For Quick Alerts
  ALLOW NOTIFICATIONS  
  For Daily Alerts

  'ಕುಚ್‌ ಕುಚ್‌ ಹೋತಾ ಹೇ' ಸಿನಿಮಾ ಕೈಬಿಟ್ಟಿದ್ದಕ್ಕೆ ಕಾರಣ ಕೊಟ್ಟ ಐಶ್ವರ್ಯಾ ರೈ

  |

  ಕರಣ್ ಜೋಹರ್ ನಿರ್ದೇಶಿಸಿದ ಮೊದಲ ಸಿನಿಮಾ 'ಕುಚ್‌ ಕುಚ್‌ ಹೋತಾ ಹೈ' ಬಾಲಿವುಡ್‌ನ ದೊಡ್ಡ ಹಿಟ್ ಸಿನಿಮಾಗಳಲ್ಲಿ ಒಂದು. ಆ ಸಿನಿಮಾವನ್ನು ಈಗಲೂ ಉದಾಹರಣೆಯಾಗಿ ಬಳಸಲಾಗುತ್ತದೆ.

  ಈ ಸಿನಿಮಾದ ಪ್ರಮುಖ ಪಾತ್ರ 'ಟೀನಾ'ಗಾಗಿ ಕರಣ್ ಜೋಹರ್ ಹಲವಾರು ನಟಿಯರನ್ನು ಸಂಪರ್ಕಿಸಿದ್ದರು ಅದರಲ್ಲಿ ನಟಿ ಐಶ್ವರ್ಯಾ ರೈ ಸಹ ಒಬ್ಬರು. ಆದರೆ ಐಶ್ವರ್ಯಾ ರೈ ಆ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಆ ಪಾತ್ರ ರಾಣಿ ಮುಖರ್ಜಿ ಪಾಲಾಯಿತು.

  ಈ ಬಗ್ಗೆ ಈಗ ಮಾತನಾಡಿರುವ ಐಶ್ವರ್ಯಾ ರೈ, ಆ ಪಾತ್ರವನ್ನು ನಾನು ಬೇಕೆಂದೇ ಒಪ್ಪಿಕೊಳ್ಳಲಿಲ್ಲ. ಆ ಪಾತ್ರ ನಾನು ಒಪ್ಪಿಕೊಂಡಿದ್ದಿದ್ದರೆ ನನ್ನ ಮೇಲೆ ಟೀಕೆಗಳ ಸುರಿಮಳೆ ಆಗಿರುತ್ತಿತ್ತು. ಮಾಡೆಲಿಂಗ್‌ನಲ್ಲಿ ಮಾಡಿದ್ದನ್ನೆ ಇಲ್ಲಿಯೂ ಮುಂದುರೆಸಿದ್ದಾಳೆ. ಅದೇ ಮಿನಿ ಸ್ಕರ್ಟ್‌ಗಳು, ಗ್ಲಾಮರಸ್ ಮೇಕಪ್, ಅದೇ ಪಾಶ್ಚಿಮಾತ್ಯ ಶೈಲಿ ವರ್ತನೆ ಎಂದು ಬರೆಯುತ್ತಿದ್ದರು ಎಂದಿದ್ದಾರೆ ಐಶ್ವರ್ಯಾ ರೈ.

  'ನಾನಿನ್ನೂ ಆಗಷ್ಟೆ ಹೊಸದಾಗಿ ಸಿನಿಮಾ ಉದ್ಯಮಕ್ಕೆ ಬಂದಿದ್ದೆ. ಆ ಸಿನಿಮಾದಲ್ಲಿ ನಟಿಸಿದ್ದರೆ ನನ್ನನ್ನು ಹಿರಿಯ ನಟ-ನಟಿಯರೊಟ್ಟಿಗೆ ಹೋಲಿಸಿ ನೋಡುತ್ತಿದ್ದರು. ಹಾಗಾಗಿಯೇ ನಾನು ಆ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಅದಕ್ಕೆ ನನಗೆ ಬೇಸರವೇನೂ ಇಲ್ಲ' ಎಂದಿದ್ದಾರೆ ನಟಿ.

  Yash Radhikaರ ಮಗನ ಹೊಸ ವಿಡಿಯೋ ಫುಲ್ ವೈರಲ್ | Filmibeat Kannada

  'ಕುಚ್‌ ಕುಚ್‌ ಹೋತಾ ಹೇ' ಸಿನಿಮಾದ ಟೀನಾ ಪಾತ್ರಕ್ಕಾಗಿ ಕರಣ್ ಮೊದಲು ಟ್ವಿಂಕಲ್ ಖನ್ನಾ ಅನ್ನು ಕೇಳಿದ್ದರು. ಆ ನಂತರ ಊರ್ಮಿಳಾ ಮತೋಡ್ಕರ್ ಮತ್ತು ಟಬು ಅನ್ನು ಸಹ ಕೇಳಿದ್ದರು. ಆದರೆ ಯಾರೂ ಕರಣ್‌ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಕರಣ್ ಒಮ್ಮೆ ಹೇಳಿದ್ದಂತೆ ಯಾರಿಗೂ ಆ ಪಾತ್ರ ಮಾಡಲು ಇಷ್ಟವಿರಲಿಲ್ಲ. ಕತೆ ಕೇಳಿದ ಹಲವು ನಟಿಯರಲ್ಲಿ ಐಶ್ವರ್ಯಾ ರೈ ಒಬ್ಬರೇ ಮತ್ತೆ ನನ್ನನ್ನು ಸಂಪರ್ಕಿಸಿ ತಾವು ಏಕೆ ಆ ಪಾತ್ರ ಮಾಡುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು ಎಂದಿದ್ದರು.

  English summary
  Aishwarya Rai now opens up about why she refuse to act in Kuch Kuch Hota Hai movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X