»   » ಬಾಬಾ ರಾಮದೇವ್ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ 'ಸಿಂಗಂ'?

ಬಾಬಾ ರಾಮದೇವ್ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ 'ಸಿಂಗಂ'?

Posted By:
Subscribe to Filmibeat Kannada

ಬಾಲಿವುಡ್ ನಟ ಅಜಯ್ ದೇವಗನ್ ಈ ಹಿಂದೆ ಯೋಗ ಗುರು ಬಾಬಾ ರಾಮದೇವ್ ಅವರ ಜೀವನಾಧಾರಿತವಾಗಿ ಟಿವಿ ಶೋ ನಿರ್ಮಾಣ ಮಾಡಲಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಈಗ ಟಿವಿ ಶೋ ಬದಲಾಗಿ ಅವರ ಜೀವನಾಧಾರಿತ ಸಿನಿಮಾ ನಿರ್ಮಾಣಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ.

ಅಂದಹಾಗೆ ಈ ಮೊದಲು ಅಜಯ್ ದೇವಗನ್ ಬಾಬಾ ರಾಮದೇವ್ ರವರ ಜೀವನ ಚರಿತ್ರೆಯನ್ನು ಕಿರುತೆರೆ ಮೇಲೆ ತರಲು ಯೋಜನೆ ರೂಪಿಸಿದ್ದ ವೇಳೆ 'ದಿಲ್ ದಡಕ್ನೆ ದೋ' ಖ್ಯಾತಿಯ ವಿಕ್ರಾಂತ್ ಮೆಸ್ಸಿ ಅವರ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಕಾರಣಾಂತರಗಳಿಂದ ಅವರು ಈ ಯೋಜನೆಯಿಂದ ಹೊರಹೋಗಿದ್ದು, ಈಗ ಅಜಯ್ ದೇವಗನ್ ರವರು ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

Ajay Devgn to Play Baba Ramdev in a Biopic?

ಇನ್ನೊಂದು ವಿಶೇಷತೆ ಎಂದರೆ ಯೋಗ ಗುರು ಬಾಬಾ ರಾಮದೇವ್ ರವರ ಜೀವನಾಧಾರಿತ ಚಿತ್ರದಲ್ಲಿ ಇವರ ಪಾತ್ರವನ್ನು ಅಜಯ್ ದೇವಗನ್ ರವರೇ ನಿರ್ವಹಣೆ ಮಾಡಲಿದ್ದು, ಜೊತೆಗೆ ಅವರೇ ನಿರ್ದೇಶನವನ್ನು ಮಾಡಲಿದ್ದಾರೆ ಎಂದು ಸಹ ತಿಳಿದಿದೆ. ಈ ಹಿಂದೆ 'ಶಿವಾಯ್' ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದ ಅಜಯ್ ದೇವಗನ್ ಗೆ ಎರಡು ಕೆಲಸಗಳನ್ನು ನಿರ್ವಹಿಸುವುದು ಅಷ್ಟು ಕಷ್ಟ ಎನಿಸುವುದಿಲ್ಲ.

ಅಜಯ್ ದೇವಗನ್ ಸದ್ಯದಲ್ಲಿ ಮಿಲನ್ ಲುಥ್ರಿಯ ನಿರ್ದೇಶನದ 'ಬಾದ್‌ಶಾಹೊ' ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ಇಲಿಯಾನ ಡಿ'ಕ್ರುಜ್, ಇಶಾ ಗುಪ್ತಾ ಮತ್ತು ವಿದ್ಯುತ್ ಜಮ್ವಾಲ್ ಮತ್ತು ಇತರರು ಅಭಿನಯಿಸಿದ್ದಾರೆ. ಚಿತ್ರ ಸೆಪ್ಟೆಂಬರ್ 1 ರಂದು ತೆರೆಕಾಣಲಿದೆ.

English summary
Bollywood Actor Ajay Devgn all set to play the coolest godman Baba Ramdev in his Biopic.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada