For Quick Alerts
  ALLOW NOTIFICATIONS  
  For Daily Alerts

  ಹೆಚ್ಚು ತೆರಿಗೆ ಪಾವತಿಸಿದ ಅಕ್ಷಯ್‌ಗೆ ಭೇಷ್ ಎಂದ ಐಟಿ ಇಲಾಖೆ: ಮೊತ್ತ ಎಷ್ಟು?

  |

  ಅಕ್ಷಯ್ ಕುಮಾರ್ ಬಾಲಿವುಡ್‌ನ ಸ್ಟಾರ್ ನಟ. ಭಾರತದ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರಾಗಿರುವ ಅಕ್ಷಯ್ ವರ್ಷಕ್ಕೆ ಅತಿ ಹೆಚ್ಚು ಸಿನಿಮಾ ಮಾಡುವ ಏಕೈಕ ಸ್ಟಾರ್ ನಟ ಸಹ ಹೌದು.

  ಅಕ್ಷಯ್ ಕುಮಾರ್ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಹಣ ದೋಚುವುದು ಮಾತ್ರವಲ್ಲ ಸ್ವತಃ ಅಕ್ಷಯ್ ಕುಮಾರ್ ಸಹ ಭಾರಿ ಮೊತ್ತದ ಸಂಭಾವನೆಯನ್ನೇ ನಿರ್ಮಾಪಕರಿಂದ ಪಡೆಯುತ್ತಾರೆ.

  ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!

  ವಾರ್ಷಿಕವಾಗಿ ಅತಿ ಹೆಚ್ಚು ಹಣ ಗಳಿಸುವ ವಿಶ್ವ ನಟರ ಪಟ್ಟಿಯಲ್ಲಿ ಸಹ ಅಕ್ಷಯ್ ಕುಮಾರ್ ಹೆಸರಿದೆ. ಫೋರ್ಬ್ಸ್ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಹೆಸರು ಗಳಿಸಿದ ಏಕೈಕ ಭಾರತೀಯ ನಟ ಅಕ್ಷಯ್ ಕುಮಾರ್. ಅಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ಅಕ್ಷಯ್ ಪಡೆಯುತ್ತಾರೆ. ಇದೀಗ ಆದಾಯ ತೆರಿಗೆ ಇಲಾಖೆಯು ಅಕ್ಷಯ್‌ಗೆ ಮೆಚ್ಚುಗೆ ಪತ್ರವನ್ನು ಕಳಿಸಿದ್ದು, ಕಳೆದ ಐದು ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ನಟ ಎಂಬ ಖ್ಯಾತಿಗೆ ಅಕ್ಷಯ್ ಪಾತ್ರರಾಗಿದ್ದಾರೆ.

  ಸೂರ್ಯಗೆ ಶುಭಕೋರಿ ಟ್ವೀಟ್: ದೊಡ್ಡ ಸಿಗ್ನಲ್ ಕೊಡ್ತಾ ಹೊಂಬಾಳೆ ಸಂಸ್ಥೆ?ಸೂರ್ಯಗೆ ಶುಭಕೋರಿ ಟ್ವೀಟ್: ದೊಡ್ಡ ಸಿಗ್ನಲ್ ಕೊಡ್ತಾ ಹೊಂಬಾಳೆ ಸಂಸ್ಥೆ?

  2019 ರಲ್ಲಿ 30 ಕೋಟಿ ತೆರಿಗೆ ಪಾವತಿ

  2019 ರಲ್ಲಿ 30 ಕೋಟಿ ತೆರಿಗೆ ಪಾವತಿ

  ಮೂಲಗಳ ಪ್ರಕಾರ 2019 ರಲ್ಲಿ ಅಕ್ಷಯ್ ಕುಮಾರ್ ಸುಮಾರು 30 ಕೋಟಿ ರುಪಾಯಿ ಹಣವನ್ನು ತೆರಿಗೆಯಾಗಿ ಪಾವತಿಸಿದ್ದರು. ಇನ್ನು ಈ ವಾರ್ಷಿಕ ವರ್ಷದಲ್ಲಿ ಅಕ್ಷಯ್ ಕುಮಾರ್ ಸುಮಾರು 60 ಕೋಟಿ ಹಣವನ್ನು ಆದಾಯ ತೆರಿಗೆ ಹಾಗೂ ಇನ್ನಿತರೆ ತೆರಿಗೆಗಳಾಗಿ ಪಾವತಿಸಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಆದಾಯ ತೆರಿಗೆ ಇಲಾಖೆಯು ಪ್ರಶಂಸಾ ಪತ್ರವನ್ನು ಅಕ್ಷಯ್‌ಕುಮಾರ್‌ಗೆ ಕಳಿಸಿದೆ.

  ಖಾನ್‌ ತ್ರಯರನ್ನು ಹಿಂದಿಕ್ಕಿರುವ ನಟ

  ಖಾನ್‌ ತ್ರಯರನ್ನು ಹಿಂದಿಕ್ಕಿರುವ ನಟ

  ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ಕೆಲವೇ ನಟರಲ್ಲಿ ಅಕ್ಷಯ್ ಕುಮಾರ್ ಸಹ ಒಬ್ಬರು. ಆದರೆ ಖಾನ್‌ ತ್ರವರಿಗಿಂತಲೂ ದುಪ್ಪಟ್ಟು ಆದಾಯ ಗಳಿಸುತ್ತಾರೆ ಅಕ್ಷಯ್ ಅದಕ್ಕೆ ಕಾರಣ ಅವರು ಮಾಡುವ ಸಿನಿಮಾಗಳ ಸಂಖ್ಯೆ. ಖಾನ್ ತ್ರಯರು ವರ್ಷಕ್ಕೆ ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡಿದರೆ ಅಕ್ಷಯ್ ಕುಮಾರ್ ವರ್ಷಕ್ಕೆ ಐದಾರು ಸಿನಿಮಾಗಳಲ್ಲಿ ನಟಿಸಿಬಿಡುತ್ತಾರೆ. ಹಾಗಾಗಿಯೇ ಅಕ್ಷಯ್‌ ಕುಮಾರ್‌ ಬಾಲಿವುಡ್‌ನ ಅತಿ ಹೆಚ್ಚು ಆದಾಯ ಗಳಿಸುವ ನಟ. ವಾರ್ಷಿಕ ಆದಾಯದ ವಿಷಯದಲ್ಲಿ ಖಾನ್‌ ತ್ರಯರು ಅಕ್ಷಯ್‌ ಕುಮಾರ್‌ ಹತ್ತಿರಕ್ಕೆ ಸಹ ಸುಳಿಯಲಾರರು!

  ಅಕ್ಷಯ್ ಕುಮಾರ್ ಸ್ಟೈಲೇ ಬೇರೆ

  ಅಕ್ಷಯ್ ಕುಮಾರ್ ಸ್ಟೈಲೇ ಬೇರೆ

  ಅಕ್ಷಯ್ ಕುಮಾರ್ ಅದೆಷ್ಟು ಬ್ಯುಸಿ ನಟರೆಂದರೆ ಅವರ ನಟನೆಯ ಎರಡು ಸಿನಿಮಾಗಳು ಈ ವರ್ಷ ಈಗಾಗಲೇ ಬಿಡುಗಡೆ ಆಗಿವೆ. ಇನ್ನೂ ನಾಲ್ಕು ಸಿನಿಮಾಗಳು ಬಿಡುಗಡೆಗೆ ಬಹುತೇಕ ತಯಾರಾಗಿವೆ. ನಾಲ್ಕು ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಒಟ್ಟಾರೆ ಅಕ್ಷಯ್ ಕುಮಾರ್ ಒಂದು ನಿಮಿಷವೂ ವ್ಯರ್ಥ ಮಾಡದೆ ಸದಾ ಕೆಲಸದಲ್ಲಿ ಮಗ್ನರಾಗಿರುವ ನಟ. ಅವರ ಚಿತ್ರೀಕರಣದ ಸ್ಟೈಲ್ ಇತರರಿಗಿಂತಲೂ ಭಿನ್ನ. ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆಂದರೆ ಸಿನಿಮಾದ ಚಿತ್ರೀಕರಣ ಮುಂಜಾನೆ 4 ಅಥವಾ 5 ಗಂಟೆಗೆ ಪ್ರಾರಂಭವಾಗಲೇ ಬೇಕು. ಸಂಜೆ 5 ಅಥವಾ ಆರು ಗಂಟೆಯ ಒಳಗೆ ಮುಗಿಯಬೇಕು. ಎಂಟೊಂಬತ್ತು ಗಂಟೆಗೆಲ್ಲ ನಿದ್ದೆ ಮಾಡಿಬಿಡುತ್ತಾರೆ ಅಕ್ಷಯ್.

  ಅಕ್ಷಯ್ ಸಂಭಾವನೆ ಎಷ್ಟು?

  ಅಕ್ಷಯ್ ಸಂಭಾವನೆ ಎಷ್ಟು?

  ಇನ್ನು ಅಕ್ಷಯ್ ಕುಮಾರ್ ಸಿನಿಮಾ ಒಂದಕ್ಕೆ 50 ರಿಂದ 100 ಕೋಟಿ ಸಂಭಾವನೆ ಪಡೆಯುತ್ತಾರೆ. ಕೆಲವೊಮ್ಮೆಯಂತೆ ಸ್ವತಃ ತಮ್ಮ ಸಿನಿಮಾಗಳನ್ನು ನಿರ್ಮಾಣ ಸಹ ಮಾಡುತ್ತಾರೆ. ಸಿನಿಮಾ ಹಿಟ್ ಆದರೆ ಪಡೆದ ಸಂಭಾವನೆಯ ಜೊತೆಗೆ ದುಪ್ಪಟ್ಟು ಲಾಭವೂ ಅಕ್ಷಯ್ ಕುಮಾರ್ ಜೇಬು ಸೇರುತ್ತದೆ. ಇದೀಗ ಅಕ್ಷಯ್ ಕುಮಾರ್ ನಟನೆಯ 'ರಾಮ್ ಸೇತು', 'ರಕ್ಷಾ ಬಂಧನ್', 'ಓಎಂಜಿ 2' ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇದರ ಜೊತೆಗೆ 'ಸೂರರೈ ಪೊಟ್ರು' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಕ್ಯಾಪ್ಸೂಲ್ ಗಿಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಜಸ್ವಂತ್ ಗಿಲ್‌ರ ಜೀವನ ಆಧರಿಸಿದ ಸಿನಿಮಾ. ಜೊತೆಗೆ 'ಗೂರ್ಖಾ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಮ್ರಾನ್ ಅಶ್ಮಿ ಜೊತೆ ನಟಿಸಿರುವ 'ಸೆಲ್ಫಿ' ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಜಾರಿಯಲ್ಲಿದೆ. ಜೊತೆಗೆ 'ಕಟ್‌ಪುತ್ಲಿ' ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Actor Akshay Kumar paid highest tax from last five years. Income Tax department sent an appreciation letter to Akshay Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X