For Quick Alerts
  ALLOW NOTIFICATIONS  
  For Daily Alerts

  ಧಾರ್ಮಿಕ ಭಾವನೆಗೆ ಧಕ್ಕೆ: ಸಂಕಷ್ಟದಲ್ಲಿ ಅಜಯ್ ದೇವಗನ್-ಸಿದ್ಧಾರ್ಥ್ ಸಿನಿಮಾ!

  |

  ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ನಟ ಅಜಯ್ ದೇವಗನ್-ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಸಿನಿಮಾ ಗುರಿಯಾಗಿದೆ.

  ಅಜಯ್ ದೇವಗನ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಒಟ್ಟಿಗೆ ನಟಿಸಿದ್ದ 'ಥ್ಯಾಂಕ್ ಗಾಡ್' ಹಿಂದಿ ಸಿನಿಮಾದ ಟ್ರೈಲರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಟ್ರೈಲರ್ ನೋಡಿದ ವಕೀಲ ಹಿಮಾಂಶು ಶ್ರೀವಾಸ್ತವ್ ಎಂಬುವರು ಉತ್ತರ ಪ್ರದೇಶದ ಜಾನ್‌ಪುರದಲ್ಲಿ ಸಿನಿಮಾದ ವಿರುದ್ಧ ದೂರು ದಾಖಲಿಸಿದ್ದಾರೆ.

  ಥ್ಯಾಂಕ್ ಗಾಡ್ ಚಿತ್ರದ ಟ್ರೇಲರ್, ಹಿಂದು ಧರ್ಮವನ್ನು ಅಪಹಾಸ್ಯ ಮಾಡಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅರ್ಜಿದಾರ ಹಿಮಾಂಶು ಶ್ರೀವತ್ಸ ದೂರಿನಲ್ಲಿ ಆರೋಪಿಸಿದ್ದಾರೆ. ಟ್ರೈಲರ್‌ನಲ್ಲಿರುವಂತೆ ಅಜಯ್ ದೇವಗನ್ ಆಧುನಿಕ ಅವತಾರದ ಚಿತ್ರಗುಪ್ತನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ, ಇದು ಹಿಂದು ಧಾರ್ಮಿಕ ಭಾವನೆಗೆ ತಂದಿರುವ ಧಕ್ಕೆ ಎಂದಿರುವ ಅರ್ಜಿದಾರರು, ಭಗವಾನ್ ಚಿತ್ರಗುಪ್ತರನ್ನು ಆಕ್ಷೇಪಕರ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ ಮತ್ತು ಚಿತ್ರಗುಪ್ತನ ಪಾತ್ರಧಾರಿ ಅಸಹ್ಯವಾದ ಜೋಕ್‌ಗಳು ಮತ್ತು ಆಕ್ಷೇಪಾರ್ಹ ಪದಗಳನ್ನು ಬಳಸಿರುವುದನ್ನು ತೋರಿಸಲಾಗಿದೆ ಎಂದು ಶ್ರೀವಾಸ್ತವ್ ಆರೋಪಿಸಿದ್ದಾರೆ.

  'ಥ್ಯಾಂಕ್ ಗಾಡ್' ಸಿನಿಮಾದ ಟ್ರೈಲರ್‌ನಲ್ಲಿ ಭಗವಾನ್ ಚಿತ್ರಗುಪ್ತರನ್ನು ಅಪಮಾನ ಮಾಡಲಾಗಿದೆ ಎಂದಿರುವ ಶ್ರೀವಾಸ್ತವ್, ಚಿತ್ರಗುಪ್ತರನ್ನು ಕರ್ಮಗಳ ದೇವರೆಂದು ಪರಿಗಣಿಸಲಾಗುತ್ತದೆ. ಆತ ಮನುಷ್ಯರ ಪಾಪ-ಪುಣ್ಯಗಳ ಲೆಕ್ಕ ಇಡುತ್ತಾರೆ. ಚಿತ್ರಗುಪ್ತ ದೇವರನ್ನು ಹೀಗೆ ತುಚ್ಛವಾಗಿ ಚಿತ್ರೀಕರಿಸಿರುವುದು ದೇವರಿಗೆ, ಹಿಂದುಗಳ ಧಾರ್ಮಿಕ ಭಾವನೆಗೆ ಮಾಡಿದ ಧಕ್ಕೆ'' ಎಂದಿದ್ದಾರೆ.

  'ದೇವರು ಮತ್ತು ದೇವತೆಗಳನ್ನು ಗೇಲಿ ಮಾಡುವ ಮೂಲಕ ಸಾರ್ವಜನಿಕ ಶಾಂತಿಯನ್ನು ಕದಡಲು ಬಾಲಿವುಡ್‌ನ ಯೋಜಿತ ಪಿತೂರಿ ಇದು' ಎಂದಿರುವ ದೂರುದಾರ ಶ್ರೀವಾಸ್ತವ್, 'ಥ್ಯಾಂಕ್ ಗಾಡ್' ಸಿನಿಮಾದ ನಿರ್ಮಾಪಕ ಮತ್ತು ನಟರ ವಿರುದ್ಧ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನವೆಂಬರ್ 18ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.

  'ಥ್ಯಾಂಕ್ ಗಾಡ್' ಸಿನಿಮಾದಲ್ಲಿ ಅಜಯ್ ದೇವಗನ್ ಚಿತ್ರಗುಪ್ತನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಸೂಟು ಭೂಟು ಧರಿಸಿದ ಆಧುನಿಕ ಚಿತ್ರಗುಪ್ತನ ಪಾತ್ರದಲ್ಲಿ ಅಜಯ್ ಕಾಣಿಸಿಕೊಂಡಿದ್ದಾರೆ. ಅಪಘಾತದಲ್ಲಿ ಮರಣ ಹೊಂದಿದ ವ್ಯಕ್ತಿಯೊಬ್ಬ (ಸಿದ್ಧಾರ್ಥ್ ಮಲ್ಹೋತ್ರಾ) ಯಮಲೋಕಕ್ಕೆ ಹೋದಾಗ ಅವನಿಗೆ ಅವನ ಪಾಪದ ಲೆಕ್ಕಗಳನ್ನು ತೋರಿಸಿ ಮನುಷ್ಯನ ದುರ್ಗುಣಗಳು, ಮನೋವಿಕಾರಗಳು, ಚಂಚಲತೆ ಇನ್ನಿತರೆಗಳ ಬಗ್ಗೆ ಪಾಠ ಕಲಿಸುತ್ತಾನೆ. ಆದರೆ ಇದನ್ನು ಹಾಸ್ಯಮಯವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ.

  ಸಿನಿಮಾದಲ್ಲಿ ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ರಕುಲ್ ಪ್ರೀತ್ ಸಿಂಗ್, ನೋರಾ ಫತೇಹಿ, ಶಾಲಿನಿ ತಾರಕ, ವಿಕ್ರಂ ಕೊಚ್ಚರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವನ್ನು ಇಂದ್ರ ಕುಮಾರ್ ನಿರ್ದೇಶನ ಮಾಡಿದ್ದು, ಅಕ್ಟೋಬರ್ 25 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

  English summary
  Actor Ajay Devgan and Sidharth Malhotra's new movie Thank God is in leagel trouble. A lawyer in Uttar Pradesh filed case on the movie accusing its hurting Hindu's sentiment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X