For Quick Alerts
  ALLOW NOTIFICATIONS  
  For Daily Alerts

  ನೆಪೋಟಿಸಂ ಎಫೆಕ್ಟ್: ಅಲಿಯಾ ಭಟ್ 'ಸಡಕ್-2' ಟ್ರೈಲರ್ ಗೆ ಲೈಕ್ಸ್ ಗಿಂತ ಡಿಸ್ ಲೈಕ್ಸ್ ಹೆಚ್ಚು

  |

  ಬಾಲಿವುಡ್ ನಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಬಾಲಿವುಡ್ ನ ಪ್ರಭಾವಿ ವ್ಯಕ್ತಿಗಳ ವಿರುದ್ಧ ನೆಪೋಟಿಸಂ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್, ಮಹೇಶ್ ಭಟ್, ಆದಿತ್ಯ ಚೋಪ್ರಾ, ಅಲಿಯಾ ಭಟ್ ಸೇರಿದ್ದಂತೆ ಸಾಕಷ್ಟು ಮಂದಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡು, ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದಾರೆ.

  Kanaka , Duniya Vijay ತೆರೆ ಹಿಂದಿನ ಶ್ರಮ | Filmibeat Kannada

  ಈ ನಡುವೆ ರಿಲೀಸ್ ಮಹೇಶ್ ಭಟ್ ನಿರ್ದೇಶನದ ಅಲಿಯಾ ಭಟ್ ಅಭಿನಯದ ಸಡಕ್-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಎರಡು ದಶಕಗಳ ಬಳಿಕ ಮಹೇಶ್ ಭಟ್ ನಿರ್ದೇಶನದ ಸಿನಿಮಾ ಇದಾಗಿದೆ. ಆದರೆ ಈ ಸಿನಿಮಾ ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಲಾಗುತ್ತಿದೆ. ಜೊತೆಗೆ ಸಡಕ್-2 ಸಿನಿಮಾದ ಟ್ರೈಲರ್ ಹೆಚ್ಚು ಡಿಸ್ ಲೈಕ್ ಪಡೆದ ಟ್ರೈಲರ್ ಆಗಿದೆ. ಮುಂದೆ ಓದಿ...

  ನೆಪೋಟಿಸಂ ಆರೋಪ: ಜಾಹ್ನವಿ ಕಪೂರ್ ಸಿನಿಮಾದ ಟ್ರೈಲರ್ ನಲ್ಲಿಲ್ಲ ಕರಣ್ ಜೋಹರ್ ಹೆಸರು

  5.6 ಮಿಲಿಯನ್ ಡಿಸ್ ಲೈಕ್

  5.6 ಮಿಲಿಯನ್ ಡಿಸ್ ಲೈಕ್

  ಸಡಕ್-2 ಟ್ರೈಲರ್ ಅನ್ನು ಇಷ್ಟಪಟ್ಟವರಿಗಿಂತ ಡಿಸ್ ಲೈಕ್ ಮಾಡಿದವರೆ ಹೆಚ್ಚು. ಯೂಟ್ಯೂಬ್ ನಲ್ಲಿ ಟ್ರೈಲರ್ 5.6 ಮಿಲಿಯನ್ ಡಿಸ್ ಲೈಕ್ ಪಡೆದಿದೆ. ಕಾರಣ ಕೇಳಿದ್ರೆ ಸ್ವಜನಪಕ್ಷಪಾತದ ಎಫೆಕ್ಟ್ ಎಂದು ಹೇಳಲಾಗುತ್ತಿದೆ. ಯೂಟ್ಯೂಬ್ ನಲ್ಲಿ ಹೆಚ್ಚು ಡಿಸ್ ಲೈಕ್ ಪಡೆದ 10 ಟ್ರೈಲರ್ ಗಳಲ್ಲಿ ಸಡಕ್-2 ಏಳನೇ ಸ್ಥಾನದಲ್ಲಿದೆ.

  ಸಿನಿಮಾ ಕುಟುಂಬದ ಟ್ರೈಲರ್

  ಸಿನಿಮಾ ಕುಟುಂಬದ ಟ್ರೈಲರ್

  ಸಿನಿಮಾದಲ್ಲಿದ್ದವರು ಬಹುತೇಕರು ಸಿನಿಮಾ ಹಿನ್ನಲೆ ಇದ್ದವರು. ಹಾಗಾಗಿ ಸಿನಿಮಾ ಬಹಿಷ್ಕರಿಸುವಂತೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ನೆಟ್ಟಿಗರು ಹೇಳುತ್ತಿದ್ದಂತೆ ಈ ಸಿನಿಮಾದಲ್ಲಿ ಮಹೇಶ್ ಭಟ್, ಅಲಿಯಾ ಭಟ್, ಆದಿತ್ಯ ರಾಯ್, ಪೂಜಾ ಭಟ್, ಸಂಜಯ್ ದತ್, ಮುಖೇಶ್ ಭಟ್ ಎಲ್ಲರೂ ಸಿನಿಮಾ ಕುಟುಂಬಕ್ಕೆ ಸೇರಿದವರೇ ಆಗಿದ್ದಾರೆ. ಹಾಗಾಗಿ ಈ ಟ್ರೈಲರ್ ಗೆ ಭಾರಿ ವಿರೋದ ವ್ಯಕ್ತವಾಗುತ್ತಿದೆ.

  ಆಲಿಯಾ ಭಟ್, ಮಹೇಶ್ ಭಟ್ ಸಿನಿಮಾ ಬಹಿಷ್ಕಾರಕ್ಕೆ ಒತ್ತಾಯ

  'ಗುಂಜನ್ ಸಕ್ಸೇನಾ' ಸಿನಿಮಾದಿಂದ ಹೆಸರು ತೆಗೆದುಹಾಕಿದ್ದ ಕರಣ್

  'ಗುಂಜನ್ ಸಕ್ಸೇನಾ' ಸಿನಿಮಾದಿಂದ ಹೆಸರು ತೆಗೆದುಹಾಕಿದ್ದ ಕರಣ್

  ಕೇವಲ ಸ್ಟಾರ್ ಮಕ್ಕಳನ್ನೇ ಪರಿಚಯಿಸುತ್ತಿದ್ದಾರೆ, ಹೊರಗಿನಿಂದ ಬಂದವರನ್ನು ತುಳಿಯುತ್ತಿದ್ದಾರೆ ಎನ್ನುವ ಆರೋಪ ಕರಣ್ ಎದುರಿಸುತ್ತಿದ್ದಾರೆ. ಹಾಗಾಗಿ ಇತ್ತೀಚಿಗೆ ರಿಲೀಸ್ ಆದ ಗುಂಜನ್ ಸಕ್ಸೇನಾ ಸಿನಿಮಾದಿಂದ ತಮ್ಮ ಹೆಸರನ್ನೆ ತೆಗೆದು ಹಾಕಿದ್ದಾರೆ. ಕರಣ್ ಹೆಸರು ಕೇಳಿದರೆ ಸಾಕು ಸಿಡಿದುಬೀಳುತ್ತಿರುವ ಈ ಸಮಯದಲ್ಲಿ, ಇನ್ನೂ ಕರಣ್ ಸಿನಿಮಾ ಬರ್ತಿದೆ ಅಂದರೆ ಸುಮ್ಮನಿರಲು ಸಾಧ್ಯವೆ ಇಲ್ಲ. ಹಾಗಾಗಿ ಸಿನಿಮಾದಿಂದ ಕರಣ್ ಹೆಸರನ್ನು ತೆಗೆಯುವುದೇ ಉತ್ತಮ ಎಂದು ನಿರ್ಧರಿಸಿ ನಿರ್ಮಾಣ ಸಂಸ್ಥೆಯ ಹೆಸರನ್ನು ತೆಗೆದುಹಾಕಲಾಗಿತ್ತು.

  ಆಗಸ್ಟ್ 28ಕ್ಕೆ ಸಿನಿಮಾ ರಿಲೀಸ್

  ಆಗಸ್ಟ್ 28ಕ್ಕೆ ಸಿನಿಮಾ ರಿಲೀಸ್

  ಸಡಕ್-2 ಈ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಿನಿಮಾ ಬಹಿಷ್ಕರಿಸುವಂತೆ ಟ್ರೆಂಡ್ ಮಾಡಲಾಗುತ್ತಿದೆ. ವ್ಯಾಪಕ ಖಂಡನೆಯ ನಡುವೆಯೂ ಸಿನಿಮಾ ಇದೆ ತಿಂಗಳು ಆಗಸ್ಟ್ 28ಕ್ಕೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗುತ್ತಿದೆ. ಇನ್ನೂ ಹಾಟ್ ಸ್ಟಾರ್ ಅನ್ನು ಅನ್ ಇನ್ಸ್ಟಾಲ್ ಮಾಡುವಂತೆಯೂ ಟ್ರೆಂಡ್ ಮಾಡುತ್ತಿದ್ದಾರೆ.

  English summary
  Actress Alia Bhatt starrer sadak-2 trailer becomes most disliked trailer on youtube over 5.6 dislike.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X