'ಸಂಜು' ಸಿನಿಮಾ ನೋಡಿದ್ಮೇಲೆ ಆಲಿಯಾ ಭಟ್ ಹೇಳಿದ್ದೇನು.?

By Harshitha

ಬಾಲಿವುಡ್ ನಟ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಬರೀ ಗೆಳೆಯರಲ್ಲ. ಇಬ್ಬರ ಗೆಳೆತನ ಎಕ್ಸ್ಟ್ರಾ ಸ್ಪೆಷಲ್ ಆಗಿದೆ ಎಂಬ ಗುಸು ಗುಸು ಬಾಲಿವುಡ್ ತುಂಬೆಲ್ಲಾ ಕೇಳಿಬರುತ್ತಿದೆ. ನಟ ರಣ್ಬೀರ್ ಹಾಗೂ ಆಲಿಯಾ ಸದ್ಯ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಹೀಗಿರುವಾಗಲೇ, ನಟಿ ಆಲಿಯಾ ಭಟ್ 'ಸಂಜು' ಸಿನಿಮಾ ನೋಡಿದ್ದಾರೆ. 'ಸಂಜು' ಸಿನಿಮಾದಲ್ಲಿನ ರಣ್ಬೀರ್ ಕಪೂರ್ ಆಕ್ಟಿಂಗ್ ಗೆ ಆಲಿಯಾ ಕ್ಲೀನ್ ಬೌಲ್ಡ್ ಆಗಿದ್ದಾರೆ.

''ಸಂಜು' ಸಿನಿಮಾ ನನ್ನ ಮೆಚ್ಚಿನ ಚಿತ್ರಗಳಲ್ಲೊಂದು'' ಅಂತ ಹೇಳಿರುವ ಆಲಿಯಾ ಭಟ್, ರಣ್ಬೀರ್ ರನ್ನ ಹಾಡಿ ಹೊಗಳಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ...

ಅಚ್ಚುಮೆಚ್ಚಿನ ಸಿನಿಮಾ

ಅಚ್ಚುಮೆಚ್ಚಿನ ಸಿನಿಮಾ

''ಸಂಜು' ಸಿನಿಮಾ ನನಗೆ ತುಂಬಾ ಇಷ್ಟ ಆಯ್ತು. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ನನ್ನ ಅಚ್ಚುಮೆಚ್ಚಿನ 10 ಚಿತ್ರಗಳ ಪಟ್ಟಿಯಲ್ಲಿ 'ಸಂಜು' ಖಂಡಿತ ಅಗ್ರಸ್ಥಾನ ಪಡೆದಿದೆ'' ಎಂದಿದ್ದಾರೆ ನಟಿ ಆಲಿಯಾ ಭಟ್.

ರಣ್ಬೀರ್ ಆಕ್ಟಿಂಗ್ ಸೂಪರ್

ರಣ್ಬೀರ್ ಆಕ್ಟಿಂಗ್ ಸೂಪರ್

''ರಣ್ಬೀರ್ ಕಪೂರ್ ನಟನೆ ಅತ್ಯುತ್ತಮವಾಗಿ ಮೂಡಿಬಂದಿದೆ. ವಿಕ್ಕಿ ಕೌಶಲ್, ಪರೇಶ್ ರಾವಲ್, ಸೋನಂ ಕಪೂರ್ ಕೂಡ ಉತ್ತಮ ಅಭಿನಯ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ತೆರೆಕಂಡ ಅತ್ಯದ್ಭುತ ಸಿನಿಮಾಗಳ ಪೈಕಿ 'ಸಂಜು' ಕೂಡ ಒಂದು'' - ಆಲಿಯಾ ಭಟ್.

ನಿರ್ದೇಶಕರ ಅಭಿಮಾನಿ

ನಿರ್ದೇಶಕರ ಅಭಿಮಾನಿ

''ನಾನು ರಾಜಕುಮಾರ್ ಹಿರಾನಿಯ ದೊಡ್ಡ ಅಭಿಮಾನಿ. ಅವರ ಸಿನಿಮಾ ಯಾವಾಗ ತೆರೆಗೆ ಬರುತ್ತದೋ ಅಂತ ನಾನು ಕಾಯುತ್ತಿರುತ್ತೇನೆ'' ಅಂತ ಹೇಳಿದ್ದಾರೆ ನಟಿ ಆಲಿಯಾ ಭಟ್.

ದಾಖಲೆ ಬರೆಯುತ್ತಿದೆ 'ಸಂಜು'

ದಾಖಲೆ ಬರೆಯುತ್ತಿದೆ 'ಸಂಜು'

ಜೂನ್ 29 ರಂದು ಭಾರತದಾದ್ಯಂತ ತೆರೆಗೆ ಬಂದ ಸಿನಿಮಾ 'ಸಂಜು' ಭರ್ಜರಿ ಓಪನ್ನಿಂಗ್ ಪಡೆದುಕೊಂಡಿದೆ. 'ಸಂಜು' ಚಿತ್ರಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ರಿಲೀಸ್ ಆದ ಮೂರು ದಿನಗಳಲ್ಲಿ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದೆ ಈ ಸಿನಿಮಾ.

More from Filmibeat

English summary
Bollywood Actress Alia Bhat praises Ranbir Kapoor for his acting in 'Sanju'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X