»   » ಐಶ್ವರ್ಯ ರೈಗೆ 10 ಕೋಟಿ ಸಂಭಾವನೆ ಆಫರ್ ನೀಡಿದ್ದೇಕೆ?

ಐಶ್ವರ್ಯ ರೈಗೆ 10 ಕೋಟಿ ಸಂಭಾವನೆ ಆಫರ್ ನೀಡಿದ್ದೇಕೆ?

Posted By:
Subscribe to Filmibeat Kannada

ಮಾಜಿ ವಿಶ್ವಸುಂದರಿ, ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ರೈಗೆ ಮದುವೆ ಆಗಿದ್ದರೂ, ಎಷ್ಟೇ ವಯಸ್ಸಾದ್ರು, ಸಿನಿಲೋಕದಲ್ಲಿ ಬೇಡಿಕೆ ಮಾತ್ರ ಒಂಚೂರು ಕಮ್ಮಿ ಆಗಲ್ಲ. ಇಂದಿನ ಯುವ ನಟಿಯರು ಹಾಗೂ ನಂಬರ್ ವನ್ ಎನಿಸಿಕೊಂಡಿರುವ ನಟಿಯರಿಗೂ ಫೈಟ್ ನೀಡುವಂತೆ ತಾಕತ್ತು ಐಶ್ ಗಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

ಸದ್ಯ, ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತಿದೆ. ಇವರ ಮಧ್ಯೆ ಐಶ್ವರ್ಯ ರೈ 10 ಕೋಟಿ ಸಂಭಾವನೆಯ ಆಫರ್ ಪಡೆಯುವ ಮೂಲಕ ಎಲ್ಲರನ್ನ ಬೆರಗಾಗಿಸಿದ್ದಾರೆ.

ಬಿಗ್ ಶಾಕ್: ಮಂಗಳೂರಿನಲ್ಲಿ ಐಶ್ವರ್ಯ ರೈಗೊಬ್ಬ ಮಗ ಇದ್ದಾನಂತೆ.!

ಹೌದು, 1967ರಲ್ಲಿ ತೆರೆಕಂಡ ಹಿಂದಿಯ 'ರಾತ್ ಔರ್ ದಿನ್' ಚಿತ್ರದ ರಿಮೇಕ್​ನಲ್ಲಿ ನಟಿಸುವಂತೆ ಐಶ್ವರ್ಯ ರೈಗೆ ಆಫರ್ ನೀಡಲಾಗಿದೆ. ಈ ಚಿತ್ರಕ್ಕಾಗಿ ಐಶ್ ಬರೋಬ್ಬರಿ 10 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ಈ ಹಿಂದಿನ 'ಹೈ ಮುಷ್ಕಿಲ್' ಚಿತ್ರಕ್ಕಾಗಿ ಅವರು ಐದು ಕೋಟಿ ರೂ. ಸಂಭಾವನೆ ಪಡೆದಿದ್ದರು. 'ರಾತ್ ಔರ್ ದಿನ್' ರಿಮೇಕ್​ನಲ್ಲಿ ದ್ವಿಪಾತ್ರವಾಗಿದ್ದು, ಒಂದರಲ್ಲಿ ನೆಗೆಟಿವ್ ಶೇಡ್ ಕೂಡ ಇರಲಿದೆಯಂತೆ. ಹೀಗಾಗಿ, ಬೇರೆ ಚಿತ್ರಗಳನ್ನ ಬಿಟ್ಟು ಈ ಸಿನಿಮಾ ಮಾಡಲು ಐಶ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಐಶ್ ಅವರ ಡೆಡಿಕೇಶನ್ ನೋಡಿ ನಿರ್ಮಾಪಕರು ಕೂಡ ಐಶ್ ಕೇಳಿರುವ ಸಂಭಾವನೆವನ್ನ ನೀಡಲು ಸಮ್ಮಿತಿಸಿದ್ದಾರೆ ಎನ್ನಲಾಗಿದೆ.

Aishwarya Rai offered Rs 10 crore for next movie

ಸದ್ಯ, ಐಶ್ವರ್ಯ ರೈ, ಅನಿಲ್ ಕಪೂರ್ ಜೊತೆ 'ಫೆನ್ನಿಖಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಾದ ನಂತರ ಬಹುಶಃ 'ರಾತ್ ಔರ್ ದಿನ್' ರೀಮೇಕ್ ಸಿನಿಮಾ ಸೆಟ್ಟೇರಬಹುದು. ಅದೇನೆ ಇರಲಿ, ಐಶ್ ಈ ಚಿತ್ರಕ್ಕೆ ಇಷ್ಟೊಂದು ಮೊತ್ತ ಸಂಭಾವನೆ ಪಡೆಯಲಿದ್ದಾರೆ ಎಂಬುದನ್ನ ಕೇಳಿ ಬಾಲಿವುಡ್ ನಟಿಯರು ಹೊಟ್ಟೆ ಉರಿಪಟ್ಟಿಕೊಂಡರು ಅಚ್ಚರಿಯಿಲ್ಲ.

'ರಾತ್ ಔರ್ ದಿನ್' ಚಿತ್ರ 1967 ರಲ್ಲಿ ಬಿಡುಗಡೆಯಾಗಿತ್ತು. ಸಂಜಯ್ ದತ್ ಅವರ ತಾಯಿ ನರ್ಗಿಸ್ ಅವರು ದ್ವಿಪಾತ್ರವನ್ನ ನಿರ್ವಹಿಸಿದ್ದರು. ಈ ಸಿನಿಮಾ ನರ್ಗಿಸ್ ಜೀವನದ ಸೂಪರ್ ಹಿಟ್ ಸಿನಿಮಾ. ಸತ್ಯನ್ ಬೋಸ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಇದೀಗ, ನರ್ಗೀಸ್ ಅಭಿನಯಿಸಿದ್ದ ಪಾತ್ರದಲ್ಲಿ ಐಶ್ ಅಭಿನಯಿಸಲು ಮುಂದಾಗಿದ್ದಾರೆ.

English summary
Aishwarya Rai Bachchan has been offered Rs 10 crore for the remake of 1967 film Raat Aur Din. She will be reprising the role played by Sanjay Dutt’s mother Nargis.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X