For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಜೊತೆ ನಟಿಸಬೇಡಿ ಎಂದು ಪತಿಗೆ ಹೇಳಿದ್ದೇಕೆ ಐಶ್ವರ್ಯ ರೈ?

  |

  ಮಾಜಿ ವಿಶ್ವ ಸುಂದರಿ, ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯ ರೈ ಸದ್ಯ ಯಾವುದೆ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲ. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಐಶ್, ಒಂದು ಕಾಲದ ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ಮತ್ತು ಬೇಡಿಕೆಯ ನಟಿಯಾಗಿದ್ದರು. ಮಗಳು ಆರಾದ್ಯಳಿಗೆ ಜನ್ಮ ನೀಡಿದ ನಂತರ ಐಶ್ವರ್ಯ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

  ನಾನು ಪ್ರಭಾಸ್ ರನ್ನು ಬಿಡಲ್ಲ ಎಂದ ಅನುಷ್ಕಾ ಶೆಟ್ಟಿ | Anushka Shetty & Prabhas | Filmibeat Kannada

  ಜಸ್ಬಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದ ಐಶ್ವರ್ಯಗೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಗಲಿಲ್ಲ. ಆ ನಂತರ ಬಂದ ಮೂರು ಸಿನಿಮಾಗಳು ಸಹ ನಿರೀಕ್ಷೆ ಮಟ್ಟ ಮುಟ್ಟಲಿಲ್ಲ. ಇತ್ತ ಪತಿ ಅಭಿಷೇಕ್ ಸಿನಿಮಾಗಳು ಸಹ ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಾಣುತ್ತಿಲ್ಲ. ಸಿನಿಮಾದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ಐಶ್ವರ್ಯ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ.

  ಪ್ರಿಯಾಂಕಾ ಚೋಪ್ರ ಮತ್ತು ಫರಾನ್ ಅಖ್ತರ್ ಬೆಡ್ ರೂಮ್ ದೃಶ್ಯ ಲೀಕ್ಪ್ರಿಯಾಂಕಾ ಚೋಪ್ರ ಮತ್ತು ಫರಾನ್ ಅಖ್ತರ್ ಬೆಡ್ ರೂಮ್ ದೃಶ್ಯ ಲೀಕ್

  ಐಶ್ವರ್ಯ ರೈ ಪತಿ ಅಭಿಷೇಕ್ ಗೆ ಬಾಲಿವುಡ್ ನ ಮತ್ತೋರ್ವ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಜೊತೆ ಅಭಿನಯಿಸಬೇಡಿ ಎಂದು ಹೇಳಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಏನಿದು ಐಶ್ವರ್ಯ ಹೊಸ ಸುದ್ದಿ. ಐಶ್ವರ್ಯ ಹೀಗೆ ಹೇಳಿದ್ದೇಕೆ? ಮುಂದೆ ಓದಿ...

  ಸ್ಕೈ ಈಸ್ ಪಿಂಕ್ ಚಿತ್ರದ ಹಿಂದಿನ ರಹಸ್ಯ ಬಯಲು

  ಸ್ಕೈ ಈಸ್ ಪಿಂಕ್ ಚಿತ್ರದ ಹಿಂದಿನ ರಹಸ್ಯ ಬಯಲು

  ಪ್ರಿಯಾಂಕಾ ಚೋಪ್ರಾ ಮತ್ತು ಫರ್ಹಾನ ಅಖ್ತರ್ ಅಭಿನಯದ ಸಿನಿಮಾ. ವಿಶೇಷ ಅಂದರೆ ಪ್ರಿಯಾಂಕಾ ಮದುವೆಯಾದ ನಂತರ ತೆರೆಗೆ ಬಂದ ಸಿನಿಮಾವಿದು. ತಾಯಿ ಮಗಳ ಸಂಬಂಧದ ಬಗ್ಗೆ ಇದ್ದ ಈ ಸಿನಿಮಾದಲ್ಲಿ ಪ್ರಿಯಾಂಕಾ ಮಗಳ ಪಾತ್ರದಲ್ಲಿ ಝೈರಾ ವಾಸಿಂ ಕಾಣಿಸಿಕೊಂಡಿದ್ದರು. ಸೊನಾಲಿ ಭೋಸ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವಿದು.

  ಫರ್ಹಾನ್ ಪಾತ್ರ ಮಾಡಬೇಕಿತ್ತು ಅಭಿಷೇಕ್

  ಫರ್ಹಾನ್ ಪಾತ್ರ ಮಾಡಬೇಕಿತ್ತು ಅಭಿಷೇಕ್

  ನಟ ಫರ್ಹಾನ್ ಅಖ್ತರ್ ಮಾಡಿರುವ ಪಾತ್ರದಲ್ಲಿ ಐಶ್ಪರ್ಯ ರೈ ಪತಿ ಅಭಿಷೇಕ್ ಬಚ್ಚನ್ ಕಾಣಿಸಿಕೊಳ್ಳಬೇಕಿತ್ತು. ಆದರೆ ಸಿನಿಮಾದಿಂದ ಅಭಿಷೇಕ್ ಹಿಂದೆ ಸರಿದ ಕಾರಣ ಚಿತ್ರತಂಡ ಫರ್ಹಾನ್ ಅಖ್ತರ್ ಆಯ್ಕೆ ಮಾಡಿದೆ. ಪ್ರಿಯಾಂಕಾ ಪತಿಯಾಗಿ ಫರ್ಹಾನ್ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಅಭಿಷೇಕ್ ಸಿನಿಮಾದಿಂದ ಹಿಂದೆ ಸರಿಯಲು ಕಾರಣ ಪತ್ನಿ ಐಶ್ವರ್ಯ ರೈ ಎಂದು ಹೇಳಲಾಗುತ್ತಿದೆ.

  ಪ್ರಿಯಾಂಕಾ ಮತ್ತು ಅಭಿಷೇಕ್ ಗೆಳೆತನಕ್ಕೆ ಹೆದರಿದ್ರಾ ಐಶ್?

  ಪ್ರಿಯಾಂಕಾ ಮತ್ತು ಅಭಿಷೇಕ್ ಗೆಳೆತನಕ್ಕೆ ಹೆದರಿದ್ರಾ ಐಶ್?

  ನಟ ಅಭಿಷೇಕ್ ಬಚ್ಚನ್ ಸಾಕಷ್ಟು ಸ್ಟಾರ್ ನಟರು ಮತ್ತು ನಟಿಯರ ಜೊತೆ ಉತ್ತಮ ಗೆಳೆತನ ಇಟ್ಟುಕೊಂಡಿದ್ದಾರೆ. ಅದರಲ್ಲೂ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಭಿಷೇಕ್ ಇಬ್ಬರು ಉತ್ತಮ ಸ್ನೇಹಿತರು. ಹಾಗಾಗಿ ಇಬ್ಬರ ಗೆಳೆತನಕ್ಕೆ ಹೆದರಿ ಐಶ್ವರ್ಯ ತನ್ನ ಪತಿಯನ್ನು ಪ್ರಿಯಾಂಕಾರಿಂದ ದೂರ ಇಟ್ಟರಾ ಎನ್ನುವ ಅನುಮಾನ ಕಾಡುತ್ತೆ. ಪತಿ ಇನ್ನೊಬ್ಬ ನಟಿಯ ಪತಿಯಾಗಿ ಕಾಣಿಸಿಕೊಳ್ಳುವುದು ಐಶ್ ಗೆ ಇಷ್ಟವಿರಲಿಲ್ಲ ಅಂತ ಅಲ್ಲ. ಕಾರಣ ಬೇರೆಯೆ ಇದೆ.

  ಅಸಲಿ ಕಾರಣ ಏನು?

  ಅಸಲಿ ಕಾರಣ ಏನು?

  ಸ್ಕೈ ಈಸ್ ಪಿಂಕ್ ಸಿನಿಮಾದಲ್ಲಿ ಚಿತ್ರದಲ್ಲಿ ಅಭಿಷೇಕ್ ಗೆ ಜೋಡಿಯಾಗಿ ನಟಿ ಐಶ್ವರ್ಯ ರೈ ಕಾಣಿಸಿಕೊಳ್ಳಬೇಕಿತ್ತಂತೆ. ಮೊದಲು ಸಿನಿಮಾದ ಕಥೆ ಹೇಳಿದ್ದೆ ಅಭಿಷೇಕ್ ಮತ್ತು ಐಶ್ವರ್ಯ ರೈಗೆ. ಮದುವೆ ನಂತರ ಐಶ್-ಅಭಿ ಒಟ್ಟಿಗೆ ತೆರೆಮೇಲೆ ಬರಲು ಸಜ್ಜಾಗಿದ್ದರು. ಆದರೆ ಚಿತ್ರತಂಡ ಕೊನೆಯಲ್ಲಿ ಐಶ್ವರ್ಯ ಬದಲು ಪ್ರಿಯಾಂಕಾ ಚೋಪ್ರಾ ಮಾಡಿದ್ರೆ ಚೆನ್ನಾಗಿರುತ್ತೆ ಎಂದು ಪ್ರಿಯಾಂಕಾ ಬಳಿ ಹೋಗಿದ್ದಾರೆ. ನಂತರ ಸಿನಿಮಾಗೆ ಪ್ರಿಯಾಂಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

  ಸಿನಿಮಾ ಮಾಡಬೇಡಿ ಎಂದ ಐಶ್ವರ್ಯ

  ಸಿನಿಮಾ ಮಾಡಬೇಡಿ ಎಂದ ಐಶ್ವರ್ಯ

  ಪತ್ನಿಯನ್ನು ಸಿನಿಮಾದಿಂದ ಕೈ ಬಿಟ್ಟ ಕಾರಣ ಅಭಿಷೇಕ್ ಸಹ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ತಾಯಿ ಮಗಳ ಪಾತ್ರಕ್ಕೆ ಹೋಲಿಸಿದರೆ ತಂದೆಯ ಪಾತ್ರಕ್ಕೆ ಹೆಚ್ಚು ಮಹತ್ವವಿಲ್ಲ. ಹಾಗಾಗಿ ನಟಿ ಐಶ್ವರ್ಯ ಪತಿಗೆ ಈ ಸಿನಿಮಾ ಮಾಡಬೇಡಿ ಎಂದು ಹೇಳುತ್ತಾರೆ. ಮನ್ ಮರ್ಜಿಯಾ ಸಿನಿಮಾದಂತಹ ಸ್ಟ್ರಾಂಗ್ ಪಾತ್ರಗಳನ್ನು ಮಾಡಿ, ಈ ರೀತಿಯ ಪಾತ್ರ ಬೇಡವೆಂದು ಸಲಹೆ ನೀಡಿದ್ದಾರಂತೆ. ಹಾಗಾಗಿ ಅಭಿಷೇಕ್ ಈ ಸಿನಿಮಾ ಕೈ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Bollywood Actress Aishwarya Rai said to Abhishek bachchan not to act with Priyanka Chopra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X