For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ತಾಯಿ ಗಂಭೀರ: ಶೂಟಿಂಗ್ ಬಿಟ್ಟು ಯುಕೆಯಿಂದ ಬಂದ ನಟ

  |

  ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ತಾಯಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಹಾಗಾಗಿ, ಅಕ್ಷಯ್ ತಾಯಿಯನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

  ತಾಯಿಯ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆ ಯುಕೆಯಲ್ಲಿದ್ದ ನಟ ಅಕ್ಷಯ್ ಕುಮಾರ್ ಭಾರತಕ್ಕೆ ವಾಪಸ್ ಆಗಿದ್ದಾರೆ. ಚಿತ್ರೀಕರಣ ಅರ್ಧಕ್ಕೆ ಬಿಟ್ಟು ಅಮ್ಮನ ಆರೋಗ್ಯ ವಿಚಾರಿಸಲು ತುರ್ತಾಗಿ ಬಂದಿದ್ದಾರೆ. ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಅವರ ತಾಯಿಯನ್ನು ಮುಂಬೈನ ಹಿರನಂದನಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ (ICU) ಚಿಕಿತ್ಸೆ ನೀಡಲಾಗುತ್ತಿದೆ.

  'ಅಕ್ಷಯ್ ನಿನ್ನ ಬಯೋಪಿಕ್ ಮಾಡ್ಸಪ್ಪಾ, ಕೆನಡಾಗೆ ಎಷ್ಟು ಆಸ್ತಿ ಹೋಗಿದೆ ಗೊತ್ತಾಗುತ್ತೆ''ಅಕ್ಷಯ್ ನಿನ್ನ ಬಯೋಪಿಕ್ ಮಾಡ್ಸಪ್ಪಾ, ಕೆನಡಾಗೆ ಎಷ್ಟು ಆಸ್ತಿ ಹೋಗಿದೆ ಗೊತ್ತಾಗುತ್ತೆ'

  ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿರುವ ಅಕ್ಷಯ್ ಕುಟುಂಬದ ಆಪ್ತರು, ''ಅಮ್ಮ ಅಂದ್ರೆ ಅಕ್ಷಯ್ ಕುಮಾರ್ ಅವರಿಗೆ ಬಹಳ ಪ್ರೀತಿ ಮತ್ತು ಅವರನ್ನು ಬಿಟ್ಟು ದೂರವಿರಲು ಎಂದೂ ಇಷ್ಟಪಡಲ್ಲ. ಶೂಟಿಂಗ್‌ಗಾಗಿ ಯುಕೆಗೆ ಹೋಗಿದ್ದರು. ಈಗ ತಾಯಿಯ ವಿಚಾರ ತಿಳಿದು ಹಿಂತಿರುಗಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.

  ''ಅಮ್ಮನ ಅನಾರೋಗ್ಯದ ಹಿನ್ನೆಲೆ ಚಿತ್ರೀಕರಣ ಅರ್ಧಕ್ಕೆ ಬಿಟ್ಟು ಬಂದಿದ್ದರೂ, ಬಾಕಿ ದೃಶ್ಯಗಳನ್ನು ಚಿತ್ರೀಕರಿಸುವಂತೆ ನಿರ್ಮಾಪಕರಿಗೆ ಸೂಚಿಸಿದ್ದಾರೆ. ತಾನು ಮಾಡುವ ಪ್ರತಿಯೊಂದು ಕೆಲಸದಲ್ಲಿ ಬದ್ಧತೆ ಹೊಂದಿರುತ್ತಾರೆ ಅಕ್ಷಯ್. ತನ್ನನ್ನು ನಂಬಿ ಕೆಲಸ ಮಾಡುತ್ತಿರುವವರು ವೈಯಕ್ತಿಕ ಸವಾಲುಗಳನ್ನು ಹೊರತುಪಡಿಸಿಯೂ ಕೆಲಸ ಮುಂದುವರಿಯುವಂತೆ ನೋಡಿಕೊಳ್ಳುತ್ತಾರೆ'' ಎಂದು ಹೇಳಿದ್ದಾರೆ.

  ಕಳೆದ ಎರಡು ವಾರಗಳಿಂದಲೂ ಅಕ್ಷಯ್ ಕುಮಾರ್ ಲಂಡನ್‌ನಲ್ಲಿದ್ದಾರೆ. 'ಸಿಂಡ್ರೆಲಾ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ರಂಜಿತ್ ಎಂ ತಿವಾರಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ರಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದಾರೆ.

  'ಸಿಂಡ್ರೆಲಾ' ಸಿನಿಮಾ ಹೊರತುಪಡಿಸಿ ಅಕ್ಷಯ್ ಕುಮಾರ್ ಅವರು ಸೂರ್ಯವಂಶಿ, ಬಚ್ಚನ್ ಪಾಂಡೆ, ಪೃಥ್ವಿರಾಜ್, ರಕ್ಷಾ ಬಂಧನ, ಅತ್ರಂಗಿ ರೇ, ರಾಮ ಸೇತು, ಒಎಂಜಿ 2, ಸೇರಿದಂತೆ ಹಲವು ಚಿತ್ರಗಳು ಸಜ್ಜಾಗುತ್ತಿದೆ.

  English summary
  Akshay Kumar is back from UK after his mother became critical and admitted in ICU.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X