Don't Miss!
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿನಿಮಾ ಮೂಲಕ 'ಲೈಂಗಿಕ ಶಿಕ್ಷಣ' ನೀಡಲು ಹೊರಟ ಅಕ್ಷಯ್ ಕುಮಾರ್
ಲೈಂಗಿಕ ಭಾವನೆ ಉದ್ದೀಪನಗೊಳಿಸುವ, ಮಹಿಳೆಯರನ್ನು ಭೋಗದ ವಸ್ತುಗಳಂತೆ ತೋರುವುದರಲ್ಲಿ ಸಿನಿಮಾ ಮಾಧ್ಯಮವನ್ನು ಮೀರಿಸಿದ ಮಾಧ್ಯಮ ಮತ್ತೊಂದಿಲ್ಲ. ಆದರೆ ಈಗ ಸ್ಟಾರ್ ನಟರೊಬ್ಬರು ಸಿನಿಮಾ ಮೂಲಕವೇ 'ಲೈಂಗಿಕ ಶಿಕ್ಷಣ' ನೀಡಲು ಮುಂದಾಗಿದ್ದಾರೆ.
ಬಾಲಿವುಡ್‌ನ ಸ್ಟಾರ್ ನಟ ಅಕ್ಷಯ್ ಕುಮಾರ್ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಕೆಲವಾರು ಸಾಮಾಜಿಕ ವಿಷಯಗಳ ಬಗ್ಗೆ ಈಗಾಗಲೇ ಸಿನಿಮಾ ಮಾಡಿರುವ ಅಕ್ಷಯ್ ಕುಮಾರ್, ತಮ್ಮ ಮುಂದಿನ ಸಿನಿಮಾ 'ಲೈಂಗಿಕ ಶಿಕ್ಷಣ'ದ ಬಗ್ಗೆ ಆಧರಿಸಿದ್ದಾಗಿದೆ ಎಂದು ಘೋಷಿಸಿದ್ದಾರೆ.
ಸೌದಿನಲ್ಲಿ ನಡೆದಿರುವ ರೆಡ್ ಸೀ ಸಿನಿಮೋತ್ಸವದಲ್ಲಿ ಪಾಲ್ಗೊಂಡಿದ್ದ ಅಕ್ಷಯ್ ಕುಮಾರ್, ಸಿನಿಮೋತ್ಸವದಲ್ಲಿ ನಡೆದ ಸಂವಾದವೊಂದರಲ್ಲಿ ಭಾಗವಹಿಸಿದ್ದು, ಸಂವಾದ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಘೋಷಿಸಿದ್ದಾರೆ.

'ಎಲ್ಲ ಶಾಲೆಗಳು ಲೈಂಗಿಕ ಶಿಕ್ಷಣಕ್ಕೆ ಮಹತ್ವ ನೀಡಬೇಕು'
'ಲೈಂಗಿಕ ಶಿಕ್ಷಣ' ಬಹಳ ಮುಖ್ಯವಾದ ವಿಷಯ. ಬಹಳಷ್ಟು ಕಡೆ ಇದು ಲಭ್ಯವಿಲ್ಲ. ನಾವು ಶಾಲೆಯಲ್ಲಿ ಎಲ್ಲಾ ವಿಷಯಗಳನ್ನು ನಾವು ಕಲಿಯುತ್ತೇವೆ. ಲೈಂಗಿಕ ಶಿಕ್ಷಣವನ್ನು ಪ್ರಪಂಚದ ಎಲ್ಲ ಶಾಲೆಗಳು ವಿದ್ಯಾರ್ಥಿಗಳಿಗೆ ಕಲಿಸಲಿ ಎಂದು ನಾನು ಬಯಸುತ್ತೇನೆ'' ಎಂದಿರುವ ಅಕ್ಷಯ್ ಕುಮಾರ್, ಈ ಬಗ್ಗೆ ನಾನು ಸಿನಿಮಾ ಮಾಡಲಿದ್ದೇನೆ ಆದರೆ ಅದರ ಬಿಡುಗಡೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಏಪ್ರಿಲ್ ಅಥವಾ ಮೇ ತಿಂಗಳಿನಿಂದ ಶುರುವಾಗಲಿದೆ
ಸಿನಿಮಾವು ಏಪ್ರಿಲ್ ಅಥವಾ ಮೇ ತಿಂಗಳಿನಿಂದ ಶೂಟಿಂಗ್ ಪ್ರಾರಂಭವಾಗುವ ಆಗುವ ಸಾಧ್ಯತೆ ಇದೆ. ನಾನು ಈವರೆಗೆ ಮಾಡಿರುವ ಎಲ್ಲ ಸಿನಿಮಾಗಳಿಗಿಂತಲೂ ಅದ್ಭುತವಾದ ಸಿನಿಮಾ ಅದಾಗಿರಲಿದೆ. ಈ ರೀತಿ ಸಂದೇಶ ಇರುವ ಸಿನಿಮಾಗಳನ್ನು ಮಾಡುವುದು ನನಗೆ ಬಹಳ ಇಷ್ಟ. ಈ ರೀತಿಯ ಸಿನಿಮಾಗಳು ದೊಡ್ಡ ಹಿಟ್ ಆಗುವುದಿಲ್ಲ ಆದರೆ ಮನಸ್ಸಿಗೆ ಒಂದು ಸಂತೃಪ್ತಿಯನ್ನು ಈ ರೀತಿಯ ಸಿನಿಮಾಗಳು ನೀಡುತ್ತವೆ'' ಎಂದಿದ್ದಾರೆ.

ಟಾಯ್ಲೆಟ್, ಪ್ಯಾಡ್‌ಮ್ಯಾನ್ ಸಿನಿಮಾಗಳಲ್ಲಿ ನಟನೆ
ಅಕ್ಷಯ್ ಕುಮಾರ್ ಕೆಲವು ಸಾಮಾಜಿಕ ವಿಷಯಗಳ ಬಗ್ಗೆ ಈಗಾಗಲೇ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಶೌಚಾಲಯಗಳ ಮಹತ್ವ ಸಾರುವ 'ಟಾಯ್ಲೆಟ್; ಏಕ್ ಪ್ರೇಮ್ ಕತಾ' ಹೆಸರಿನ ಸಿನಿಮಾ ಮಾಡಿದ್ದರು. ಆ ನಂತರ ಸ್ಯಾನಿಟರಿ ನ್ಯಾಪ್ಕಿನ್‌ಗಳ ಮಹತ್ವದ ಬಗ್ಗೆ ಹೇಳುವ 'ಪ್ಯಾಡ್‌ಮ್ಯಾನ್' ಹೆಸರಿನ ಸಿನಿಮಾ ಮಾಡಿದ್ದರು. ಇದೀಗ 'ಲೈಂಗಿಕ ಶಿಕ್ಷಣ'ದ ಕುರಿತಾದ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಹಲವು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಬ್ಯುಸಿ
ಅಕ್ಷಯ್ ಕುಮಾರ್ ಬಾಲಿವುಡ್‌ನ ಅತ್ಯಂತ ಬ್ಯುಸಿ ನಾಯಕ ನಟ. ಈಗಾಗಲೇ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. 2022 ರಲ್ಲಿ ಅಕ್ಷಯ್ ಕುಮಾರ್ ನಟನೆಯ ಐದು ಸಿನಿಮಾ ಬಿಡುಗಡೆ ಆಗಿದ್ದು ಯಾವುದೂ ಸಹ ಹಿಟ್ ಎನಿಸಿಕೊಂಡಿಲ್ಲ. ಇನ್ನು 2023 ರಲ್ಲಿಯೂ ಹಲವು ಸಿನಿಮಾಗಳಲ್ಲಿ ಅಕ್ಷಯ್ ನಟಿಸಲಿದ್ದಾರೆ. ಮಲಯಾಳಂ ಸಿನಿಮಾ ರೀಮೇಕ್ 'ಸೆಲ್ಫಿ' ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ. ಅದಾದ ಬಳಿಕ 'ಓ ಮೈ ಗಾಡ್ 2', ತಮಿಳಿನ 'ಸೂರರೈ ಪೊಟ್ರು' ಸಿನಿಮಾದ ರೀಮೇಕ್‌ನಲ್ಲಿ ಅಕ್ಷಯ್ ನಟಿಸಲಿದ್ದಾರೆ. ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ಜೀವನ ಆಧರಿಸಿದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಗೂರ್ಖಾ ರೆಜಿಮೆಂಟ್‌ನ ಕುರಿತಾದ ಸಿನಿಮಾದಲ್ಲಿಯೂ ಅಕ್ಷಯ್ ನಟಿಸಲಿದ್ದಾರೆ.