For Quick Alerts
  ALLOW NOTIFICATIONS  
  For Daily Alerts

  ಮತ್ತೆ ನಿರ್ದೇಶನಕ್ಕಿಳಿದ ಆಕ್ಷನ್ ಹೀರೋ ಅಜಯ್ ದೇವಗನ್, ಅಮಿತಾಬ್ ನಾಯಕ!

  |

  ನಟ ಅಜಯ್ ದೇವಗನ್ ಗೆ ಬಾಲಿವುಡ್‌ನಲ್ಲಿ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಸೇಫ್ ಝೋನ್ ನಟ ಎಂದೇ ಅವರು ಖ್ಯಾತರು.

  ಆಕ್ಷನ್ ಸಿನಿಮಾಗಳ ನಾಯಕ ಅಜಯ್ ದೇವಗನ್, ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡುವುದಿಲ್ಲ. ತಮ್ಮ ಅಭಿಮಾನಿಗಳಿಗೆ ಇಷ್ಟವಾಗುವಂತ ಕೆಲವೇ ರೀತಿಯ ಪಾತ್ರ, ಕತೆಗಳನ್ನಷ್ಟೆ ಆಯ್ಕೆ ಮಾಡಿಕೊಂಡು ಬರುತ್ತಿದ್ದಾರೆ.

  ಆದರೆ ಈ ಸೇಫ್ ನಟ ಅಜಯ್ ದೇವಗನ್, ಮತ್ತೆ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅದುವೇ ನಿರ್ದೇಶನ. ಬ್ಯುಸಿ ನಟರು ನಿರ್ದೇಶನಕ್ಕೆ ಕೈ ಹಾಕುವುದು ಬಹಳ ವಿರಳ. ಅದರಲ್ಲೂ ಆಕ್ಷನ್ ಹೀರೋ, ಮಾಸ್ ಹೀರೋ ಅಜಯ್ ದೇವಗನ್ ಮತ್ತೆ ನಿರ್ದೇಶನಕ್ಕೆ ಇಳಿದಿರುವುದು ಹಲವರಿಗೆ ಆಶ್ಚರ್ಯ ತಂದಿದೆ.

  ಎರಡು ಸಿನಿಮಾ ನಿರ್ದೇಶಿಸಿರುವ ಅಜಯ್ ದೇವಗನ್

  ಎರಡು ಸಿನಿಮಾ ನಿರ್ದೇಶಿಸಿರುವ ಅಜಯ್ ದೇವಗನ್

  ಅಜಯ್ ದೇವಗನ್ ಈ ಹಿಂದೆ ಎರಡು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಆದರೆ ಎರಡೂ ಸಹ ಗೆದ್ದಿಲ್ಲ. ಪತ್ನಿ ಕಾಜಲ್ ನಾಯಕಿಯಾಗಿ, 'ಯು ಮಿ ಔರ್ ಹಮ್' ಹಾಗೂ ಆಕ್ಷನ್ ಸಿನಿಮಾ 'ಶಿವಾಯ' ನಿರ್ದೇಶಿಸಿದ್ದರು. ಈಗ ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

  ನಾಲ್ಕು ವರ್ಷದ ಬಳಿಕ ಅಜಯ್ ನಿರ್ದೇಶನ

  ನಾಲ್ಕು ವರ್ಷದ ಬಳಿಕ ಅಜಯ್ ನಿರ್ದೇಶನ

  ಅಜಯ್ ದೇವಗನ್ ನಾಲ್ಕು ವರ್ಷದ ಬಳಿಕ ನಿರ್ದೇಶನಕ್ಕೆ ಕೈ ಹಾಕಿದ್ದು, ಈ ಬಾರಿ ತಮ್ಮ ಸಿನಿಮಾಕ್ಕೆ ಅಮಿತಾಬ್ ಅವರಿಗೆ ಮುಖ್ಯ ಪಾತ್ರವೊಂದನ್ನು ಮೀಸಲಿಟ್ಟಿದ್ದಾರೆ. ಸಿನಿಮಾವು ವಾಯು ಸೇನೆ ಕುರಿತಾದ ಸಿನಿಮಾ ಆಗಿರಲಿದೆ. ಅಜಯ್ ದೇವಗನ್ ಪೈಲೆಟ್ ಪಾತ್ರದಲ್ಲಿ ಮಿಂಚಲಿದ್ದಾರೆ.

  ಏಳು ವರ್ಷಗಳ ಬಳಿಕ ಒಟ್ಟಿಗೆ ನಟನೆ

  ಏಳು ವರ್ಷಗಳ ಬಳಿಕ ಒಟ್ಟಿಗೆ ನಟನೆ

  ಅಮಿತಾಬ್ ಬಚ್ಚನ್ ಹಾಗೂ ಅಜಯ್ ದೇವಗನ್ ಬರೋಬ್ಬರಿ ಏಳು ವರ್ಷಗಳ ನಂತರ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಮೇಜರ್ ಸಾಬ್, ಖಾಕಿ, ಸತ್ಯಾಗ್ರಹ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಈ ಮೂರು ಸಿನಿಮಾಗಳು ಹಿಟ್ ಆಗಿದ್ದವು.

  ಆರ್‌ಆರ್‌ಆರ್‌ ನಲ್ಲಿ ಅಜಯ್, ಪ್ರಭಾಸ್ ಜೊತೆ ಅಮಿತಾಬ್

  ಆರ್‌ಆರ್‌ಆರ್‌ ನಲ್ಲಿ ಅಜಯ್, ಪ್ರಭಾಸ್ ಜೊತೆ ಅಮಿತಾಬ್

  ತಮ್ಮ ನಿರ್ದೇಶನದ ಸಿನಿಮಾ ಹೊರತುಪಡಿಸಿ, ಆರ್‌ಆರ್‌ಆರ್, ಗೋಲ್‌ ಮಾಲ್ 5, ಮೈದಾನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಅಜಯ್. ಇನ್ನು ಅಮಿತಾಬ್ ತಮ್ಮ ನಟನೆಯ ಬ್ರಹ್ಮಾಸ್ತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಜೊತೆಗೆ ಪ್ರಭಾಸ್ ಹೊಸ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Actor Ajay Devagn directing his third movie. Amithabh Bachchan acting in lead role of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X