ರಗಳ ಸಮೇತ ನೋಡಿ...

ಐಶ್ವರ್ಯ ರೈ ಮತ್ತು ಫ್ಯಾಮಿಲಿ

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್, ಜಯಾ ಬಚ್ಚನ್ ಹಾಗೂ ಶ್ವೇತಾ ನಂದ ಶ್ರೀದೇವಿಯ ಅಂತಿಮ ದರ್ಶನ ಪಡೆದರು.

ದೀಪಿಕಾ ಪಡುಕೋಣೆ

ಹಿಂದಿ ಚಿತ್ರರಂಗದ ಖ್ಯಾತ ನಟಿ ದೀಪಿಕಾ ಪಡುಕೋಣೆ ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿದರು.

ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

ಸುಷ್ಮಿತಾ ಸೇನ್

ಬಾಲಿವುಡ್ ಖ್ಯಾತ ನಟಿ ಸುಷ್ಮಿತಾ ಸೇನ್ ಕೂಡ ಎವರ್ ಗ್ರೀನ್ ನಟಿಯ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ರೇಖಾ, ವಿದ್ಯಾ ಬಾಲನ್

ಹಿಂದಿ ಚಿತ್ರರಂಗದ ಎವರ್ ಗ್ರೀನ್ ನಟಿ ರೇಖಾ, ವಿದ್ಯಾ ಬಾಲನ್ ಹಾಗೂ ಮನೀಶ್ ಮಲ್ಹೋತ್ರ ಕೂಡ ಶ್ರೀದೇವಿಯ ಅಂತಿಮ ದರ್ಶನ ಪಡೆದುಕೊಂಡರು.

ಕಾಜೋಲ್ ಫ್ಯಾಮಿಲಿ

ಅಜಯ್ ದೇವಗನ್ ಮತ್ತು ಕಾಜೋಲ್ ಶ್ರೀದೇವಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ತನುಶಾ ಮತ್ತು ತನುಜಾ ಕೂಡ ಭಾಗಿಯಾಗಿದ್ದರು.

ಸೋನಮ್ ಕಪೂರ್

ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಗೆಳೆಯ ಆನಂದ್ ಆಹುಜಾ ಅವರ ಜೊತೆ ಆಗಮಿಸಿದ್ದರು. ಹರ್ಷವರ್ಧನ್ ಮತ್ತು ರಿಯಾ ಕೂಡ ಶ್ರೀದೇವಿಗೆ ಅಂತಿಮ ನಮಸ ಸಲ್ಲಿಸಿದರು.

ಯುವತಾರೆಯರಿಂದ ಭಾವಪೂರ್ಣ ನಮನ

ಬಿಟೌನ್ ನ ಯುವನಟಿಯರಾದ ಮಲೈಕಾ, ಸೋಹಾ ಅಲಿ ಖಾನ್, ನೇಹಾ ಧೂಪಿಯಾ ಹಾಗೂ ಶ್ರದ್ಧಾ ಕಪೂರ್ ಶ್ರೀದೇವಿಗೆ ಭಾವಪೂರ್ಣ ನಮನ ಸಲ್ಲಿಸಿದರು.

ಶಾಹೀದ್ ಕಪೂರ್ ದಂಪತಿ

ಶಾಹೀದ್ ಕಪೂರ್ ಮತ್ತು ಪತ್ನಿ ಮೀರಾ ರಜಪೂತ್ ದಂಪತಿ ಸಮೇತ ಶ್ರೀದೇವಿಯ ಅಂತಿಮ ದರ್ಶನ ಪಡೆದರು. ಇನ್ನು ಯುವ ನಟ ಆದಿತ್ಯ ರಾಯ್ ಕಪೂರ್ ಕೂಡ ಹಿರಿಯ ನಟಿಗೆ ನಮನ ಸಲ್ಲಿಸಿದರು.

ಅಕ್ಷಯ್ ಖನ್ನಾ

ಶ್ರೀದೇವಿ ಅಭಿನಯಿಸಿದ್ದ ಮಾಮ್ ಚಿತ್ರದ ಸಹನಟ ಅಕ್ಷಯ್ ಖನ್ನಾ ಕೂಡ ಸಹನಟಿಯ ಅಂತಿಮ ದರ್ಶನ ಪಡೆದುಕೊಂಡರು.

ಶ್ರೀದೇವಿಯನ್ನೇ ಹೋಲುತ್ತಿದ್ದ ನಟಿ: ಈಕೆಯದ್ದು ದುರಂತ ಸಾವೇ.!

ಹೇಮಾ ಮಾಲಿನಿ

ಬಾಲಿವುಡ್ ನ ಸೂಪರ್ ಸ್ಟಾರ್ ನಟಿ ಹೇಮಾ ಮಾಲಿನಿ ಅವರು ತಮ್ಮ ಸಹ ನಟಿ ಶ್ರೀದೇವಿಯ ಅಂತಿಮ ದರ್ಶನ ಪಡೆದುಕೊಂಡರು.

ಹಿಮೇಶ್ ರಶಮೀಯಾ

ಹಿಮೇಶ್ ರಶಮೀಯಾ ಕೂಡ ಶ್ರೀದೇವಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಜಾಕ್ ಲೀನ್

ಯುವ ನಟಿ ಜಾಕ್ ಲೀನ್ ಫರ್ನಾಂಡೀಸ್ ಕೂಡ ಶ್ರೀದೇವಿಯ ಅಂತಿಮ ದರ್ಶನ ಪಡೆದುಕೊಂಡರು.

ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

ಶ್ರೀದೇವಿಯ ಸಾವಿನ ಬಳಿಕ ಕೋಪಗೊಂಡ ರಿಷಿ ಕಪೂರ್.!

'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!

English summary
To Sridevi, A Final Farewell From Aishwarya, Deepika, Kajol And Others. After the condolence meet, Sridevi's final journey will begin and she will finally be cremated in Vile Parle West at 3.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada