For Quick Alerts
  ALLOW NOTIFICATIONS  
  For Daily Alerts

  ಅಂಡರ್ ವಾಟರ್ ನಲ್ಲಿ ಹಾಟ್ ಅವತಾರ ತಾಳಿದ ನಟಿ ಅಲಿಯಾ ಭಟ್

  |

  ಬಾಲಿವುಡ್ ನಟಿ ಅಲಿಯಾ ಭಟ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳ ಜೊತೆಗೆ, ರಣಬೀರ್ ಕಪೂರ್ ಜೊತೆ ಮದುವೆ ವಿಚಾರವಾಗಿಯೂ ಸದ್ದು ಸುದ್ದಿ ಮಾಡುತ್ತಿದ್ದ ಅಲಿಯಾ, ಈಗ ಅಂಡರ್ ವಾಟರ್ ಹಾಟ್ ಫೋಟೋ ಶೂಟ್ ಮೂಲಕ ಯುವಕರ ನಿದ್ದೆ ಗೆಡಿಸುತ್ತಿದ್ದಾರೆ.

  ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅಲಿಯಾ ಬಾಲಿವುಡ್ ನ ಟಾಪ್ ನಾಯಕಿಯರ ಸಾಲಿನಲ್ಲಿದ್ದಾರೆ. ಸದಾ ಸುದ್ದಿಲ್ಲಿರುವ ಅಲಿಯಾ ಈಗ ಅಂಡರ್ ವಾಟರ್ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿಗೆ ಅಲಿಯಾ ಮ್ಯಾಗಜಿನ್ ಒಂದಕ್ಕೆ ಫೋಟೋ ಶೂಟ್ ಮಾಡಿಸಿದ್ದಾರೆ. ಬಿಕಿನಿ ಧರಿಸಿ ನೀರಿನೊಳಗೆ ಹಾಟ್ ಅವತಾರ ತಾಳಿರುವ ಅಲಿಯಾ ನೋಡಿ ಅಭಿಮಾನಿಗಳು ಫಿದಾ ಆದ್ದಾರೆ.

  'ಭಾರತಕ್ಕಿಂತ ಪಾಕಿಸ್ತಾನದಲ್ಲಿ ಸಂತೋಷವಾಗಿರುತ್ತೇನೆ' ವಿವಾದ ಸೃಷ್ಟಿಸಿದ ಅಲಿಯಾ ತಾಯಿ ಹೇಳಿಕೆ'ಭಾರತಕ್ಕಿಂತ ಪಾಕಿಸ್ತಾನದಲ್ಲಿ ಸಂತೋಷವಾಗಿರುತ್ತೇನೆ' ವಿವಾದ ಸೃಷ್ಟಿಸಿದ ಅಲಿಯಾ ತಾಯಿ ಹೇಳಿಕೆ

  ಭಿನ್ನ ವಿಭಿನ್ನ ಕಾಸ್ಟ್ಯೂಮ್ ಗಳಲ್ಲಿ ತರಹೇವಾರಿ ಪೋಸ್ ನೀಡಿರುವ ಅಲಿಯಾ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ ಹರಿದು ಬರುತ್ತಿವೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲಿಯಾ ಭಟ್ ಸದ್ಯ ಬ್ರಹ್ಮಾಸ್ತ್ರ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಸಡಕ್-2 ಮತ್ತು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಅಲಿಯಾ ಇದೆ ವರ್ಷ ಕೊನೆಯಲ್ಲಿ ನಟ ರಣಬೀರ್ ಕಪೂರ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ, ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇತ್ತೀಚಿಗೆ ಅಲಿಯಾ ಮತ್ತು ರಣಬೀರ್ ಕಪೂರ್ ಫೇಕ್ ಮದುವೆ ಪತ್ರಿಕೆ ವೈರಲ್ ಆಗಿತ್ತು.

  English summary
  Bollywood actress Alia Bhatt under water photoshoot gone viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X