»   » ವಿಸ್ಮಯ: ಐಶ್ ಗೆ ಅಭಿ ಮೇಲೆ ಯಾವತ್ತೂ ಕ್ರಷ್ ಆಗಿಲ್ವಂತೆ.!

ವಿಸ್ಮಯ: ಐಶ್ ಗೆ ಅಭಿ ಮೇಲೆ ಯಾವತ್ತೂ ಕ್ರಷ್ ಆಗಿಲ್ವಂತೆ.!

By: ಸೋನು ಗೌಡ
Subscribe to Filmibeat Kannada

ಏನ್ ಗೊತ್ತಾ?, ಬೆಕ್ಕಿನ ಕಣ್ಣಿನ ಸುಂದರಿ ಐಶ್ವರ್ಯ ರೈ ಅವರಿಗೆ ತಮ್ಮ ಮುದ್ದಿನ ಪತಿದೇವ ಅಭಿಷೇಕ್ ಬಚ್ಚನ್ ಅವರ ಮೇಲೆ ಯಾವತ್ತೂ ಕ್ರಷ್ ಆಗೇ ಇಲ್ವಂತೆ.

ಹಾಗಾದ್ರೆ ಬಾಲಿವುಡ್ ನಲ್ಲಿ ಯಶಸ್ವಿ ಜೋಡಿ ಅಂತ ಹೆಗ್ಗಳಿಕೆ ಇರೋ ಈ ದಂಪತಿಗಳ 'ಸಂಸಾರ ಆನಂದ ಸಾಗರ' ಆಗಲು ಕಾರಣ ಏನು?. ಅಷ್ಟಕ್ಕೂ ಇವರಿಬ್ಬರ ನಡುವೆ ಏನಿರಬಹುದು ಅಂತ ಸಾಮಾನ್ಯವಾಗಿ ಎಲ್ಲರಿಗೂ ಪ್ರಶ್ನೆ ಬಂದೇ ಬರುತ್ತೆ.[ದಾಂಪತ್ಯದ ಬಿರುಕಿನ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಬಚ್ಚನ್]

Aishwarya Rai never had a crush on his husband Abhishek Bachchan

ಅಂದಹಾಗೆ ಐಶ್ ಗೆ ಅಭಿಷೇಕ್ ಬಚ್ಚನ್ ಮೇಲೆ ಅಂತಹ ವಿಶೇಷ ಕ್ರಷ್ ಏನೂ ಇಲ್ಲ ನಿಜ. ಆದರೆ ಇವರಿಬ್ಬರ ಮಧ್ಯೆ ಪತಿ-ಪತ್ನಿ ಎಂಬ ಸಂಬಂಧಕ್ಕಿಂತ ಹೆಚ್ಚಾಗಿ ಅದ್ಭುತವಾದ ಸ್ನೇಹ ಇದೆ. ಇದನ್ನು ಖುದ್ದು ಐಶ್ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಐಶ್ವರ್ಯ ರೈ ಅವರು 'ನೆವರ್ ಹ್ಯಾವ್ ಐ ಎವರ್' ಎಂಬ ಟಾಕ್ ಗೇಮ್ ಶೋ ಒಂದರಲ್ಲಿ ಭಾಗವಹಿಸಿದ್ದರು. ಅಲ್ಲಿ ಐಶ್ ಅವರಿಗೆ 'ನಿಮಗೆ ನಿಮಗಿಂತ ಚಿಕ್ಕ ವಯಸ್ಸಿನ ವ್ಯಕ್ತಿಯ ಮೇಲೆ ಯಾವತ್ತಾದರೂ ಸೆಳೆತ ಉಂಟಾಗಿತ್ತಾ' ಎಂಬ ಪ್ರಶ್ನೆ ಮಾಡಲಾಯಿತು.[ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು]

Aishwarya Rai never had a crush on his husband Abhishek Bachchan

ಅದಕ್ಕೆ ಐಶ್ವರ್ಯ ಅವರು 'ನನಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿರುವ ಅಭಿಷೇಕ್ ಬಚ್ಚನ್ ಅವರನ್ನು ನಾನು ಮದುವೆಯಾಗಿದ್ದೇನೆ. ಆದರೆ ನನಗೆ ಅವರ ಮೇಲೆ ಕ್ರಷ್ ಯಾವತ್ತೂ ಆಗಿಲ್ಲ. ನಮ್ಮಿಬ್ಬರ ಮಧ್ಯೆ ಇರುವ ಸ್ನೇಹ ಸಂಬಂಧವೇ ನಮ್ಮ ಸುಖ ಸಂಸಾರದ ಗುಟ್ಟು' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Aishwarya Rai never had a crush on his husband Abhishek Bachchan

ನಟಿ ಐಶ್ವರ್ಯ ಮತ್ತು ಅಭಿಷೇಕ್ ಮೊಟ್ಟ ಮೊದಲ ಬಾರಿಗೆ ಭೇಟಿ ಆಗಿದ್ದು, 'ಔರ್ ಪ್ಯಾರ್ ಹೋ ಗಯಾ' ಎಂಬ ಚಿತ್ರದ ಶೂಟಿಂಗ್ ಸೆಟ್ ನಲ್ಲಿ. ಈ ಚಿತ್ರದಲ್ಲಿ ಬಾಬಿ ಡಿಯೋಲ್ ಮತ್ತು ಐಶ್ ಒಂದಾಗಿದ್ದರು. ಬಾಬಿಯ ಬೆಸ್ಟ್ ಫ್ರೆಂಡ್ ಆಗಿದ್ದ ಅಭಿಷೇಕ್ ಆಗಾಗ ಸೆಟ್ ಗೆ ಬಂದು ಐಶ್ ಅವರ ಜೊತೆ ಕೂಡ ಕ್ಲೋಸ್ ಆಗಿ ಇರುತ್ತಿದ್ದರು.[ಚಿತ್ರಗಳು: 9ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಐಶ್-ಅಭಿ]

Aishwarya Rai never had a crush on his husband Abhishek Bachchan

ತದನಂತರ ಅಭಿ ಮತ್ತು ಐಶ್ 'ದಹಿ ಅಕ್ಸರ್ ಪ್ರೇಮ್ ಕಿ' ಎಂಬ ಚಿತ್ರದ ಮೂಲಕ ಒಂದಾಗಿ ಮಿಂಚಿದರು. ಅಲ್ಲೂ ಕೂಡ ಒಳ್ಳೆ ಸ್ನೇಹಿತರಾಗಿದ್ದ ಇವರಿಬ್ಬರು 'ಗುರು' ಚಿತ್ರದ ನಂತರ ಸತಿ-ಪತಿಗಳಾದರು.

Aishwarya Rai never had a crush on his husband Abhishek Bachchan

ಒಟ್ನಲ್ಲಿ ಬರೋಬ್ಬರಿ 9 ವರ್ಷಗಳ ಕಾಲ ಸುಖಿ ದಾಂಪತ್ಯ ಪೂರೈಸಿರುವ ಐಶ್-ಅಭಿ ದಂಪತಿಗಳು ಎಲ್ಲರಿಗೆ ಆದರ್ಶ ದಂಪತಿಗಳಾಗಿದ್ದಾರೆ. ಇವರಿಬ್ಬರ ಸುಂದರ ಸಂಸಾರದ ಕುರುಹಾಗಿ ಆರಾಧ್ಯ ಹುಟ್ಟಿದ್ದಾಳೆ.[ಐಶ್ವರ್ಯ ಅವರ ಅಪರೂಪದ ಚಿತ್ರಗಳನ್ನು ನೋಡಿ]

English summary
'I Never had a crush on my husband Abhishek Bachchan' says Bollywood actress Aishwarya Rai Bachchan. Here is the details check it out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada