For Quick Alerts
  ALLOW NOTIFICATIONS  
  For Daily Alerts

  ಅತಿಥಿ ಪಾತ್ರಕ್ಕೆ ಅತೀ ಹೆಚ್ಚು ಕೋಟಿ ಕೋಟಿ ಕೇಳುವ ಬಾಲಿವುಡ್ ಸ್ಟಾರ್‌ಗಳು ಇವರೇ: ಸಂಭಾವನೆ ಎಷ್ಟು?

  |

  ಬಾಲಿವುಡ್‌ ಮಂದಿ ಸತತ ಸೋಲುಗಳಿಂದ ಕಂಗಾಲಾಗಿದ್ದಾರೆ. ಸೂಪರ್‌ಸ್ಟಾರ್‌ಗಳ ಸಿನಿಮಾಗಳೂ ಕೂಡ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿಲ್ಲ. ಆದರೂ, ಅಕ್ಷಯ್ ಕುಮಾರ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ತಾರೆಯರ ಸಂಭಾವನೆಯಲ್ಲೇನು ಇಳಿಕೆ ಕಾಣುತ್ತಿಲ್ಲ.

  ಬಾಲಿವುಡ್‌ ಚಿತ್ರರಂಗ ಯಶಸ್ಸಿನ ಉತ್ತುಂಗದಲ್ಲಿದ್ದಾಗ, ಸೂಪರ್‌ಸ್ಟಾರ್‌ಗಳ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದರು. ಇದೇ ವೇಳೆ ಕೆಲವು ಸಿನಿಮಾಗಳಲ್ಲಿ ಕೆಲವೇ ನಿಮಿಷಗಳು ದರ್ಶನ ಕೊಟ್ಟು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರು.

  ನಟನೆಗೆ ಆಮಿರ್ ಖಾನ್ ಬ್ರೇಕ್: 'ಲಾಲ್ ಸಿಂಗ್ ಚಡ್ಡ' ಸೋಲಿನಿಂದ ಖಡಕ್ ನಿರ್ಧಾರ!ನಟನೆಗೆ ಆಮಿರ್ ಖಾನ್ ಬ್ರೇಕ್: 'ಲಾಲ್ ಸಿಂಗ್ ಚಡ್ಡ' ಸೋಲಿನಿಂದ ಖಡಕ್ ನಿರ್ಧಾರ!

  ಹೀಗೆ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿ ಕೋಟಿ ಕೋಟಿ ಸಂಭಾವನೆ ಪಡೆದ ಬಾಲಿವುಡ್‌ ನಟರ ಪಟ್ಟಿ ಇಲ್ಲಿದೆ. ಹಾಗೇ ಒಂದು ಸಿನಿಮಾ ಎಷ್ಟು ಕೋಟಿ ಸಂಭಾವನೆ ಪಡೆದಿದ್ದಾರೆ ಅನ್ನೋ ಡಿಟೈಲ್ಸ್ ಇಲ್ಲಿದೆ. ಮುಂದೆ ಓದಿ.

  ಅಜಯ್ ದೇವಗನ್

  ಅಜಯ್ ದೇವಗನ್

  ಅಜಯ್ ದೇವಗನ್ ಇತ್ತೀಚೆಗೆ ನಟಿಸಿದ 'ಥ್ಯಾಂಕ್ ಗಾಡ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ. ಮುಂದೆ ತೆರೆಕಾಣಲಿರುವ 'ಮೈದಾನ್' ಸಿನಿಮಾದಲ್ಲಿ ಭಾರತೀಯ ಫುಟ್‌ಬಾಲ್ ತಂಡದ ಕೋಚ್ ಸೈಯ್ಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೂ ದುಬಾರಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದರೆ, ಅತಿಥಿ ಪಾತ್ರಕ್ಕೆ ಅಜಯ್ ಪಡೆಯುವ ಸಂಭಾವನೆಯಷ್ಟು ದುಬಾರಿ ಯಾವ ಸಿನಿಮಾನೂ ಇಲ್ಲ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ ಆಲಿಯಾ ಭಟ್ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ'ಯಲ್ಲಿ ಅಜಯ್ ರಹೀಲ್ ಲಾಲ ಅನ್ನೋ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರಕ್ಕೆ 11 ಕೋಟಿ ರೂ, ಸಂಭಾವನೆ ಪಡೆದಿದ್ದರು. ಅದೇ ರಾಜಮೌಳಿಯ ನಿರ್ದೇಶಿಸಿದ RRR ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವುದಕ್ಕೆ ಬರೋಬ್ಬರಿ 35 ಕೋಟಿ ರೂ. ಸಂಭಾವನೆ ಪಡೆದಿದ್ದರು ಎಂದು ವರದಿಯಾಗಿದೆ.

  ಅಕ್ಷಯ್ ಕುಮಾರ್

  ಅಕ್ಷಯ್ ಕುಮಾರ್

  ಅಕ್ಷಯ್ ಕುಮಾರ್ ಪಡೆಯೋ ಸಂಭಾವನೆ ಕಮ್ಮಿಯೇನಿಲ್ಲ. ಒಂದು ಸಿನಿಮಾಗೆ ಹೆಚ್ಚು ಕಡಿಮೆ 100 ಕೋಟಿ ಹತ್ತಿರ ಸಂಭಾವನೆ ಪಡೆಯುತ್ತಾರೆ. ಹಾಗಂತ ಅತಿಥಿ ಪಾತ್ರದಲ್ಲಿ ನಟಿಸುವುದಕ್ಕೂ ದುಬಾರಿ ಸಂಭಾವನೆ ಪಡೆಯುತ್ತಾರೆ. ಆನಂದ್ ಎಲ್ ರೈ ನಿರ್ದೇಶಿಸಿದ 'ಅತ್ರಂಗಿ ರೇ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರದಲ್ಲಿ ನಟಿಸೋಕೆ ಅಕ್ಷಯ್ ಕುಮಾರ್ ಸುಮಾರು 27 ಕೋಟಿ ರೂ, ಸಂಭಾವನೆ ಪಡೆದಿದ್ದರು.

  ಆಲಿಯಾ ಭಟ್

  ಆಲಿಯಾ ಭಟ್

  RRR ಸಿನಿಮಾ ರಾಜಮೌಳಿ ಆಲಿಯಾ ಭಟ್‌ರನ್ನು ಕರೆದುಕೊಂಡು ಬರಲೇ ಬೇಕು ಅಂತ ನಿರ್ಧರಿಸಿದ್ದರು. ಒಂದಿಷ್ಟು ಪ್ರಯತ್ನಗಳ ಬಳಿಕ ಆಲಿಯಾ RRR ಸೆಟ್ಟಿಗೆ ಎಂಟ್ರಿ ಕೊಟ್ಟಿದ್ದರು. ಇಡೀ ಸಿನಿಮಾದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದು ಕೇವಲ 15 ನಿಮಿಷ ಅಷ್ಟೆನೇ. ಇದಕ್ಕೆ ಆಲಿಯಾ ಭಟ್ ಪಡೆದ ಸಂಭಾವನೆ ಸುಮಾರು 9 ಕೋಟಿ ರೂ. ಎಂದು ವರದಿಯಾಗಿದೆ.

  ಹುಮಾ ಖುರೇಶಿ

  ಹುಮಾ ಖುರೇಶಿ

  'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಮತ್ತೊಬ್ಬ ನಟಿ ಹುಮಾ ಖುರೇಶಿ. ಈ ಸಿನಿಮಾದಲ್ಲಿ ಹುಮಾ ಖುರೇಶಿ 'ದಿಲ್‌ರುಬಾ' ಅನ್ನೋ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡಿನಲ್ಲಿ ಹೆಜ್ಜೆ ಹಾಕುವುದಕ್ಕೆ 2 ಕೋಟಿ ರೂ. ಸಂಭಾವನೆ ಪಡೆದಿದ್ದರು.

  ಶಾರುಖ್ ಖಾನ್

  ಶಾರುಖ್ ಖಾನ್

  ಇನ್ನೊಂದು ಕಡೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಕೂಡ ಇತ್ತೀಚೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆರ್.ಮಾಧವನ್ ನಿರ್ದೇಶಿಸಿ, ನಟಿಸಿದ್ದ 'ರಾಕೆಟ್ರಿ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ, ಈ ಪಾತ್ರಕ್ಕೆ ಒಂದೇ ರೂಪಾಯಿ ಸಂಭಾವನೆ ಪಡೆಯದೆ ನಟಿಸಿದ್ದರು ಎಂದು ಮಾಧವನ್ ಹೇಳಿದ್ದಾರೆ.

  ಸಲ್ಮಾನ್ ಖಾನ್

  ಸಲ್ಮಾನ್ ಖಾನ್

  ಸಲ್ಮಾನ್ ಖಾನ್ ಕೂಡ ಇತ್ತೀಚೆಗ ಚಿರಂಜೀವಿ ನಟಿಸಿದ 'ಗಾಡ್ ಫಾದರ್' ಸಿನಿಮಾದಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಮೆಗಾಸ್ಟಾರ್ ಅತಿಥಿ ಪಾತ್ರಕ್ಕೆ 20 ಕೋಟಿ ರೂ. ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಸಲ್ಮಾನ್ ಖಾನ್ ಹಣ ನಿರಾಕರಿಸಿದ್ದರು ಎನ್ನುವ ಸುದ್ದಿ ಹರಿದಾಡಿತ್ತು.

  vಹಾಲಿವುಡ್ ನೋಡಿ ಕಲಿಬೇಕು ಎಂದ ಅಕ್ಷಯ್‌ಗೆ 'ಕಾಂತಾರ', 'ಕೆಜಿಎಫ್ 2' ನೋಡಿ ಎಂದ ಫ್ಯಾನ್ಸ್!vಹಾಲಿವುಡ್ ನೋಡಿ ಕಲಿಬೇಕು ಎಂದ ಅಕ್ಷಯ್‌ಗೆ 'ಕಾಂತಾರ', 'ಕೆಜಿಎಫ್ 2' ನೋಡಿ ಎಂದ ಫ್ಯಾನ್ಸ್!

  English summary
  Akshay Kumar, Ajay Devgn, Alia Other Bollywood Stars Charging For Cameo Role, Know More.
  Tuesday, November 15, 2022, 18:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X