For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್-ಅಭಿಷೇಕ್ ಬಚ್ಚನ್ ಪಾಸಿಟಿವ್, ಐಶ್ವರ್ಯಾ ರೈ-ಜಯಾ ಬಚ್ಚನ್ ಗೆ ನೆಗೆಟಿವ್

  |

  ಖ್ಯಾತ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

  ಶಿವಣ್ಣನ ಅಭಿಮಾನಿಗಳು ನಂಗೆ ಏನ್ ಮಾಡ್ತಾರೋ ಅನ್ನೋ ಭಯ ಆಗಿತ್ತು | Vijay Raghavendra | Filmibeat Kannada

  ಆದರೆ ಒಂದೇ ಮನೆಯಲ್ಲಿ ವಾಸಿಸುತ್ತಿರುವ ಅಮಿತಾಬ್ ಪತ್ನಿ ಜಯಾ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ರೈ ಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ.

  ಅಮಿತಾಬ್ ಬಚ್ಚನ್‌ ಮತ್ತು ಅಭಿಷೇಕ್ ಬಚ್ಚನ್‌ಗೆ ಕೊರೊನಾ ವೈರಸ್ ಪಾಸಿಟಿವ್ಅಮಿತಾಬ್ ಬಚ್ಚನ್‌ ಮತ್ತು ಅಭಿಷೇಕ್ ಬಚ್ಚನ್‌ಗೆ ಕೊರೊನಾ ವೈರಸ್ ಪಾಸಿಟಿವ್

  ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂಬ ನಂತರ ಅವರ ಕುಟುಂಬ ಸದಸ್ಯರು ಮತ್ತು ಅವರ ಸಿಬ್ಬಂದಿಗಳನ್ನೆಲ್ಲಾ ಪರೀಕ್ಷೆಗೆ ಒಳಪಡಿಸಲಾಗಿದೆ.

  ಜಯಾ ಬಚ್ಚನ್, ಐಶ್ವರ್ಯಾ ರೈ ಗೆ ನೆಗೆಟಿವ್

  ಜಯಾ ಬಚ್ಚನ್, ಐಶ್ವರ್ಯಾ ರೈ ಗೆ ನೆಗೆಟಿವ್

  ಜಯಾ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಅವರು ಆಂಟಿಜೆನ್ ಪರೀಕ್ಷೆಗೆ ಒಳಪಟ್ಟಿದ್ದು ಅದರಲ್ಲಿ ಕೊರೊನಾ ನೆಗೆಟಿವ್ ಎಂದು ಫಲಿತಾಂಶ ಬಂದಿದೆ. ಆದರೆ ಹೆಚ್ಚಿನ ನಿಖರತೆಗಾಗಿ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿಗೆ ಎದುರು ನೋಡಲಾಗುತ್ತಿದೆ.

  ಎಲ್ಲಾ ಸಿಬ್ಬಂದಿಗೂ ಪರೀಕ್ಷೆ ಮಾಡಲಾಗಿದೆ

  ಎಲ್ಲಾ ಸಿಬ್ಬಂದಿಗೂ ಪರೀಕ್ಷೆ ಮಾಡಲಾಗಿದೆ

  ಅಮಿತಾಬ್ ಕುಟುಂಬದ ಎಲ್ಲರಿಗೂ ಹಾಗೂ ಸಿಬ್ಬಂದಿಗೆ ಎಲ್ಲರಿಗೂ ಆಂಟಿಜೆನ್ ಪರೀಕ್ಷೆ ಮಾಡಲಾಗಿದ್ದು ಅಮಿತಾಬ್ ಅಭಿಷೇಕ್ ಹೊರತುಪಡಿಸಿ ಎಲ್ಲರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಎಲ್ಲರೂ ಸ್ವಯಂ ಕ್ವಾರಂಟೈನ್‌ ಗೆ ಒಳಗಾಗಿದ್ದಾರೆ.

  ಬಾಲಿವುಡ್‌ನ ಹಿರಿಯ ನಟಿ ರೇಖಾ 'ಸೀ ಸ್ಪ್ರಿಂಗ್ಸ್' ಬಂಗಲೆ ಸೀಲ್ ಡೌನ್ಬಾಲಿವುಡ್‌ನ ಹಿರಿಯ ನಟಿ ರೇಖಾ 'ಸೀ ಸ್ಪ್ರಿಂಗ್ಸ್' ಬಂಗಲೆ ಸೀಲ್ ಡೌನ್

  ಆಂಟಿಜೆನ್ ಪರೀಕ್ಷೆ ಮಾತ್ರವೇ ಮಾಡಲಾಗಿದೆ

  ಆಂಟಿಜೆನ್ ಪರೀಕ್ಷೆ ಮಾತ್ರವೇ ಮಾಡಲಾಗಿದೆ

  ಆಂಟಿಜೆನ್ ಪರೀಕ್ಷೆಯು 100% ನಿಖರ ವರದಿ ನೀಡುತ್ತದೆ ಎನ್ನಲಾಗದು ಹಾಗಾಗಿ ಕೊರೊನಾ ಪಾಸಿಟಿವ್ ತಿಳಿಯಲು ಗಂಟಲು ದ್ರವ ಮಾದರಿಯ ಪರೀಕ್ಷೆಯೇ ಹೆಚ್ಚು ಪರಿಣಾಮಕಾರಿ ಎಂದು ನಂಬಲಾಗಿದೆ. ಐಶ್ವರ್ಯಾ ರೈ ಹಾಗೂ ಜಯಾ ಬಚ್ಚನ್ ಅವರ ಗಂಟಲು ದ್ರವ ಮಾದರಿ ವರದಿಗಾಗಿ ಕಾಯಲಾಗುತ್ತಿದೆ.

  ನಾನಾವತಿ ಆಸ್ಪತ್ರೆಗೆ ದಾಖಲಾಗಿರುವ ಅಪ್ಪ-ಮಗ

  ನಾನಾವತಿ ಆಸ್ಪತ್ರೆಗೆ ದಾಖಲಾಗಿರುವ ಅಪ್ಪ-ಮಗ

  77 ವರ್ಷ ವಯಸ್ಸಿನ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಇಬ್ಬರೂ ನಟರು ಟ್ವೀಟ್ ಮಾಡಿದ್ದು, ಪ್ರಸ್ತುತ ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ಜೊತೆಗೆ ತಮ್ಮ ಸಂಪರ್ಕದಲ್ಲಿದ್ದವರೆಲ್ಲಾ ಸ್ವಯಂ ಪ್ರೇರಿತವಾಗಿ ಟೆಸ್ಟ್ ಮಾಡಿಸಿಕೊಳ್ಳಿ ಎಂದಿದ್ದಾರೆ.

  ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪತ್ನಿಗೆ ಕೊರೊನಾ ವೈರಸ್ ಸೋಂಕು ದೃಢನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪತ್ನಿಗೆ ಕೊರೊನಾ ವೈರಸ್ ಸೋಂಕು ದೃಢ

  English summary
  Aishwarya Rai and Jaya Bachchan tested negative for coronavirus. Amithab Bachchan and Abhishek Bachchan tested positive yesterday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X