»   » ಅಜಯ್, ಕರೀನಾ 'ಸಿಂಗಂ 2' ಚಿತ್ರಕ್ಕೆ ಡೇಟ್ ಫಿಕ್ಸ್

ಅಜಯ್, ಕರೀನಾ 'ಸಿಂಗಂ 2' ಚಿತ್ರಕ್ಕೆ ಡೇಟ್ ಫಿಕ್ಸ್

Posted By:
Subscribe to Filmibeat Kannada

ನಟ ಅಜಯ್ ದೇವಗನ್ ಹಾಗೂ ಕರೀನಾ ಕಪೂರ್ ಮುಖ್ಯಭೂಮಿಯ 'ಸಿಂಗಂ 2' ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೆ 'ಸಿಂಗಂ 2' ಚಿತ್ರ ತಮಿಳಿನಲ್ಲಿ ಬಂದಾಗಿದೆ. ಈಗ ಅದೇ ಚಿತ್ರ ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ. ಇದೇ ಮಾರ್ಚ್ 10ಕ್ಕೆ ಚಿತ್ರ ಸೆಟ್ಟೇರುತ್ತಿದೆ.

ಸದ್ಯಕ್ಕೆ ಈ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಹೊಸ ರಿಯಾಲಿಟಿ ಶೋ 'ಖತ್ರೋನ್ ಕೆ ಖಿಲಾಡಿ'ಯಲ್ಲಿ ಬಿಜಿಯಾಗಿದ್ದಾರೆ. ಅವರು ಈ ಶೋನಲ್ಲಿ ಬಿಜಿಯಾಗಿರುವ ಕಾರಣ ಮಾರ್ಚ್ ನಲ್ಲಿ ಚಿತ್ರವನ್ನು ಆರಂಭಿಸುವುದಾಗಿ ಹೇಳಿದ್ದಾರೆ. ಬಹುತೇಕ ಭಾಗವನ್ನು ಮಹಾರಾಷ್ಟ್ರದಲ್ಲಿ ಚಿತ್ರೀಕರಿಸುವುದಾಗಿ ಹೇಳಿದ್ದಾರೆ. [ಕನ್ನಡಿಗರು ಅಂದ್ರೆ ನಾಯಿಗಳಾ? ಸಿಂಗಂ ಚಿತ್ರದಲ್ಲಿ ಅಪಮಾನ]


'ಸಿಂಗಂ 2' ಚಿತ್ರವನ್ನು ಆಗಸ್ಟ್ 2014ಕ್ಕೆ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಸರಿಸುಮಾರು ರು.20 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ 'ಸಿಂಗಂ 'ಚಿತ್ರ ಬಾಕ್ಸ್ ಆಫೀಸಲ್ಲಿ ರು.140 ಕೋಟಿ ಬಾಚುವ ಮೂಲಕ ಘರ್ಜಿಸಿತ್ತು. ಇದೀಗ ಸಿಂಗಂ 2 ಬಗ್ಗೆಯೂ ಅದೇ ನಿರೀಕ್ಷೆಗಳಿವೆ.

ಸಿಂಗಂ ಚಿತ್ರದಲ್ಲಿ ಅಜಯ್ ದೇವಗನ್ ಅವರಿಗೆ ಕಾಜಲ್ ಅಗರವಾಲ್ ನಾಯಕಿಯಾಗಿದ್ದರು. ಈ ಬಾರಿ ಕರೀನಾ ಕಪೂರ್ ಅವರನ್ನು ಅಖಾಡಕ್ಕೆ ಇಳಿಸಲಾಗಿದೆ. ಪ್ರಕಾಶ್ ರೈ ಅವರು ಪ್ರಮುಖ ಪಾತ್ರ ಪೋಷಿಸಿದ್ದರು. ಚಿತ್ರದಲ್ಲಿ ಕನ್ನಡಿಗರ ಸ್ವಾಭಿಮಾನ ಕೆಣಕುವ ಮೂಲಕ ಚಿತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. (ಏಜೆನ್ಸೀಸ್)

English summary
Ajay Devgn, Kareena Kapoor Khan starrer ‘Singham 2′ is all set to go on floor on March 10. Director Rohit Shetty will soon be hosting the new season of the reality show ‘Khatron Ke Khiladi’ in South Africa and hence, the director will start work for his ambitious directorial only in March.
 
Please Wait while comments are loading...