For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಪಾದದ ಮೇಲೆ ಹರಿದ ಟ್ರಕ್

  By Rajendra
  |
  ಬಾಲಿವುಡ್ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರ ಬಲ ಪಾದದ ಮೇಲೆ ಟ್ರಕ್ ಒಂದು ಹರಿದ ಪರಿಣಾಮ ಅವರಿಗೆ ತೀವ್ರವಾಗಿ ಗಾಯವಾಗಿದೆ. ಈ ಘಟನೆ ಮಂಗಳವಾರ (ಮೇ 21) ನಡೆದಿದೆ. ಕೂಡಲೆ ಅವರನ್ನು ಮುಂಬೈನ ವೆರ್ಸೋವಾದಲ್ಲಿನ ಆಸ್ಪತ್ರೆಗೆ ದಾಖಲಿಸಲಾಯಿತು.

  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಪರೀಕ್ಷಿಸಿದಾಗ ಅವರ ಪಾದದ ಬೆರಳಿನ ಮೂಳೆ ಮುರಿದಿರುವುದು ಖಾತ್ರಿಯಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗಿದೆ. ಫಿಲ್ಮಿ ಸಿಟಿಯಲ್ಲಿ ಚಿತ್ರೀಕರಣ ವೇಳೆ ಈ ಘಟನೆ ಸಂಭವಿಸಿತು ಎಂದು ಮೂಲಗಳು ತಿಳಿಸಿವೆ.

  ಟ್ರಕ್ ಒಂದರ ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಬೇಕಾದರೆ ಈ ಅವಘಡ ಸಂಭವಿಸಿದೆ. ಈ ಸಾಹಸ ಸನ್ನಿವೇಶದ ವೇಳೆ ಚಾಲಕನ ಟೈಮಿಂಗ್ ಮಿಸ್ ಆಗಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಟ್ರಕ್ ಡಿಕ್ಕಿಯಿಂದ ಪಾರಾಗಲು ಅಕ್ಷಯ್ ಕುಮಾರ್ ಎಸ್ಕೇಪ್ ಆಗುವಾಗ ಅವರ ಪಾದ ಟ್ರಕ್ ಟೈರ್ ಅಡಿಗೆ ಸಿಲುಕಿದೆ.

  ಈ ಸಂದರ್ಭದಲ್ಲಿ ಅಕ್ಕಿ ಅವರ ಪತ್ನಿ ಟ್ವಿಂಕಲ್ ಸಹ ಘಟನೆಯ ಸ್ಥಳದಲ್ಲಿದ್ದರು. ತಮ್ಮ ಪತಿಗೆ ಅಪಘಾತವಾದ ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಕ್ಷಯ್ ಕುಮಾರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಅಭಿಮಾನಿಗಳು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದಿವೆ ಆಸ್ಪತ್ರೆ ಮೂಲಗಳು. (ಏಜೆನ್ಸೀಸ್)

  English summary
  A truck ran over Bollywood action hero Akshay Kumar's right foot while shooting a stunt scene at Film City. He was immediately rushed to a hospital in Versova, where he was given first aid, and after tests ruled out fracture, he was discharged.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X