For Quick Alerts
  ALLOW NOTIFICATIONS  
  For Daily Alerts

  ಅಲಾ ವೈಕುಂಟಪುರಂಲೋ ಸಿನಿಮಾ ಹಿಂದಿಗೆ ರೀಮೇಕ್, ಈತನೇ ನಾಯಕ!

  |

  ತೆಲುಗಿನ ಸೂಪರ್ ಡೂಪರ್ ಸಿನಿಮಾ 'ಅಲಾ ವೈಕುಂಟಪುರಂಲೋ' ಹಿಂದಿಗೆ ರೀಮೇಕ್ ಆಗುತ್ತಿದೆ. ತೆಲುಗಿನ ಹಲವು ಸೂಪರ್ ಹಿಟ್ ಸಿನಿಮಾಗಳು ಈ ಹಿಂದೆಯೂ ಹಿಂದಿಗೆ ರೀಮೇಕ್ ಆಗಿವೆ.

  KGF Garuda ಖ್ಯಾತಿಯ RamChandra , Chapter 2 ಬಗ್ಗೆ ಹೇಳೋದೇನು - Part 1 | Filmibeat Kannada

  ಸಲ್ಮಾನ್ ಖಾನ್, ಅರ್ಜುನ್ ಕಪೂರ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಇನ್ನೂ ಹಲವು ಸ್ಟಾರ್ ನಟರೇ ತೆಲುಗಿನಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳ ಹಿಂದಿ ರೀಮೇಕ್‌ನಲ್ಲಿ ನಟಿಸಿದ್ದಾರೆ. ಕೆಲವರು ಯಶಸ್ವಿಯೂ ಆಗಿದ್ದಾರೆ.

  ಯೂಟ್ಯೂಬ್‌ನಿಂದ ಅಲ್ಲು ಅರ್ಜುನ್ ಸಿನಿಮಾ ಡಿಲೀಟ್: ಮತ್ತೊಬ್ಬ ನಾಯಕ ನಟನಿಗೆ ಲಾಭ!ಯೂಟ್ಯೂಬ್‌ನಿಂದ ಅಲ್ಲು ಅರ್ಜುನ್ ಸಿನಿಮಾ ಡಿಲೀಟ್: ಮತ್ತೊಬ್ಬ ನಾಯಕ ನಟನಿಗೆ ಲಾಭ!

  ಆದರೆ ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಸಿನಿಮಾವೊಂದು ಹಿಂದಿಗೆ ರೀಮೇಕ್ ಆಗುತ್ತಿದೆ. ಅಲ್ಲು ಅರ್ಜುನ್‌ನ ಹಲವು ಸಿನಿಮಾಗಳು ಹಿಂದಿಗೆ ಡಬ್ ಆಗಿದ್ದವು ಆದರೆ ಮೊದಲ ಬಾರಿಗೆ ರೀಮೇಕ್ ಆಗುತ್ತಿದೆ. ರೀಮೇಕ್ ಸಿನಿಮಾಕ್ಕೆ ನಾಯಕನ ಆಯ್ಕೆಯೂ ಬಹುತೇಕ ಮುಗಿದಿದೆ.

  ಅಲಾ ವೈಕುಂಟಪುರಂಲೋ ಹಿಂದಿ ರೀಮೇಕ್

  ಅಲಾ ವೈಕುಂಟಪುರಂಲೋ ಹಿಂದಿ ರೀಮೇಕ್

  'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ನಾಯಕನಾಗಿ ಕಾರ್ತಿಕ್ ಆರ್ಯನ್ ಅನ್ನು ಆಯ್ಕೆ ಮಾಡಲಾಗಿದೆ. ಕಾರ್ತಿಕ್‌ ಗೆ ಲಾಕ್‌ಡೌನ್ ಅವಧಿಯಲ್ಲಿ ಕತೆ ಹೇಳಲಾಗಿದ್ದು, ಕಾರ್ತಿಕ್ ಸಹ ಒಪ್ಪಿಗೆ ಸೂಚಿಸಿದ್ದಾರೆ. ಲಾಕ್‌ಡೌನ್ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.

  ಭಾರಿ ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್

  ಭಾರಿ ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್

  ಫಿಲಂಫೇರ್ ವರದಿ ಪ್ರಕಾರ, ಅಲಾ ವೈಕುಂಟಪುರಂಲೋ ಸಿನಿಮಾದ ರೀಮೇಕ್‌ನಲ್ಲಿ ನಟಿಸಲು ಕಾರ್ತಿಕ್ ಆರ್ಯನ್ ಬರೋಬ್ಬರಿ 10 ಕೋಟಿ ಪಡೆಯುತ್ತಿದ್ದಾರಂತೆ. ಒತ್ತಾಯ ಹೇರಿ ದೊಡ್ಡ ಮೊತ್ತವನ್ನು ಪಡೆದುಕೊಂಡಿದ್ದಾರೆ ಕಾರ್ತಿಕ್.

  ಪವನ್ ಕಲ್ಯಾಣ್ ಬಳಿಕ ಅಲ್ಲು ಅರ್ಜುನ್ ಕುಟುಂಬದ ಬುಡಕ್ಕೆ ಕೈ ಹಾಕಿದ ರಾಮ್ ಗೋಪಾಲ್ ವರ್ಮಾಪವನ್ ಕಲ್ಯಾಣ್ ಬಳಿಕ ಅಲ್ಲು ಅರ್ಜುನ್ ಕುಟುಂಬದ ಬುಡಕ್ಕೆ ಕೈ ಹಾಕಿದ ರಾಮ್ ಗೋಪಾಲ್ ವರ್ಮಾ

  ಅಲ್ಲು ಅರ್ಜುನ್ ನಿರ್ಮಾಪಕ!

  ಅಲ್ಲು ಅರ್ಜುನ್ ನಿರ್ಮಾಪಕ!

  ಇನ್ನೊಂದು ವಿಶೇಷವೆಂದರೆ ಅಲಾ ವೈಕುಂಟಪುರಂಲೋ ಸಿನಿಮಾದ ಹಿಂದಿ ರೀಮೇಕ್ ಗೆ ಅಲ್ಲು ಅರ್ಜುನ್ ನಿರ್ಮಾಪಕರಾಗಿರಲಿಲ್ಲದ್ದಾರೆ. ಸಿನಿಮಾದ ನಿರ್ದೇಶನವನ್ನು ರೋಹಿತ್ ಧವನ್ ಮಾಡಿದರೆ ಮುಖ್ಯ ನಿರ್ಮಾಣದ ಜವಾಬ್ದಾರಿಯನ್ನು ಏಕ್ತಾ ಕಪೂರ್ ಹಾಗೂ ಅಲ್ಲು ಅರ್ಜುನ್ ಹೊತ್ತಿದ್ದಾರೆ.

  ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ

  ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ

  ಪ್ಯಾರ್‌ ಕಾ ಪಂಚ್‌ನಾಮಾ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ಕಾರ್ತಿಕ್ ಆರ್ಯನ್ ಲವ್ ಆಜ್ ಕಲ್, ಪತಿ ಪತ್ನಿ ಔರ್ ಓ, ಲುಕಾ ಚುಪಿ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಭೂಲ್-ಭುಲಯ್ಯಾ 2, ದೋಸ್ತಾನಾ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  ಯಾವ ಚಿತ್ರವೂ ಮಾಡದ ವಿಶೇಷ ದಾಖಲೆ ಬರೆದ ಅಲ್ಲು ಅರ್ಜುನ್ ನಟನೆಯ 'ಸರೈನೋಡು'ಯಾವ ಚಿತ್ರವೂ ಮಾಡದ ವಿಶೇಷ ದಾಖಲೆ ಬರೆದ ಅಲ್ಲು ಅರ್ಜುನ್ ನಟನೆಯ 'ಸರೈನೋಡು'

  English summary
  Ala Vaikuntapuramlo movie remaking in Hindi. kartik Aaryan playing the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X