ಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿ
ನಟಿ ಆಲಿಯಾ ಭಟ್ ನಟಿಸುತ್ತಿರುವ 'ಗಂಗೂಭಾಯಿ ಕಾತಿಯಾವಾಡಿ' ಸಿನಿಮಾಕ್ಕೆ ನಟ ಅಜಯ್ ದೇವಗನ್ ಸಹ ಸೇರಿಕೊಂಡಿದ್ದಾರೆ.
ಮುಂಬೈನ ಮಹಿಳಾ ಡಾನ್‌ಗಳಲ್ಲಿ ಒಬ್ಬರಾಗಿದ್ದ ಗಂಗೂಬಾಯಿ ಕಾತಿಯಾವಾಡ ಅಲಿಯಾಸ್ ಗಂಗೂಬಾಯಿ ಕೋಟೆವಾಲಿ ಜೀವನ ಕುರಿತಾದ ಸಿನಿಮಾ ಇದಾಗಿದ್ದು, ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದಾರೆ.
ಅಜಯ್ ದೇವಗನ್ ಮೊದಲ ಬಾರಿಗೆ ಅಲಿಯಾ ಭಟ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದು, ಗಂಗೂಬಾಯಿ ಕಾತಿಯಾವಾಡ ಸಿನಿಮಾದಲ್ಲಿ ಡಾನ್ ಪಾತ್ರವನ್ನು ಅಜಯ್ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.

ನಟ ಅಜಯ್ ದೇವಗನ್ 22 ವರ್ಷದ ಹಿಂದೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಸಂಜಯ್ ಜೊತೆ ಕೆಲಸ ಮಾಡಲಿದ್ದಾರೆ ಅಜಯ್ ದೇವಗನ್. ಸಂಜಯ್ ನಿರ್ದೇಶಿಸಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಹಮ್ ದಿಲ್ ದೇಚುನೆ ಸನಮ್' ಸಿನಿಮಾ 1999 ರಲ್ಲಿ ಬಿಡುಗಡೆ ಆಗಿತ್ತು.
'ಗಂಗೂಬಾಯಿ ಕಾತಿಯಾವಾಡ' ಸಿನಿಮಾದಲ್ಲಿ ಅಜಯ್ ದೇವಗನ್ ಅವರದ್ದು ಸಣ್ಣ ಪಾತ್ರ ಆಗಿರುತ್ತದೆ. ಸುದ್ದಿಗಳ ಪ್ರಕಾರ ಮುಂಬೈನ ಖ್ಯಾತ ಡಾನ್ ಕರೀಂ ಲಾಲ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಲಿದ್ದಾರಂತೆ.
ನಿಜಜೀವನದಲ್ಲಿ ಕರೀಂ ಲಾಲ್ ಹಾಗೂ ಗಂಗೂಭಾಯಿ ಕಾತಿಯಾವಾಡ ಆತ್ಮೀಯರಾಗಿದ್ದರು. ಕರೀಂ ಲಾಲ್ ಗ್ಯಾಂಗ್‌ನ ಸದಸ್ಯನೊಬ್ಬ ಗಂಗೂಭಾಯಿ ಕಾತಿಯಾವಾಡಗೆ ಸೇರಿದ ವೇಶ್ಯಾಗೃಹದಲ್ಲಿ ಕೆಟ್ಟದಾಗಿ ವರ್ತಿಸಿದ್ದಾಗ ಕರೀಂ ಲಾಲ್‌ಗೆ ಧಮ್ಕಿ ಹಾಕಿದ್ದರಂತೆ ಗಂಗೂಭಾಯಿ. ಆ ನಂತರ ಕರೀಂ ಲಾಲ್, 'ಗಂಗೂಭಾಯಿ ನನ್ನ ತಂಗಿ ಯಾರೂ ಸಹ ಆಕೆಯ ತಂಟೆಗೆ ಹೋಗಬಾರದು' ಎಂದು ಎಚ್ಚರಿಕೆ ನೀಡಿದ್ದರಂತೆ.
Recommended Video
ಈ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ಹಾಗೂ ಡಾ.ಜಯಂತಿ ಗಡಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ಹಿಟ್ ಆಗಿದೆ. ಸಿನಿಮಾವು ಜುಲೈ 30 ರಂದು ಬಿಡುಗಡೆ ಆಗಲಿದೆ.


Click it and Unblock the Notifications











