»   » ಪ್ರಭಾಸ್ ಬಗ್ಗೆ ಆಲಿಯಾ ಭಟ್ ಗೆ ಶುರುವಾಗಿದೆ ಕನಸು!

ಪ್ರಭಾಸ್ ಬಗ್ಗೆ ಆಲಿಯಾ ಭಟ್ ಗೆ ಶುರುವಾಗಿದೆ ಕನಸು!

Posted By:
Subscribe to Filmibeat Kannada

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸಿನಿಮಾ ನೋಡಿ ದೇಶದ ದೊಡ್ಡ ದೊಡ್ಡ ಸಿನಿಮಾ ತಾರೆಯರೆಲ್ಲಾ ಮೆಚ್ಚಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ನಟಿಸಿರುವ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಗೆ ವಿಶ್ವದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.[90ರ ದಶಕದ ಬ್ಲಾಕ್ ಬಸ್ಟರ್ ಸಿನಿಮಾ ಸೀಕ್ವೆಲ್ ನಲ್ಲಿ ಆಲಿಯಾ ಭಟ್?]

Alia Bhatt wants to work with tollywood actor Prabhas

'ಬಾಹುಬಲಿ-2' ಚಿತ್ರ ನೋಡಿ ಬಾಲಿವುಡ್ ನಟಿ ಆಲಿಯಾ ಬಟ್, "ಈ ದೈತ್ಯ ಮಹಾಕಾವ್ಯಕ್ಕೆ ಹೊಸ ಪದವನ್ನು ನೀಡಬೇಕು... ರಾಕ್ ಬಸ್ಟರ್? :)" ಎಂದು ಟ್ವೀಟ್ ಮಾಡಿದ್ದರು. ಚಿತ್ರದ ನಿರ್ದೇಶನಕ್ಕೆ ಎಸ್.ಎಸ್.ರಾಜಮೌಳಿಯನ್ನು ಹೊಗಳಿದ್ದ ಆಲಿಯಾ ಭಟ್, ಈಗ ನಟ ಪ್ರಭಾಸ್ ಕುರಿತಂತೆ ಕುತೂಹಲಕಾರಿ ಮಾಹಿತಿಯೊಂದನ್ನು ಹೇಳಿದ್ದಾರೆ.

Alia Bhatt wants to work with tollywood actor Prabhas

'ಡಾರ್ಲಿಂಗ್' ಪ್ರಭಾಸ್ ಬಾಲಿವುಡ್ ಬೆಡಗಿ ಆಲಿಯಾ ಭಟ್ ರವರ ದಕ್ಷಿಣ ಭಾರತದ ಅಚ್ಚುಮೆಚ್ಚಿನ ನಟನಂತೆ. ಅಲ್ಲದೇ ಆಲಿಯಾ ಪ್ರಭಾಸ್ ಅಭಿಮಾನಿಯಂತೆ. 'ಬಾಹುಬಲಿ' ಚಿತ್ರದಲ್ಲಿ ಪ್ರಭಾಸ್ ಅಭಿನಯ ನೋಡಿ ಪ್ರೇರಣೆ ಗೊಂಡಿರುವ ಆಲಿಯಾ ಅವರೊಂದಿಗೆ ನಟಿಸಬೇಕೆಂಬ ಆಸೆಯನ್ನು ಹೊರಹಾಕಿದ್ದಾರೆ. ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರು 'ಪ್ರಭಾಸ್ ಜೊತೆ ನಟಿಸುವ ಆಸೆ ಇದೆಯಾ?' ಎಂಬ ಪ್ರಶ್ನೆಗೆ ಆಲಿಯ ಭಟ್ ರವರು ಪ್ರಭಾಸ್ ಜೊತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

Alia Bhatt wants to work with tollywood actor Prabhas

24 ವರ್ಷದ ಆಲಿಯಾ ಭಟ್ ಪ್ರಸ್ತುತ 'ಡ್ರ್ಯಾಗನ್' ಮತ್ತು 'Gully Boy' ಚಿತ್ರಗಳಲ್ಲಿ ಬಿಜಿ ಆಗಿದ್ದಾರೆ. 'ಡ್ರ್ಯಾಗನ್' ಚಿತ್ರದಲ್ಲಿ ರಣಬೀರ್ ಕಪೂರ್ ಅಭಿನಯಿಸುತ್ತಿದ್ದು ಈ ಚಿತ್ರದ ಬಗ್ಗೆ ಆಲಿಯಾ ಭಟ್ ಹೆಚ್ಚು ಕುತೂಹಲ ಹೊಂದಿದ್ದಾರೆ.

English summary
Bollywood Actress Alia Bhatt has praised filmmaker S.S. Rajamoulis magnum opus 'Baahubali 2: The Conclusion' and says she is keen to work with its lead actor Prabhas.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X