»   » ಬಾಲಿವುಡ್ ಗೆ ಕ್ರೇಜಿಸ್ಟಾರ್ 'ದೃಶ್ಯಂ' ಚಿತ್ರ ರೀಮೇಕ್

ಬಾಲಿವುಡ್ ಗೆ ಕ್ರೇಜಿಸ್ಟಾರ್ 'ದೃಶ್ಯಂ' ಚಿತ್ರ ರೀಮೇಕ್

Posted By:
Subscribe to Filmibeat Kannada

ಇಡೀ ದಕ್ಷಿಣ ಭಾರತದಲ್ಲಿ ಸದ್ದು ಮಾಡಿದ ಚಿತ್ರ 'ದೃಶ್ಯಂ'. ಮಲಯಾಳಂ ಮೂಲದ ಈ ಚಿತ್ರ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಿಗೆ ರೀಮೇಕ್ ಆಗಿ ಇದೀಗ ಬಾಲಿವುಡ್ ನಲ್ಲೂ ಮೋಡಿ ಮಾಡಲು ಹೊರಟಿದೆ. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪೋಷಿಸಿದ್ದ ಪಾತ್ರಕ್ಕೆ ಹಿಂದಿಯಲ್ಲಿ ಅಜಯ್ ದೇವಗನ್ ಬಣ್ಣಹಚ್ಚುತ್ತಿದ್ದಾರೆ.

ಮಾರ್ಚ್ ತಿಂಗಳಲ್ಲಿ ಗೋವಾದಲ್ಲಿ ಹಿಂದಿ 'ದೃಶ್ಯಂ' ಚಿತ್ರ ಸೆಟ್ಟೇರಲಿದೆ. ಅಜಯ್ ದೇವಗನ್ ಅವರಿಗೆ ಪತ್ನಿಯಾಗಿ ಶ್ರೀಯಾ ಸರನ್ ಅವರು ಅಭಿನಯಿಸಲಿದ್ದಾರೆ. ನಿಶಿಕಾಂತ್ ಕಾಮತ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. [ದೃಶ್ಯ ಚಿತ್ರ ವಿಮರ್ಶೆ]

Ajay Devgn, Shriya in Drishyam remake

ಶ್ರೀಯಾ ಸರನ್ ಒಂದು ಕಡೆ ದಕ್ಷಿಣದ ಚಿತ್ರಗಳಲ್ಲಿ ಇನ್ನೊಂದು ಕಡೆ ಬಾಲಿವುಡ್ ನಲ್ಲಿ ಬ್ಯಾಲೆನ್ಸ್ ಮಾಡುತ್ತಾ ತಮ್ಮ ವೃತ್ತಿ ಬದುಕಿನಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿದ್ದಾರೆ. 'ದೃಶ್ಯ' ಚಿತ್ರದಲ್ಲಿ ಅವರು ಇಬ್ಬರು ಮಕ್ಕಳ ತಾಯಿಯಾಗಿ ಕಾಣಿಸುತ್ತಿದ್ದಾರೆ. ಅಭಿನಯಕ್ಕೆ ಸವಾಲೊಡ್ಡುವ ಪಾತ್ರವನ್ನು ಶ್ರೀಯಾ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಇದೆ.

ಐಜಿಪಿ ಪಾತ್ರವನ್ನು ಎತ್ತರದ ಬೆಡಗಿ ಟಬು ಪೋಷಿಸಲಿದ್ದಾರೆ. ಕೇಬಲ್ ಆಪರೇಟರ್ ಒಬ್ಬ ಒಂದು ಅಪಾಯದ ಸನ್ನಿವೇಶದಿಂದ ತನ್ನ ಮಡದಿ ಮಕ್ಕಳನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದೇ 'ದೃಶ್ಯಂ' ಚಿತ್ರದ ಕಥಾವಸ್ತು. ಮಲಯಾಳಂ ಮೂಲ ಚಿತ್ರದಲ್ಲಿ ಮೋಹನ್ ಲಾಲ್ ಹಾಗೂ ಮೀನಾ ಮುಖ್ಯಭೂಮಿಕೆಯಲ್ಲಿದ್ದಾರೆ.

ಈ ಚಿತ್ರ ರವಿಚಂದ್ರನ್ ಅವರ ವೃತ್ತಿ ಬದುಕಿಗೆ ಹೊರ ತಿರುವು ನೀಡಿದ್ದು ಗೊತ್ತೇ ಇದೆ. ಕ್ರೇಜಿಸ್ಟಾರ್ ಜೊತೆ ನವ್ಯಾ ನಾಯರ್ ಅಭಿನಯಿಸಿದ್ದರು. ಇದೀಗ ಅಜಯ್ ದೇವಗನ್ ಹಾಗೂ ಶ್ರೀಯಾ ಸರನ್ ಅವರ ವೃತ್ತಿ ಬದುಕಿನಲ್ಲೂ ಚಿತ್ರ ತಿರುವು ನೀಡುವ ನಿರೀಕ್ಷೆಗಳಿವೆ.

English summary
The Hindi remake of Drishyam gets set to take off in Goa in March, here's another interesting piece of news on the casting of this thriller. The very attractive Shriya Saran, who balances her career between South Indian cinema and Bollywood, has been signed to play Ajay Devgn's wife in the Nishikant Kamat film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada