For Quick Alerts
  ALLOW NOTIFICATIONS  
  For Daily Alerts

  ವಿವಾದದಲ್ಲಿ ಅಜಯ್ ದೇವಗಾನ್ 'ತಾನಾಜಿ' ಚಿತ್ರ: NCPಯಿಂದ ಚಿತ್ರತಂಡಕ್ಕೆ ಬೆದರಿಕೆ

  |

  ಬಾಲಿವುಡ್ ನ ಸ್ಟಾರ್ ನಟ ಅಜಯ್ ದೇವಗನ್ ಮತ್ತು ಪತ್ನಿ ಕಾಜೋಲ್ ಅಭಿನಯದ 'ತಾನಾಜಿ' ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿದೆ. ಇತ್ತೀಚಿಗಷ್ಟೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಶಿವಾಜಿ ಮಹಾರಾಜಾನ ವ್ಯಕ್ತಿತ್ವವನ್ನು ತಮಗೆ ಇಷ್ಟಬಂದಂತೆ ತೋರಿಸಲಾಗಿದೆ. ಇತಿಹಾಸವನ್ನು ತಿರುಚಿರುವುದು ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ ಎಂದು NCP ಆರೋಪ ಮಾಡಿದೆ.

  NCP ಮುಖಂಡ ಜಿತೇಂದ್ರ ಆವ್ಹಾದ್ ಚಿತ್ರದಲ್ಲಿರುವ ದೋಷಗಳನ್ನು ತಕ್ಷಣ ಸರಿಪಡಿಸಬೇಕು, ಇಲ್ಲವಾದರೆ ಈ ವಿಷಯವನ್ನು ವೈಯಕ್ತಿಕವಾಗಿ ನಾನೆ ಹ್ಯಾಂಡಲ್ ಮಾಡಬೇಕಾಗುತ್ತೆ ಎಂದು ಬೆದರಿಕೆ ಹಾಕಿದ್ದಾರೆ. ಅಷ್ಟಕ್ಕೂ ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಅಂತಹ ತಪ್ಪೇನಾಗಿದೆ ಅಂತ ಅಂದ್ಕೋತಿದ್ದೀರಾ?

  ಫುಟ್ ಬಾಲ್ ಕೋಚ್ ಆದ ಅಜಯ್ ದೇವಗನ್ : ಬಾಲಿವುಡ್ ಪ್ರವೇಶಿಸಿದ ಮಹಾನಟಿಫುಟ್ ಬಾಲ್ ಕೋಚ್ ಆದ ಅಜಯ್ ದೇವಗನ್ : ಬಾಲಿವುಡ್ ಪ್ರವೇಶಿಸಿದ ಮಹಾನಟಿ

  ಜಿತೇಂದ್ರ ಆವ್ಹಾದ್ ಹೇಳುವ ಪ್ರಕಾರ "ಇತಿಹಾಸದ ಘಟನೆಗಳನ್ನು ನಿರ್ದೇಶಕರು ತನಗೆ ಬೇಕಾದ ಹಾಗೆ ತಿರುಚಿ ಸಿನಿಮಾ ಮಾಡಿದ್ದಾರೆ. ಶಿವಾಜಿ ಮಹಾರಾಜರ ಕತ್ತಿಯು ಮಹಿಳೆಯರ ಮುಖದ ಪರದೆಯನ್ನು ರಕ್ಷಿಸಲು ಇದೆ ಎನ್ನುವ ಸಂಭಾಷಣೆ ಇದೆ. ಆದರೆ ಯಾವುದೆ ಮಹಿಳೆ ಮುಖ ಪರದೆ ಹಾಕಿಕೊಂಡು ಬದುಕುವುದು ಶಿವಾಜಿಗೆ ಇಷ್ಟವಿರಲಿಲ್ಲ. ತನ್ನ ತಾಯಿಯನ್ನು ಸತಿ ಸಹಗಮನದಿಂದ ದೂರವಿಟ್ಟಿದ್ದರು. ಮತ್ತು ಮಹಿಳೆಯರಿಗೆ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು. ಶಿವಾಜಿ ಮಹಾರಾಜ ಇತಿಹಾಸದ ಅತ್ಯಂತ ಪ್ರಗತಿಪರ ಸಾಮ್ರಾಟ" ಎಂದು ಎನ್ ಸಿ ಪಿ ಮುಖಂಡ ಹೇಳಿದ್ದಾರೆ.

  ಈ ಎಲ್ಲಾ ದೃಶ್ಯಗಳನ್ನು ಸರಿಪಡಿಸಬೇಕು. ಜೊತೆಗೆ ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಬೇಕು ಎಂದು NCP ಮುಖಂಡ ಜಿತೇಂದ್ರ ಆವ್ಹಾದ್ ಪಟ್ಟುಹಿಡಿದಿದ್ದಾರೆ. ಹಾಗಾಗಿ ಚಿತ್ರತಂಡ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ. ತಾನಾಜಿ ಐತಿಹಾಸಿಕ ಚಿತ್ರವಾಗಿದ್ದು, ಚಿತ್ರಕ್ಕೆ ಓಂ ರೌತ್ ಆಕ್ಷನ್ ಹೇಳಿದ್ದಾರೆ. ಅಜಯ್ ದೇವಗನ್ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ನಾಯಕಿಯಾಗಿ ಕಾಜೋಲ್ ಕಾಣಿಸಿಕೊಂಡಿದ್ದಾರೆ. ಚಿತ್ರ ಮರಾಠಿ ಸೇರಿದಂತೆ ಅನೇಕ ಭಾಷೆಯಲ್ಲಿ ತೆರೆಗೆ ಬರುತ್ತಿದೆ.

  English summary
  Bollywood actor Ajay Devgn starrer Historical taanaji movie in trouble. This movie is facing History twisting accuse.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X