For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಯಲ್ಲಿ 'ಮಿಷನ್ ಮಂಗಲ್' ನಿರ್ದೇಶಕ: ಸಹಾಯ ಹಸ್ತ ಚಾಚಿರುವ ಅಕ್ಷಯ್ ಕುಮಾರ್

  |

  ತಮ್ಮ ಜೊತೆಗೆ ಕೆಲಸ ಮಾಡಿದ ಪ್ರತಿ ನಿರ್ದೇಶಕರ ಜೊತೆಗೂ ಉತ್ತಮ ಒಡನಾಟ ಹೊಂದಿರುವ ನಟ ಅಕ್ಷಯ್ ಕುಮಾರ್. ಆತ್ಮೀಯರು ಕಷ್ಟದಲ್ಲಿ ಸಿಲುಕಿದಾಗ, ಸಹಾಯ ಮಾಡುವಲ್ಲಿ ಸದಾ ಮುಂದಿರುವ ಅಕ್ಷಯ್ ಕುಮಾರ್, 'ಮಿಷನ್ ಮಂಗಲ್' ನಿರ್ದೇಶಕ ಜಗನ್ ಶಕ್ತಿಗೂ ಸಹಾಯ ಹಸ್ತ ಚಾಚಿದ್ದಾರೆ.

  ಖತರೋಂಕೆ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ 'ಮಿಷನ್ ಮಂಗಲ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಜಗನ್ ಶಕ್ತಿ ಸದ್ಯ ಮುಂಬೈನ ಕೋಕಿಲ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಕಳೆದ ಶನಿವಾರ ಸ್ನೇಹಿತರೆಲ್ಲ ಒಟ್ಟಿಗೆ ಸೇರಿದ್ದಾಗ, ದಿಢೀರನೆ ಕುಸಿದು ಬಿದ್ದ ನಿರ್ದೇಶಕ ಜಗನ್ ಶಕ್ತಿ ರವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ, ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಆಪರೇಷನ್ ಬಳಿಕ ಜಗನ್ ಶಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ.

  ಆಸ್ಪತ್ರೆಯಲ್ಲಿ 'ಮಿಷನ್ ಮಂಗಲ್' ಡೈರೆಕ್ಟರ್: ಜಗನ್ ಆರೋಗ್ಯ ಸ್ಥಿತಿ ಗಂಭೀರಆಸ್ಪತ್ರೆಯಲ್ಲಿ 'ಮಿಷನ್ ಮಂಗಲ್' ಡೈರೆಕ್ಟರ್: ಜಗನ್ ಆರೋಗ್ಯ ಸ್ಥಿತಿ ಗಂಭೀರ

  ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿರುವ ಜಗನ್ ಶಕ್ತಿ ಅವರ ಆಸ್ಪತ್ರೆ ಖರ್ಚನ್ನು ಅಕ್ಷಯ್ ಕುಮಾರ್ ಭರಿಸುತ್ತಿದ್ದಾರೆ ಎಂದು ವರದಿ ಆಗಿದೆ. 'ಮಿಷನ್ ಮಂಗಲ್' ನಿರ್ದೇಶಕನ ಜೊತೆಗೆ ಉತ್ತಮ ಸ್ನೇಹ ಹೊಂದಿರುವ ಅಕ್ಷಯ್ ಕುಮಾರ್, ಜಗನ್ ಶಕ್ತಿ ರವರ ವೈದ್ಯಕೀಯ ವೆಚ್ಚ ಪಾವತಿಸುತ್ತಿದ್ದಾರೆ.

  ಅಸಲಿಗೆ, ಜಗನ್ ಶಕ್ತಿ ಕುಸಿದು ಬಿದ್ದಾಗ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದು ಇದೇ ಅಕ್ಷಯ್ ಕುಮಾರ್ ಎನ್ನಲಾಗಿದೆ. ಬಳಿಕ ಜಗನ್ ಶಕ್ತಿ ಕುಟುಂಬದ ಜೊತೆ ನಿಂತು ವೈದ್ಯಕೀಯ ಖರ್ಚನ್ನು ನೋಡಿಕೊಳ್ಳುವಂತೆ ತಮ್ಮ ತಂಡಕ್ಕೆ ಅಕ್ಷಯ್ ಕುಮಾರ್ ಸೂಚಿಸಿದರಂತೆ. ಅಕ್ಷಯ್ ಕುಮಾರ್ ರವರ ಈ ಸಹಾಯ ಮನೋಭಾವಕ್ಕೆ ಅಭಿಮಾನಿಗಳು ಸೆಲ್ಯೂಟ್ ಹೊಡೆಯುತ್ತಿದ್ದಾರೆ.

  ಅಂದ್ಹಾಗೆ, ಜಗನ್ ಶಕ್ತಿ ಬೆಂಗಳೂರಿನ ಹುಡುಗ. 'ಉಗ್ರಂ' ಚಿತ್ರದ ಕಲಾ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಜಗನ್ ಶಕ್ತಿ, ನಿರ್ದೇಶಕ ಆರ್.ಬಾಲ್ಕಿ ಜೊತೆಗೂ ಕೆಲಸ ಮಾಡಿದ್ದಾರೆ. 'ಮಿಷನ್ ಮಂಗಲ್' ಜಗನ್ ಶಕ್ತಿ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ.

  English summary
  Bollywood Actor Akshay Kumar reportedly paying medical bills for Mission Mangal Director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X